ಆನಂದಪುರ:ಅಂಬೇಡ್ಕರ್ ಅವರನ್ನು ಒಪ್ಪದಿರುವವರು, ವಿರೋಧಿಸುವವರು ದೇಶದ್ರೋಹಿಗಳು ಎಂದು ದಲಿತ ಸಂಘರ್ಷ ಸಮಿತಿ ಉಪಾಧ್ಯಕ್ಷರಾದ ನಾಗರಾಜ್ ತಿಳಿಸಿದರು.
ಇವರು ಸಮೀಪದ ದಾಸಕೊಪ್ಪದ ಅಂಬೇಡ್ಕರ್ ವೃತ್ತದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಅವರ 69 ಪುಣ್ಯ ಸ್ಮರಣೆಯ ಪ್ರಯುಕ್ತ ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾಚಾರಣೆ ಮಾಡಿ ಮಾತನಾಡಿದರು.
ಈ ದೇಶದಲ್ಲಿ ಅಂಬೇಡ್ಕರ್ ಅಂತಹ ಮಹಾನ್ ವ್ಯಕ್ತಿ ಜನಿಸಿಲ್ಲವೆಂದಿದ್ದರೆ ಸ್ವತಂತ್ರವಾಗಿ ನಾವೆಲ್ಲರೂ ಈ ದೇಶದಲ್ಲಿ ಬದುಕಲು ಸಾಧ್ಯವಾಗುತ್ತಿರಲಿಲ್ಲ ಎಂದರು.

ಪ್ರಮುಖವಾಗಿ ಇಂದಿಗೂ ಸಹ ಹಲವಾರು ಮನುವಾದಿಗಳು ಅಂಬೇಡ್ಕರ್ ಅವರನ್ನು ಒಪ್ಪುತ್ತಿಲ್ಲ ಅಂತವರಿಗೆ ಈ ದೇಶದ್ರೋಹಿಗಳ ಪಟ್ಟ ಕಟ್ಟಬೇಕು ಎಂದು ಕಟುವಾಗಿ ತಿಳಿಸಿದರು.
ಜೈ ಭೀಮ್ ಸಂಘಟನೆ ಅಧ್ಯಕ್ಷ ವಿಕಾಸ್ ಮಾತನಾಡಿ ಈಗಿನ ಯುವಜನತೆ ಅಂಬೇಡ್ಕರ್ ಅವರ ಸಿದ್ಧಾಂತವನ್ನು ಹಾಗೂ ತತ್ವವನ್ನು ಅಳವಡಿಸಿಕೊಂಡು ಅನ್ಯಾಯ ಕಂಡಲ್ಲಿ ಧ್ವನಿ ಎತ್ತಿ ವಿರೋಧಿಸುವ ಮನೋಭಾವನೆಯನ್ನು ಬೆಳಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದಂತಹ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಅಕ್ಷಯ್ ಮಾತನಾಡಿ ಪ್ರತಿಯೊಬ್ಬ ಭಾರತೀಯನ ಮನ ಮನೆಯಲ್ಲೂ ಅಂಬೇಡ್ಕರವರನ್ನು ಪೂಜಿಸುವಂತ ಕೆಲಸವಾಗಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ ಪ್ರಶಾಂತ್,ಮಂಜುನಾಥ್, ನವೀನ್, ಸುನಿಲ್, ಶಶಾಂಕ್, ಮನೋಜ್, ಕವನ್ , ಸಂದರ್ಶ,ಪ್ರಜ್ವಲ್,ಸಂಕೇತ್, ಪ್ರದೀಪ ,ರಂಗನಾಥ್, ಅಮಿತ್ ಇನ್ನಿತರರು ಪಾಲ್ಗೊಂಡಿದ್ದರು.
ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್:https://chat.whatsapp.com/CnYYumPSez6AMYyw8cHG9A?mode=ac_t









