ಮನೆ ಶಿವಮೊಗ್ಗ ಅರಸು ದಾಖಲೆ ಮುರಿದ ಸಿದ್ದು,ಶಿವಮೊಗ್ಗದಲ್ಲಿ ಬಿರಿಯಾನಿ, ಸಿಹಿ ಹಂಚಿಕೆ..!!

ಅರಸು ದಾಖಲೆ ಮುರಿದ ಸಿದ್ದು,ಶಿವಮೊಗ್ಗದಲ್ಲಿ ಬಿರಿಯಾನಿ, ಸಿಹಿ ಹಂಚಿಕೆ..!!

27
0

ಶಿವಮೊಗ್ಗ,ಜ.06: ಮುಖ್ಯಮಂತ್ರಿ, ಅಹಿಂದ ನಾಯಕ ಸಿದ್ದರಾಮಯ್ಯ ಅವರು 2792 ದಿನ ದೀರ್ಘಾವಧಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವ ಹಿಸಿದ್ದು, ಮಾಜಿ ಸಿಎಂ ದೇವರಾಜ ಅರಸು ಅವರ ದಾಖಲೆ ಸರಿಗಟ್ಟಿದ ಸಂಭ್ರಮದ ಅಂಗವಾಗಿ ಸಿದ್ದರಾಮಯ್ಯ ಅಭಿಮಾನಿಗಳಿಂದ ಇಂದು ಅಶೋಕ ವೃತ್ತ, ಮೆಗ್ಗಾನ್ ಆಸ್ಪತ್ರೆ ಮತ್ತು ವಿವಿಧೆಡೆ ನಾಟಿ ಕೋಳಿ ಬಿರಿಯಾನಿ ಮತ್ತು ಸಿಹಿಯನ್ನು ಸಾರ್ವಜನಿಕರಿಗೆ ಹಂಚಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್. ಪ್ರಸನ್ನಕುಮಾರ್, ಸಿದ್ದರಾಮಯ್ಯ ನವರು ಎಲ್ಲಾ ಮುಖ್ಯಮಂತ್ರಿಗ ಳಿಗಿಂತ ಹೆಚ್ಚಿನ ಅವಧಿ ಯಶಸ್ವಿಯಾಗಿ ಮುಖ್ಯ ಮಂತ್ರಿಗಳಾಗಿ 16 ಬಾರಿ ಬಜೆಟ್ ಮಂಡನೆ ಮಾಡಿ ದಾಖಲೆ ನಿರ್ಮಿಸಿದ್ದಾರೆ. ಅವರಿಗೆ ರಾಜ್ಯದ ಜನರ ಆಶೀರ್ವಾ ದವಿದೆ. ಉಚಿತ ಅಕ್ಕಿ, ಶಕ್ತಿ ಯೋಜನೆ, ಯುವನಿಧಿ, ಗೃಹಜ್ಯೋತಿ,ಗೃಹಲಕ್ಷ್ಮಿ 5 ಗ್ಯಾರಂಟಿಗಳನ್ನು ನಿರಂತರವಾಗಿ ನೀಡಿ ಯಶಸ್ವಿಯಾಗಿದ್ದಾರೆ. ಶಕ್ತಿ ಯೋಜನೆ ಯಡಿ ಉಚಿತವಾಗಿ ಬಸ್ ನಲ್ಲಿ ಪ್ರಯಾಣಿಸಿದ ತಾಯಂದಿರು ಮನಪೂರ್ವಕವಾಗಿ ಅವರನ್ನು ಹರಸಿದ್ದಾರೆ. ಕೊಟ್ಟ ಮಾತು ಉಳಿಸಿದ ಏಕೈಕ ಮುಖ್ಯಮಂತ್ರಿ ಅವರು. 56 ಸಾವಿರ ಕೋಟಿ ರೂ.ಗಳು ಗ್ಯಾರಂಟಿ ಯೋಜನೆಯಲ್ಲಿ ಯಾರಿಗೂ ನಯಾಪೈಸೆ ಕಮಿಷನ್ ಇಲ್ಲದೇ ನೇರವಾಗಿ ಫಲಾನುಭವಿಗಳಿಗೆ ಸಿಗುವ ಹಾಗೆ ಮಾಡಿದ್ದಾರೆ. ಆದ ಕಾರಣ ಅವರಿಗೆ ಜನರ ಆಶೀರ್ವಾದ ಇದೆ ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಕಾಂಗ್ರೆಸ್ ಮುಖಂಡ ಎಂ. ಶ್ರೀಕಾಂತ್ ಮಾತ ನಾಡಿ, ಅಂದು ಅರಸು ಇಂದು ಸಿದ್ದರಾಮಯ್ಯ ಬಡವರಿಗೆ ನೆಮ್ಮದಿ ಕೊಟ್ಟವರು. ಅವರ ಗ್ಯಾರಂಟಿ ಯೋಜನೆ ಎಲ್ಲರ ಮನೆಗೂ ಈಗಾಗಲೇ ತಲು ಪಿದೆ. ನಮ್ಮ ಕಾರ್ಯಕರ್ತರು ಪ್ರತಿ ಮನೆಗೂ ಭೇಟಿ ನೀಡಿ ಆ ಯೋಜನೆಯ ಪ್ರಾಮುಖ್ಯತೆ ಯನ್ನು ವಿವರಿಸುವ ಕೆಲಸ ಮಾಡಬೇಕು ಎಂದರು.

‘ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಕಲಗೋಡು ರತ್ನಾಕ‌ರ್, ಜಿ.ಡಿ. ಮಂಜುನಾಥ್, ಆರ್.ಸಿ. ನಾಯ್, ನಾಗರಾಜ್ ಕಂಕಾರಿ, ಕಲೀಂ ಪಾಷಾ, ಸೈಯದ್ ವಾಹಿದ್ ಅಡ್ಡು, ಹೆಚ್.ಪಿ. ಗಿರೀಶ್, ಸುವರ್ಣಾ ನಾಗರಾಜ್, ಪಾಲಾಕ್ಷಿ, ವಿನಮ್ ತಾಂಡ್ಲೆ, ಶಿವಾನಂದ್, ವಿನೋದ್, ಶರತ್ ಮರಿಯಪ, ದರ್ಶನ್, ಅಜೀಜ್ ಅಹಮ್ಮದ್, ಸಂತೋಷ್, ಚಿದಾನಂದ್, ಲೋಕೇಶ್, ಆರೀಫ್, ರೇಖಾ ರಂಗನಾಥ್, ಕುಮರೇಶ್, ಪವನ್, ರಾಕೇಶ್,ಯುವ ನಾಯಕ ಕೆ. ರಂಗನಾಥ್ ಮತ್ತಿತರರು ಇದ್ದರು.

✒️..ಅಮಿತ್ ಆರ್ ಆನಂದಪುರ

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/IY9pAkaWjY80mynFTlPYHJ