ಮನೆ Blog ಆನಂದಪುರದಲ್ಲಿ ಕಡ್ಲೆ ಹಂಕ್ಲು ಮಾರಿಕಾಂಬಾ ದೇವಿ ಜಾತ್ರೆ: ಗಂಡನ ಮನೆಯಲ್ಲಿ ಪೂಜಾ ಕಾರ್ಯಗಳು ಆರಂಭ..!!

ಆನಂದಪುರದಲ್ಲಿ ಕಡ್ಲೆ ಹಂಕ್ಲು ಮಾರಿಕಾಂಬಾ ದೇವಿ ಜಾತ್ರೆ: ಗಂಡನ ಮನೆಯಲ್ಲಿ ಪೂಜಾ ಕಾರ್ಯಗಳು ಆರಂಭ..!!

54
0
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 37;

ಆನಂದಪುರ, ಮಾ.10:
ಇತಿಹಾಸ ಪ್ರಸಿದ್ಧವಾದ ಆನಂದಪುರದ ಕಡ್ಲೆ ಹಂಕ್ಲು ಶ್ರೀ ಮಾರಿಕಾಂಬಾ ದೇವಿ ಜಾತ್ರೆಯ ಅಂಗವಾಗಿ ಮಂಗಳವಾರ ರಾತ್ರಿ ದೇವಿಯ ತವರು ಮನೆಯಲ್ಲಿ ವಿಶೇಷ ಪೂಜಾ ಕಾರ್ಯಗಳು ಭಕ್ತಿಭಾವದಿಂದ ನೆರವೇರಿಸಲಾಯಿತು.

ಪೂಜೆಯ ನಂತರ ಸಂಪ್ರದಾಯಬದ್ಧವಾಗಿ ತಾಯಿ ಮಾರಿಕಾಂಬಾ ದೇವಿಯನ್ನು ಜಾನಪದ ಕಲಾತಂಡಗಳ ವಾದ್ಯಗಳು, ಮಂಗಳವಾದ್ಯಗಳು ಹಾಗೂ ಭಕ್ತರ ಜಯಘೋಷಗಳ ನಡುವೆ ಭವ್ಯ ಮೆರವಣಿಗೆಯಲ್ಲಿ ಗಂಡನ ಮನೆಗೆ ಕರೆದೊಯ್ಯಲಾಯಿತು.

ತವರು ಮನೆಯಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರತ್ನಾಕರ ಹೊನಗೋಡು , ಸಮಿತಿಯ ಸದಸ್ಯರು ಹಾಗೂ ಪ್ರಮುಖರು ದೇವಿ ದರ್ಶನ ಪಡೆದರು.

ದೇವಿಯ ತವರು ಮನೆಯಿಂದ ಆರಂಭವಾದ ಮೆರವಣಿಗೆ ಸಂಭ್ರಮದ ವಾತಾವರಣದಲ್ಲಿ ಸಾಗಿದ್ದು, ಸಾವಿರಾರು ಭಕ್ತರು ಭಾಗವಹಿಸಿ ದೇವಿಯ ದರ್ಶನ ಪಡೆದರು.

ಗಂಡನ ಮನೆಯಲ್ಲಿ ತಾಯಿ

ನಂತರ ದೇವಿಯನ್ನು ಗಂಡನ ಮನೆಯ ಗದ್ದಿಗೆಯಲ್ಲಿ ಪ್ರತಿಷ್ಠಾಪಿಸಿ ಸಂಪ್ರದಾಯಬದ್ಧ ಪೂಜಾ ಕಾರ್ಯಗಳನ್ನು ಆರಂಭಿಸಲಾಯಿತು. ಬುಧವಾರ ಬೆಳಗಿನ ಜಾವ ಸೂರ್ಯೋದಯಕ್ಕೂ ಮುನ್ನವೇ ವಿವಿಧ ಪೂಜಾ ವಿಧಿವಿಧಾನಗಳು ನೆರವೇರಿದವು.

ಜಾತ್ರೆಯ ಅಂಗವಾಗಿ ಮುಂದಿನ ದಿನಗಳಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

✒️..ಅಮಿತ್ ಆರ್ ಆನಂದಪುರ

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t