Home Shivamogga ಗೌತಮಪುರ ಸಹಕಾರ ಸಂಘದ ಅಧ್ಯಕ್ಷ ಮಂಜುನಾಥ್ ಕೆ.ಎಚ್. ಅವರಿಗೆ ಜಿಲ್ಲಾ ಮಟ್ಟದ ಶ್ರೇಷ್ಠ ಸಹಕಾರಿ ಪ್ರಶಸ್ತಿ..

ಗೌತಮಪುರ ಸಹಕಾರ ಸಂಘದ ಅಧ್ಯಕ್ಷ ಮಂಜುನಾಥ್ ಕೆ.ಎಚ್. ಅವರಿಗೆ ಜಿಲ್ಲಾ ಮಟ್ಟದ ಶ್ರೇಷ್ಠ ಸಹಕಾರಿ ಪ್ರಶಸ್ತಿ..

0
7

73ನೇ ರಾಜ್ಯಮಟ್ಟದ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಗೌರವ ಪ್ರದಾನ

ಶಿವಮೊಗ್ಗ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಗೌತಮಪುರ ಇದರ ಹಾಲಿ ಅಧ್ಯಕ್ಷರಾದ ಮಂಜುನಾಥ್ ಕೆ.ಎಚ್. ಅವರಿಗೆ ಜಿಲ್ಲಾ ಮಟ್ಟದ ಶ್ರೇಷ್ಠ ಸಹಕಾರಿ ಪ್ರಶಸ್ತಿ ಲಭಿಸಿದೆ.

ಶಿವಮೊಗ್ಗದಲ್ಲಿ ಇಂದು ನಡೆದ 73ನೇ ರಾಜ್ಯಮಟ್ಟದ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಸಹಕಾರ ಕ್ಷೇತ್ರದಲ್ಲಿನ ಸೇವೆ ಹಾಗೂ ಸಾಧನೆಯನ್ನು ಗುರುತಿಸಿ ಮಂಜುನಾಥ್ ಕೆ.ಎಚ್. ಅವರಿಗೆ ಶ್ರೇಷ್ಠ ಸಹಕಾರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಮಂಜುನಾಥ್ ಅವರು ಮೂಲತಃ ಬೈರಾಪುರದ ನಿವಾಸಿಯಾಗಿದ್ದು ಹುಚ್ಚಪ್ಪ ಮತ್ತು ರಾಮಮ್ಮನ ಪುತ್ರರಾಗಿದ್ದಾರೆ.

ಗೌತಮಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಿಗೆ ಜಿಲ್ಲಾ ಮಟ್ಟದ ಗೌರವ ದೊರೆತಿರುವುದು ಸಂಘದ ಸದಸ್ಯರು, ಸಿಬ್ಬಂದಿ ಹಾಗೂ ಗೌತಮಪುರ ಭಾಗದ ಸಹಕಾರ ಕ್ಷೇತ್ರದವರಿಗೆ ಸಂತಸ ತಂದಿದೆ.

ಈ ಪ್ರಶಸ್ತಿಯ ಮೂಲಕ ಗೌತಮಪುರ ಸಹಕಾರ ಸಂಘದ ಗೌರವ ಜಿಲ್ಲಾಮಟ್ಟದಲ್ಲಿ ಗುರುತಿಸಿಕೊಂಡಂತಾಗಿದೆ.

NO COMMENTS