Home Blog ನವಟೂರಿನಲ್ಲಿ ಜಿಂಕೆ ಬೇಟೆ; ಕ್ಷಣಾರ್ಧದಲ್ಲೇ ಸ್ಥಳಕ್ಕಿಳಿದ ವಿನಾಯಕ್ ಟೀಮ್, ಆರೋಪಿ ಬಂಧನ..!!

ನವಟೂರಿನಲ್ಲಿ ಜಿಂಕೆ ಬೇಟೆ; ಕ್ಷಣಾರ್ಧದಲ್ಲೇ ಸ್ಥಳಕ್ಕಿಳಿದ ವಿನಾಯಕ್ ಟೀಮ್, ಆರೋಪಿ ಬಂಧನ..!!

0
6

✒️.. ಅಮಿತ್ ಆರ್ ಆನಂದಪುರ

ಹೊಸನಗರ: ಜಿಂಕೆಯನ್ನು ಶಿಕಾರಿ ಮಾಡಿ ಮಾಂಸ ಮಾಡುತ್ತಿದ್ದ ಆರೋಪಿಯನ್ನು ಅರಣ್ಯ ಸಂಚಾರಿ ದಳದ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ವಿನಾಯಕ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಹೊಸನಗರ ತಾಲ್ಲೂಕಿನ ನವಟೂರು ಗ್ರಾಮದಲ್ಲಿ ಶುಕ್ರವಾರ ಅಕ್ರಮವಾಗಿ ಜಿಂಕೆ ಶಿಕಾರಿ ಮಾಡಿ ಮಾಂಸ ಮಾಡುತ್ತಿದ್ದ ಆರೋಪದ ಮೇರೆಗೆ ನವಟೂರು ಮೂಲದ ಲಿಂಗಪ್ಪ ತಂದೆ ರಾಮಣ್ಣ ಎಂಬಾತನನ್ನು ಬಂಧಿಸಲಾಗಿದೆ.

ಕಾರ್ಯಾಚರಣೆ ವೇಳೆ ಆರೋಪಿಯಿಂದ 34.945 ಕೆಜಿ ಜಿಂಕೆ ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದುಬಂದಿದೆ.

ಅರಣ್ಯ ಸಂಚಾರಿ ದಳದ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ವಿನಾಯಕ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಗಣೇಶ್, ಚಂದ್ರಕಾಂತ್, ಆಂಜನೇಯ ಪಾಟೀಲ್, ಪ್ರಮೋದಿನಿ, ಮಹೇಶ್ ಹಾಗೂ ಹೆಚ್.ಬಿ. ದೊಡ್ಡಮನಿ ಪಾಲ್ಗೊಂಡಿದ್ದರು.

NO COMMENTS