Home Blog ನಿಗಮಮಂಡಳಿ ನೇಮಕಾತಿ: ಶಿವಮೊಗ್ಗ ಜಿಲ್ಲೆಗೆ ಒಲಿದ 10 ಸ್ಥಾನ..!!

ನಿಗಮಮಂಡಳಿ ನೇಮಕಾತಿ: ಶಿವಮೊಗ್ಗ ಜಿಲ್ಲೆಗೆ ಒಲಿದ 10 ಸ್ಥಾನ..!!

11
0

ಶಿವಮೊಗ್ಗ:ರಾಜ್ಯದ ವಿವಿಧ ನಿಗಮ ಹಾಗೂ ಮಂಡಳಿಗಳಿಗೆ ನಿರ್ದೇಶಕರು ಮತ್ತು ಸದಸ್ಯರನ್ನು ನೇಮಕ ಮಾಡಿ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಶಿವಮೊಗ್ಗ ಜಿಲ್ಲೆಯ 10 ಮಂದಿ ಮುಖಂಡರಿಗೆ ಅವಕಾಶ ದೊರೆತಿದೆ. ಜಿಲ್ಲೆಯ ಮುಖಂಡರಿಗೆ ವಿವಿಧ ಹುದ್ದೆಗಳನ್ನು ನೀಡಲಾಗಿದೆ.

ನೇಮಕಾತಿ ಪಟ್ಟಿಯ ಪ್ರಕಾರ, ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಸದಸ್ಯರಾಗಿ ಟಿ.ಎಚ್. ಹಾಲೇಶಪ್ಪ ಅವರನ್ನು ನೇಮಕ ಮಾಡಲಾಗಿದೆ. ಮಂಗಳೂರು ವಿದ್ಯುತ್ ಸರಬರಾಜು ನಿಗಮದ ನಿರ್ದೇಶಕರಾಗಿ ಮೊಹಮ್ಮದ್ ರಜೀಕ್ ಹಾಗೂ ಗುತ್ಯಪ್ಪ ಅವರಿಗೆ ಅವಕಾಶ ಕಲ್ಪಿಸಲಾಗಿದೆ.

ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿಗೆ ಗಣಪತಿ ಹುಲ್ಲಿಕೊಪ್ಪ ಅವರನ್ನು ಆಯ್ಕೆ ಮಾಡಲಾಗಿದೆ. ಕರ್ನಾಟಕ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆಗೆ ಜಿಲ್ಲೆಯ ಮೂವರು ಮುಖಂಡರನ್ನು ನೇಮಕ ಮಾಡಲಾಗಿದೆ. ಸಾಗರದ ನಿಂಗಪ್ಪ ಎಸ್ (ಲಿಂಗರಾಜ್ ಗೇರಬೀಸ್)., ಶಿವಮೊಗ್ಗದ ಆರೀಫ್ ಉಲ್ಲಾ ಹಾಗೂ ತೀರ್ಥಹಳ್ಳಿಯ ಕೆಸ್ತೂರು ಮಂಜುನಾಥ್ ಅವರಿಗೆ ಕಾರ್ಯಪಡೆಯ ಜವಾಬ್ದಾರಿ ನೀಡಲಾಗಿದೆ.

ಬಂಜಾರ ಅಭಿವೃದ್ಧಿ ನಿಗಮಕ್ಕೆ ಶಿವಮೊಗ್ಗದ ಗೀತಾ ಅವರನ್ನು ಆಯ್ಕೆ ಮಾಡಲಾಗಿದ್ದು, ಮಲೆನಾಡು ಅಭಿವೃದ್ಧಿ ಮಂಡಳಿಗೆ ಭದ್ರಾವತಿಯ ಮಂಜುನಾಥ ಕದಿರೇಶಪ್ಪ ಅವರನ್ನು ನೇಮಕ ಮಾಡಲಾಗಿದೆ.

ಇದೇ ವೇಳೆ, ಕೆಪಿಸಿಸಿ ಕಾರ್ಮಿಕ ವಿಭಾಗಕ್ಕೆ ಕುರುವಳ್ಳಿ ನಾಗರಾಜ್ ಅವರನ್ನು ನೇಮಕ ಮಾಡಲಾಗಿದೆ. ಬಸವಕಲ್ಯಾಣ ಅಭಿವೃದ್ಧಿ ಮಂಡಳಿಗೆ ಹೆಚ್.ಪಿ. ಗಿರೀಶ್ ಅವರ ನೇಮಕವೂ ಪ್ರಕಟವಾಗಿದೆ.

ಈ ಬಾರಿ ನೇಮಕಗೊಂಡವರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಾಸಕ ಗೋಪಾಲಕೃಷ್ಣ ಬೇಳೂರು, ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ ಹಾಗೂ ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಅವರ ಬೆಂಬಲಿಗರಿಗೆ ಅವಕಾಶ ದೊರೆತಿದೆ ಎನ್ನಲಾಗಿದೆ.