
✒️..ಅಮಿತ್ ಆರ್ ಆನಂದಪುರ
ಆನಂದಪುರ:
ಇಲ್ಲಿನ ಪ್ರಮುಖ ಇಂಧನ ವಿತರಣಾ ಕೇಂದ್ರಗಳಾದ ಇಂಡಿಯನ್ ಆಯಿಲ್ ಮತ್ತು ಎಚ್‌ಪಿ (HP) ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ವಾಹನ ಸವಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.
ಬಂಕ್‌ಗಳಲ್ಲಿ ‘ನೋ ಸ್ಟಾಕ್‘
ಕಳೆದ ಕೆಲವು ದಿನಗಳಿಂದ ಆನಂದಪುರದ ಬಂಕ್‌ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಸರಿಯಾಗಿ ಸಿಗದೆ ಗ್ರಾಹಕರು ನಿರಾಶರಾಗಿ ವಾಪಸ್ ಹೋಗುತ್ತಿದ್ದಾರೆ. “ದೂರದ ಊರುಗಳಿಗೆ ಹೋಗಬೇಕಾದ ಸವಾರರು ಬಂಕ್‌ಗೆ ಬಂದರೆ ಸ್ಟಾಕ್ ಇಲ್ಲ ಎಂಬ ಉತ್ತರ ಕೇಳಿ ಬರುತ್ತಿದೆ. ಇದರಿಂದ ದೈನಂದಿನ ಕೆಲಸಗಳಿಗೆ ತೀವ್ರ ಅಡಚಣೆಯಾಗಿದೆ,” ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲವು ಚಿಲ್ಲರೆ ಅಂಗಡಿ ಮುಂಗಟ್ಟುಗಳಲ್ಲಿ ಆಕ್ರಮವಾಗಿ ಡಿಸೆಲ್ ಪೆಟ್ರೋಲ್ ದಾಸ್ತಾನು ಮಾಡಿ ದುಪ್ಪಟ್ಟು ಬೆಲೆಗೆ ಮಾರಟ ಮಾಡುವ ಧಂಧೆ ನೆಡೆಯತ್ತಿದೆ. ಈ ಮೂಲಕ ಕೃತಕ ಅಭಾವ ಸೃಷ್ಟಿಸಿ ಹಣ ಮಾಡಲಾಗುತ್ತಿದೆ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ದೂರಿದ್ದಾರೆ.

ಈ ಬಗ್ಗೆ ನಮ್ಮ ಅಮಿತ್ ಟೈಮ್ಸ್ ನ್ಯೂಸ್ ಚಾನೆಲ್ ಗೆ ಪ್ರತಿಕ್ರಿಯೆ ನೀಡಿದ ಉಪವಿಭಾಗಾಧಿಕಾರಿ ವಿರೇಶ್ ಕುಮಾರ್ ಅವರು “ಸಾಗರ ತಾಲೂಕಿನಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆ ಸಮರ್ಪಕವಾಗಿ ನಡೆಯುತ್ತಿದೆ. ಇಂಧನ ಪೂರೈಕೆಯಲ್ಲಿ ಯಾವುದೇ ರೀತಿಯ ಕೊರತೆಯಿಲ್ಲ,ಆಕ್ರಮವಾಗಿ ಚಿಲ್ಲರೆ ಮಾರಾಟ ಮಾಡುವುದು, ಕೃತಕ ಅಭಾವ ಸೃಷ್ಟಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಗೊಂದಲದಲ್ಲಿ ಗ್ರಾಹಕರು
ಒಂದೆಡೆ ಅಧಿಕಾರಿಗಳು ಪೂರೈಕೆ ಸರಿಯಾಗಿದೆ ಎಂದು ಹೇಳುತ್ತಿದ್ದರೆ, ಇನ್ನೊಂದೆಡೆ ಆನಂದಪುರದ ಕೆಲವು ಬಂಕ್‌ಗಳಲ್ಲಿ ವಾಹನ ಸವಾರರು ಇಂಧನಕ್ಕಾಗಿ ಪರದಾಡುತ್ತಿರುವುದು ಕಂಡುಬಂದಿದೆ. ಪೂರೈಕೆಯಲ್ಲಿನ ಪರ ವಿರೋಧಾಭಾಸವು ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದ್ದು, ಸ್ಥಳೀಯ ಬಂಕ್‌ಗೆ ಮಾಲಿಕರು ಇತ್ತ ಗಮವ ಹರಿಸಿ ಸಮಸ್ಯೆ ಶೀಘ್ರ ಪರಿಹಾರ ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t








