ಮನೆ ಶಿವಮೊಗ್ಗ ಅರಮನೆ ಅನಾಥಾಶ್ರಮ ಆರಂಭ, ಶಾಸಕ ಗೋಪಾಲಕೃಷ್ಣ ಬೇಳೂರುರವರಿಂದ ಕ್ಯಾಲೆಂಡರ್ ಬಿಡುಗಡೆ ಗೊಳಿಸಿ ಶುಭ ಹಾರೈಕೆ..!!

ಅರಮನೆ ಅನಾಥಾಶ್ರಮ ಆರಂಭ, ಶಾಸಕ ಗೋಪಾಲಕೃಷ್ಣ ಬೇಳೂರುರವರಿಂದ ಕ್ಯಾಲೆಂಡರ್ ಬಿಡುಗಡೆ ಗೊಳಿಸಿ ಶುಭ ಹಾರೈಕೆ..!!

14
0

ಸಾಗರ ; ಶಾಸಕರಾದ ಗೋಪಾಲಕೃಷ್ಣ ಬೇಳೂರುರವರ ಸ್ವಗೃಹದಲ್ಲಿ ಇಂದು ಶಾಸಕ ಗೋಪಾಲಕೃಷ್ಣ ಬೇಳೂರುರವರು ನಾಗರಾಜ ಗುಡ್ಡೇಮನೆ, ಮತ್ತು ಕಾರ್ತೀಕ ಸಾಗರ್ ಇವರ ಸಮ್ಮುಖದಲ್ಲಿ ಅರಮನೆ ಅನಾಥಾಶ್ರಮದ ಕ್ಯಾಲೆಂಡರ್ ಬಿಡುಗಡೆ ಗೊಳಿಸಿ ನೂತನವಾಗಿ ಆರಂಭವಾಗುತ್ತಿರುವ ಅರಮನೆ ಅನಾಥಾಶ್ರಮ ಆರಂಭ ಶುಭ ಹಾರೈಸಿದರು.

ಏನಿದು ನೂತನ ಆಶ್ರಮ..? ಯಲ್ಲಿ ನಿರ್ಮಾಣವಾಗಿದೆ..?ಇದರ ಕುರಿತು ಸಂಸ್ಥಾಪಕರು ಹೇಳಿದ್ದೇನು..?

ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಮೂಸವಳ್ಳಿ ಬಳಿ‌ ಅರಮನೆ ಅನಾಥಾಶ್ರನ ಆರಂಭ ಮಾಡಲಾಗಿದೆ. ಸಮಾಜದಲ್ಲಿ ಇರುವ ಹಿರಿಯರು ದೇವರ ಸಮಾನ ರಾದವರು,ಇಂದಿನ ಕುಟುಂಬದಲ್ಲಿ ತಂದೆ ತಾಯಿ ಮಕ್ಕಳಿರುವ ಚಿಕ್ಕ ಕುಟುಂಬಗಳು ಜಾಸ್ತಿಯಾಗತೊಡಗಿದೆ. ಮಕ್ಕಳು ವಿದ್ಯಾಭ್ಯಾಸದ ನಂತರ ಕೆಲಸದಲ್ಲಿ ತೊಡಗುವುದರಿಂದ ಮನೆಯಲ್ಲಿ ಇರುವ ಹಿರಿಯರನ್ನು ನೋಡಿಕೊಳ್ಳಬೇಕೆಂದು ಮಕ್ಕಳು ಬಯಸಿದ್ದರೂ ಅದು ಕಾರ್ಯ ಒತ್ತಡದಿಂದ ಆಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಮನೆಯಲ್ಲಿ ಇರುವ ಹಿರಿಯರು ಒಂಟಿತನದಿಂದ ಇರುವುದನ್ನು ಬಯಸದ ಮಕ್ಕಳಿಗೆ ಸಾಗರ ಸಮೀಪ ಇರುವ ಸಿದ್ದಾಪುರ ತಾಲೂಕಿನ ಮೂಸವಳ್ಳಿ ಗ್ರಾಮದ ಅನಾಥಾಶ್ರಮದಲ್ಲಿ ನೋಡಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ನಾವು ದುಡಿದಿರುವ ಒ‌ಂದು ಪಾಲನ್ನು ದೇವಸಮಾನರಾದ ಹಿರಿಯರ ಸೇವೆಗೆ ಮೀಸಲಿಡಬೇಕೆಂಬ ದೃಷ್ಟಿಯಿಂದ ಈ ಅನಾಥಾಶ್ರಮ ಮಾಡಲಾಗಿದೆ.

ಸೇವೆಯ ಮನೋಭಾವ ಇಟ್ಟುಕೊಂಡು ಅನಾಥಾಶ್ರಮ ಆರಂಭ ಮಾಡಲಾಗಿದ್ದು, ಇದರ‌ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಅನಾಥಾಶ್ರಮಕ್ಕೆ ಸೇರಿಸಿಕೊಳ್ಳಲು ನಿಭಂದನೆಗಳಿದ್ದು, ಎಲ್ಲ ವ್ಯವಸ್ಥೆಗಳು ಸಹ ನಮ್ಮ‌ ಅನಾಥಾಶ್ರಮದಲ್ಲಿ ಇದೆ. ಇದನ್ನು‌ ಪರಿಶೀಲನೆ ಮಾಡಿ ಹಿರಿಯರನ್ನು ನಮ್ಮ ಅನಾಥಾಶ್ರಮಕ್ಕೆ ಆಸಕ್ತರು ಸೇರಿಸಬಹುದಾಗಿದೆ. ಆಹಾರ, ಸ್ನಾನಕ್ಕೆ ಬಿಸಿನೀರಿನ ವ್ಯವಸ್ಥೆ, ಔಷದಗಳ ಪೂರೈಕೆಯನ್ನು ಉತ್ತಮ ತರಬೇತಿ ಪಡೆದ ಆಯಾಗಳ ಮೂಲಕ ನೀಡಲಾಗುವುದು ಎಂದು ಸಾಗರ ಸಾಂಸ್ಕೃತಿಕ ಮತ್ತು ಕ್ರೀಡಾ ಟ್ರಸ್ಟ್ ಅಧ್ಯಕ್ಷ ಹಾಗೂ ಖಾಸಗೀ ಬಸ್ ಏಜೆಂಟರ ಸಾಗರ ತಾಲ್ಲೂಕು ಅಧ್ಯಕ್ಷ ನಾಗರಾಜ ಗುಡ್ಡೇಮನೆ ತಿಳಿಸಿದರು.

ಹೆಚ್ಚಿನ ಮಾಹಿತಿಗಾಗಿ : 9900133833ನ್ನು ಮಾಡಬಹುದು.

ಈ ಕ್ಯಾಲೆಂಡರ್ ಬಿಡುಗಡೆ ಸಮಯದಲ್ಲಿ ಸಾಗರ ನಗರಸಭೆಯ ವಿರೋಧಪಕ್ಷದ ನಾಯಕ ಗಣಪತಿ ಮಂಡಗಳಲೆ, ಚೇತನ್ ರಾಜ್ ಕಣ್ಣೂರ್ ,ಮಾಜಿ ಎಪಿಎಂಸಿ ಅಧ್ಯಕ್ಷ, ಸೂರನಗದ್ದೆ ಮಂಜು, ಧನಂಜಯ ಆರೋಡಿ ಇನ್ನಿತರರು ಹಾಜರಿದ್ದರು.

✒️…ಅಮಿತ್ ಆರ್ ಆನಂದಪುರ

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/IY9pAkaWjY80mynFTlPYHJ