ಆನಂದಪುರ:
ವಿದ್ಯಾರ್ಥಿಗಳು ಕರಾಟೆಯನ್ನು ಕಲಿಯುವ ಮೂಲಕ ತಮ್ಮ ಆತ್ಮಸ್ಥೈರ್ಯದೊಂದಿಗೆ ಆತ್ಮ ರಕ್ಷಣೆಯನ್ನು ಮಾಡಿಕೊಳ್ಳಬಹುದು ಎಂದು ಸಾಗರ ಕರಾಟೆ ಸಂಸ್ಥೆಯ ತರಬೇತಿದಾರರಾದ ಸನ್ ಸೈ ಪಂಚಪ್ಪ ತಿಳಿಸಿದರು.
ಇವರು ಆನಂದಪುರದ ಕರ್ನಾಟಕ ಪಬ್ಲಿಕ್ ಸ್ಕೂಲ್ ನ 9ನೇ ತರಗತಿ ವಿದ್ಯಾರ್ಥಿನಿ ಅಮೂಲ್ಯ ಹೊಸಕೊಪ್ಪದ ಭಾರತಿ ಮತ್ತು ಗಣಪತಿ ಮಗಳಾಗಿದ್ದು ಇವರು ಕರಾಟೆಯಲ್ಲಿ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು ಇವರನ್ನು ಅಭಿನಂದಿಸಿ ಸನ್ಮಾನಿಸಿ ಮಾತನಾಡಿದರು.

ಆರೋಗ್ಯದ ಸಮತೋಲನ ಮತ್ತು ದೇಹ ಸದೃಢಕ್ಕೆ ಕರಾಟೆ ಕಲೆ ಸಹಕಾರಿಯಾಗಿದೆ.ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಕರಾಟೆಯಂತಹ ಆತ್ಮರಕ್ಷಣೆಯ ತಂತ್ರಗಳನ್ನು ಕಲಿಯಬೇಕೆಂದು ಒತ್ತಾಯಿಸಿದರು.
ಉಪ ಪ್ರಾಂಶುಪಾಲಾರದ ಈಶ್ವರಪ್ಪ ಮಾತನಾಡಿ ಸಮಾಜದಲ್ಲಿ ಹೆಚ್ಚುತ್ತಿರುವ ಬೆದರಿಕೆ, ದೌರ್ಜನ್ಯ ಹಾಗೂ ಸಮಾಜವಿರೋಧಿ ಶಕ್ತಿಗಳನ್ನು ಎದುರಿಸಲು ಕರಾಟೆ ವಿದ್ಯಾರ್ಥಿಗಳಿಗೆ ಸಹಾಯಕವಾಗಿರುತ್ತದೆ ಎಂದರು.
ಈ ಸಂದರ್ಭ ದಲ್ಲಿ ಪ್ರಾಂಶುಪಾಲರಾದ ರವಿಶಂಕರ್,ಹಾಗೂ ಎಸ್ ಡಿ ಎಂ ಸಿ ಸದಸ್ಯರಾದ ಜಗನ್ನಾಥ್, ಬಿ.ಡಿ ರವಿಕುಮಾರ್ ,ರಂಗನಾಥ್ ಹಾಗೂ ಶಿಕ್ಷಕರಾದ ಗಾಯಿತ್ರಿ ಬಡಿಗೇರ್ ಇನ್ನಿತರರು ಪಾಲ್ಗೊಂಡಿದ್ದರು.
ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t









