ಆನಂದಪುರ:
ಆನಂದಪುರ ಪಟ್ಟಣದಲ್ಲಿ ಮಂಗಳವಾರ ಸಂಜೆ ವಿವಿಧ ಭದ್ರತಾ ಪಡೆಗಳಿಂದ ದಿಡೀರನೆ ರೂಟ್ ಮಾರ್ಚ್ ನಡೆಸಲಾಯಿತು.
ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಶಾಂತಿ ಮತ್ತು ಸವ್ಯವಸ್ಥೆಯನ್ನು ಮೂಡಿಸಲು ಮತ್ತು ಹಬ್ಬದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತ ಕ್ರಮವಾಗಿ ಆನಂದಪುರದಲ್ಲಿ ರೂಟ್ ಮಾರ್ಚ್ ಮಾಡಿದರು.
ಆನಂದಪುರದ ಬಸ್ ನಿಲ್ದಾಣದಿಂದ ಆರಂಭವಾದ ರೂಟ್ ಮಾರ್ಚ್ ನಲ್ಲಿ ಪೊಲೀಸ್, ಆರ್. ಎ. ಎಫ್.,ಎಸ್.ಎ. ಎಫ್ .ತಂಡ ಭಾಗವಹಿಸಿತ್ತು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಿದ ರೂಟ್ ಮಾರ್ಚ್ ಯಡೇಹಳ್ಳಿ ವೃತ್ತದಲ್ಲಿ ಮುಕ್ತಾಯಗೊಂಡಿತು.ಆನಂದಪುರದ ಪಿಎಸ್ಐ ಪ್ರವೀಣ್ ನೇತೃತ್ವದಲ್ಲಿ ನಡೆದ ರೂಟ್ ಮಾರ್ಚ್ ನಲ್ಲಿ ಆರ್.ಎಫ್. ಒ ಮೇಜರ್ ಆರ್.ಎಸ್ ಬೀಸ್ಟ್, ಹಾಗೂ ಎಸ್. ಎ.ಎಫ್. ಇನ್ಸ್ಪೆಕ್ಟರ್ ಕೀರ್ತಿ ಕುಮಾರ್ ಹಾಗೂ ಎ.ಎಸ್. ಐ ಸಿದ್ದಾರೂಢ ಭಾಗವಹಿಸಿದ್ದರು.










