ಮನೆ Blog ಸ್ಪೆಷಲ್ ಒಲಂಪಿಕ್ಸ್ ರಾಷ್ಟ್ರೀಯ ಹಾಕಿ ಚಾಂಪಿಯನ್‌ಶಿಪ್‌ ಆನಂದಪುರದ ವಿಶೇಷ ಚೇತನ ಮಕ್ಕಳಿಗೆ ಬೆಳ್ಳಿ ಪದಕ..!!

ಸ್ಪೆಷಲ್ ಒಲಂಪಿಕ್ಸ್ ರಾಷ್ಟ್ರೀಯ ಹಾಕಿ ಚಾಂಪಿಯನ್‌ಶಿಪ್‌ ಆನಂದಪುರದ ವಿಶೇಷ ಚೇತನ ಮಕ್ಕಳಿಗೆ ಬೆಳ್ಳಿ ಪದಕ..!!

12
0

ಆನಂದಪುರ: ಆನಂದಪುರದ ವಿಶೇಷ ಚೇತನ ವಿದ್ಯಾರ್ಥಿನಿಯರಾದ ಸ್ನೇಹ ಎಂ ಹಾಗೂ ಸಿಂಧುಜಾ ವಿ.ಡಿ. ಅವರು ಹರಿಯಾಣದ ಫರೀದಾಬಾದ್ ನಲ್ಲಿ ಫೆಬ್ರವರಿ 22ರಿಂದ 26ರವರೆಗೆ ಸ್ಪೆಷಲ್ ಒಲಂಪಿಕ್ಸ್ ಭಾರತ್ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಹಾಕಿ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಬೆಳ್ಳಿ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ಮುಂಗರವಳ್ಳಿಯ ಚೈತನ್ಯ ವಿಶೇಷ ಶಿಕ್ಷಣ ಶಾಲೆಯ ವಿದ್ಯಾರ್ಥಿನಿಯರಾದ ಇವರು ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿದರು. ಸ್ನೇಹ ಎಂ ಅವರು ಸಿದ್ದೇಶ್ವರ ಕಾಲೋನಿಯ ನಿವಾಸಿಯಾಗಿದ್ದು, ಅವರ ತಂದೆ ಮೋಹನ್ ಮತ್ತು ತಾಯಿ ಮಮತಾ. ಸಿಂಧುಜಾ ವಿ.ಡಿ. ಅವರು ಕೊರ್ಲಿಕೊಪ್ಪದ ನಿವಾಸಿಯಾಗಿದ್ದು, ಅವರ ತಂದೆ ದೇವೇಂದ್ರಪ್ಪ ಮತ್ತು ತಾಯಿ ಶಾರದಾ ಅವರು ಮಕ್ಕಳ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಸ್ಪರ್ಧೆಯಲ್ಲಿ ಮಕ್ಕಳಿಗೆ ವಿಶೇಷ ತರಬೇತಿದಾರರಾಗಿ ಚೈತನ್ಯ ಶಾಲೆಯ ಶಿಕ್ಷಕಿ ತುಷಾ ಅವರು ಕೋಚ್ ಆಗಿ ಭಾಗವಹಿಸಿ ಮಾರ್ಗದರ್ಶನ ನೀಡಿದರು.

ಮಕ್ಕಳು ರಾತ್ರೆ ರೈಲಿನಿಂದ ಬಂದ ಕೂಡಲೇ ಶಾಲೆಯವರು ಹಾಗೂ ಸಾರ್ವಜನಿಕರು ಸೇರಿ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭ ದಲ್ಲಿ ಚೈತನ್ಯ ವಿಶೇಷ ಶಿಕ್ಷಣ ಸಂಸ್ಥೆಯ ಶಾಂತಲಾ ಸುರೇಶ್, ಶಾಲಾ ಶಿಕ್ಷಕರು, ಪೋಷಕರು ಹಾಗೂ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.

✒️…ಅಮಿತ್ ಆರ್ ಆನಂದಪುರ

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t