ಮನೆ Blog ಅಂತರ್ ವಿಶ್ವವಿದ್ಯಾಲಯ ವಾಲಿಬಾಲ್ ಪಂದ್ಯಾವಳಿಗೆ ರಿಪ್ಪನ್‌ಪೇಟೆ ಕಾಲೇಜಿನ ವಿದ್ಯಾರ್ಥಿಗಳು ಆಯ್ಕೆ..!!

ಅಂತರ್ ವಿಶ್ವವಿದ್ಯಾಲಯ ವಾಲಿಬಾಲ್ ಪಂದ್ಯಾವಳಿಗೆ ರಿಪ್ಪನ್‌ಪೇಟೆ ಕಾಲೇಜಿನ ವಿದ್ಯಾರ್ಥಿಗಳು ಆಯ್ಕೆ..!!

53
0

ಶಿವಮೊಗ್ಗ: ಆಂಧ್ರಪ್ರದೇಶದಲ್ಲಿ ನಡೆಯುವ ಅಂತರ್ ವಿಶ್ವವಿದ್ಯಾಲಯದ ವಾಲಿಬಾಲ್ ಪಂದ್ಯಾವಳಿಗೆ ರಿಪ್ಪನ್‌ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮೂವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ಡಿಸೆಂಬರ್ 10 ರಿಂದ 14 ರವರೆಗೆ ಆಂಧ್ರಪ್ರದೇಶದ ಖಾಕಿನಾಡ ನಗರದಲ್ಲಿ ನಡೆಯುವ ದಕ್ಷಿಣ ವಲಯದ ಅಂತರ್ ವಿಶ್ವವಿದ್ಯಾಲಯದ ವಾಲಿಬಾಲ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಕುವೆಂಪು ವಿಶ್ವವಿದ್ಯಾಲಯದ ತಂಡಕ್ಕೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ತೃತೀಯ ಬಿಕಾಂ ವಿದ್ಯಾರ್ಥಿಗಳಾದ ಮಹಮ್ಮದ್ ಝಿಯಾದ್ ಎಂ , ಆದರ್ಶ್ ಎಸ್ ಹಾಗೂ ಬಿ ಎ ವಿದ್ಯಾರ್ಥಿ ಪ್ರತಾಪ್ ಕೆ ಆಯ್ಕೆಯಾಗಿದ್ದಾರೆ.

ಆನಂದಪುರ ಅಶೋಕ ರಸ್ತೆಯ ನಿವಾಸಿ ತಿಮ್ಮಪ್ಪ ಮತ್ತು ಮಂಜುಳಾ ದಂಪತಿಗಳ ಪುತ್ರನಾದ ಪ್ರತಾಪ್ ಟಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎ ವ್ಯಾಸಾಂಗ ಮಾಡುತಿದ್ದಾರೆ.

ರಿಪ್ಪನ್ ಪೇಟೆಯ ರಸ್ತೆಯ ನಿವಾಸಿಗಳಾದ ಮುಸ್ತಫಾ ಮತ್ತು ಸಮೀನಾ ದಂಪತಿಗಳ ಪುತ್ರನಾದ ಮಹಮ್ಮದ್ ಝಿಯಾದ್ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತೃತೀಯ ಬಿಕಾಂ ವ್ಯಾಸಂಗ ಮಾಡುತಿದ್ದಾರೆ.

ನೆವಟೂರು ಗ್ರಾಮದ ನಿವಾಸಿಗಳಾದ ಶ್ರೀಪಾದ್ ಮತ್ತು ಅಂಬಿಕಾ ದಂಪತಿಗಳ ಪುತ್ರನಾದ ಆದೃ ಎಸ್ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತೃತೀಯ ಬಿಕಾಂ ವ್ಯಾಸಂಗ ಮಾಡುತಿದ್ದಾರೆ.

ಉತ್ತಮ ಪ್ರದರ್ಶನ ನೀಡುವ ಮೂಲಕ ವಿಶ್ವವಿದ್ಯಾಲಯ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡ ವಿದ್ಯಾರ್ಥಿಗಳು ಆಂಧ್ರಪ್ರದೇಶದಲ್ಲಿ ನಡೆಯುವ ಅಂತರ್ ವಿಶ್ವವಿದ್ಯಾಲಯದ ವಾಲಿಬಾಲ್ ಪಂದ್ಯಾವಳಿಯಲ್ಲಿ ಉತ್ತಮ ಸಾಧನೆ ಮಾಡಲೆಂದು ವಿದ್ಯಾರ್ಥಿಗಳಿಗೆ ಕಾಲೇಜು ಅಭಿವೃದ್ಧಿ ಸಮಿತಿ ಹಾಗೂ ಪ್ರಾಂಶುಪಾಲರು ಅಭಿನಂದಿಸಿದ್ದಾರೆ.

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t