ಮನೆ ಶಿವಮೊಗ್ಗ ರಾತ್ರಿ ಬಸ್‌ಗಳ ತಪಾಸಣೆ: ಪಿಎಸ್‌ಐ ಪ್ರವೀಣ್ ಬೀಟ್ ಪ್ರದೇಶದಲ್ಲಿ ಪರಿಶೀಲನೆ..!!

ರಾತ್ರಿ ಬಸ್‌ಗಳ ತಪಾಸಣೆ: ಪಿಎಸ್‌ಐ ಪ್ರವೀಣ್ ಬೀಟ್ ಪ್ರದೇಶದಲ್ಲಿ ಪರಿಶೀಲನೆ..!!

33
0

ಆನಂದಪುರ: ನಿನ್ನೆ ರಾತ್ರಿ ಪಿಎಸ್‌ಐ ಪ್ರವೀಣ್ ಅವರು ತಮ್ಮ ವ್ಯಾಪ್ತಿಯಲ್ಲಿ ರಾತ್ರಿ ಸೇವೆಯಲ್ಲಿರುವ ಬಸ್‌ಗಳ ಮೇಲೆ ತಪಾಸಣೆ ನಡೆಸಿದರು.

ರಾತ್ರಿ ವೇಳೆ ಸಂಚರಿಸುವ ಖಾಸಗಿ ಹಾಗೂ ಸರ್ಕಾರಿ ಬಸ್‌ಗಳಲ್ಲಿ ತುರ್ತು ಪರಿಸ್ಥಿತಿಯ ಕಿಟಕಿ ಮತ್ತು ನಿರ್ಗಮನ ದ್ವಾರಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಪರಿಶೀಲಿಸಲಾಯಿತು.

ಅಗ್ನಿ ಅವಘಡ ಅಥವಾ ಅಪಘಾತದಂತಹ ತುರ್ತು ಸಂದರ್ಭಗಳಲ್ಲಿ ಪ್ರಯಾಣಿಕರ ಸುರಕ್ಷತೆ ಪ್ರಮುಖವಾಗಿರುವುದರಿಂದ, ತುರ್ತು ನಿರ್ಗಮನ ವ್ಯವಸ್ಥೆಗಳು ಸುಗಮವಾಗಿ ತೆರೆಯುವಂತೆಯೂ ಯಾವುದೇ ಅಡಚಣೆ ಇಲ್ಲದಂತೆಯೂ ಇರಬೇಕು ಎಂದು ಸೂಚನೆ ನೀಡಿದರು.

ಪರಿಶೀಲನೆ ವೇಳೆ ಕೆಲವು ಬಸ್‌ಗಳಲ್ಲಿ ಸಣ್ಣಪುಟ್ಟ ದೋಷಗಳು ಕಂಡುಬಂದಿದ್ದು, ಅವುಗಳನ್ನು ತಕ್ಷಣ ಸರಿಪಡಿಸಲು ಮಾಲೀಕರು ಮತ್ತು ಸಿಬ್ಬಂದಿಗೆ ಸೂಚಿಸಲಾಯಿತು. ನಿಯಮ ಉಲ್ಲಂಘನೆ ಮಾಡಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಪ್ರಯಾಣಿಕರ ಜೀವಭದ್ರತೆ ದೃಷ್ಟಿಯಿಂದ ಎಲ್ಲಾ ಬಸ್ ಮಾಲೀಕರು, ಚಾಲಕರು ಮತ್ತು ನಿರ್ವಾಹಕರು ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಪಿಎಸ್‌ಐ ಪ್ರವೀಣ್ ತಿಳಿಸಿದ್ದಾರೆ.

✒️..ಅಮಿತ್ ಆರ್ ಆನಂದಪುರ

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t