Home Shivamogga Sagara ಯಡೇಹಳ್ಳಿ ಕಾಲೇಜಿನಲ್ಲಿ ಸೆ.12ಕ್ಕೆ ಬೃಹತ್ ರಕ್ತದಾನ ಶಿಬಿರ; ಜೀವ ಉಳಿಸಲು ವಿದ್ಯಾರ್ಥಿಗಳ ಹೆಜ್ಜೆ..!!

ಯಡೇಹಳ್ಳಿ ಕಾಲೇಜಿನಲ್ಲಿ ಸೆ.12ಕ್ಕೆ ಬೃಹತ್ ರಕ್ತದಾನ ಶಿಬಿರ; ಜೀವ ಉಳಿಸಲು ವಿದ್ಯಾರ್ಥಿಗಳ ಹೆಜ್ಜೆ..!!

0
11

ಸಾಗರ (ಆನಂದಪುರ): ಯಡೇಹಳ್ಳಿ ಜ್ಞಾನ ಸಹ್ಯಾದ್ರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಸೆ.12ರಂದು ಶನಿವಾರ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಆರ್. ಗಣೇಶ್ ತಿಳಿಸಿದರು.

ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜ್ಞಾನ ಸಹ್ಯಾದ್ರಿ ಪ್ರಥಮ ದರ್ಜೆ ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆ ಘಟಕ, ಸಮುದಾಯ ಆರೋಗ್ಯ ಕೇಂದ್ರ, ರಕ್ತನಿಧಿ ಹಾಗೂ ಮೆಗಾನ್ ಬೋಧನಾ ಆಸ್ಪತ್ರೆ ಶಿವಮೊಗ್ಗ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಶಿಬಿರ ನಡೆಯಲಿದೆ ಎಂದು ಹೇಳಿದರು.

ಕಾಲೇಜಿನ ವಿದ್ಯಾರ್ಥಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಲಿದ್ದಾರೆ.

ಶಾಸಕ ಗೋಪಾಲಕೃಷ್ಣ ಬೇಳೂರು ಶಿಬಿರವನ್ನು ಉದ್ಘಾಟಿಸಲಿದ್ದು, ಪ್ರಾಂಶುಪಾಲ ಡಾ. ಆರ್. ಗಣೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾಲೇಜಿನ ಕಾರ್ಯದರ್ಶಿ ಡಾ. ಆರ್. ಸುರೇಶ್, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಾಗೂ ರಂಗಭೂಮಿ ಕಲಾವಿದೆ ಹೆಚ್. ಪಣಿಯಮ್ಮ, ಸ್ಥಳೀಯ ಜಾನಪದ ಕಲಾವಿದ ನಾಗರಾಜ್ ತೊಂಬ್ರರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸೆ.11ಕ್ಕೆ ಆಕಾಶವಾಣಿ ‘ಕ್ಯಾಂಪಸ್ ಕಟ್ಟೆ’ ಕಾರ್ಯಕ್ರಮ

ಸೆ.11ರಂದು ಶುಕ್ರವಾರ ಬೆಳಗ್ಗೆ 10 ಗಂಟೆಗೆ ಯಡೇಹಳ್ಳಿ ಜ್ಞಾನ ಸಹ್ಯಾದ್ರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಆಕಾಶವಾಣಿ ಭದ್ರಾವತಿ ವತಿಯಿಂದ ‘ಕ್ಯಾಂಪಸ್ ಕಟ್ಟೆ’ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವು ಕಾಲೇಜಿನ ಆವರಣದಿಂದಲೇ ನೇರ ಪ್ರಸಾರಗೊಳ್ಳಲಿದೆ ಎಂದು ಪ್ರಾಂಶುಪಾಲರು ತಿಳಿಸಿದರು.

NO COMMENTS