ಆನಂದಪುರ:ಜಿಂಕೆ ಚರ್ಮವನ್ನು ತಂದು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಸೆರೆಹಿಡಿದು ಪ್ರಕರಣ ದಾಖಲಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಲು ಸಾಗರದ ಅರಣ್ಯ ಸಂಚಾರಿ ದಳದ ಪಿಎಸ್ಐ ವಿನಾಯಕ್ ರವರ ತಂಡ ಯಶಸ್ವಿಯಾಗಿದೆ.
ಆನಂದಪುರ ಸಮೀಪದ ಎಡೇಹಳ್ಳಿಯಲ್ಲಿ ಅಕ್ರಮವಾಗಿ ವನ್ಯಪ್ರಾಣಿಯಾದ ಚಿಂಕಾರಿಯ (ಜಿಂಕೆ) ಚರ್ಮವನ್ನು ತೆಗೆದುಕೊಂಡು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಕಾರವಾರದ ಮೂಲದ ಸವಲಗುಂದಾ ವ್ಯಕ್ತಿಯದಾ ಅರ್ಜುನ್ ಹರನ ಶಿಕಾರಿ ತಂದೆ ರಾಮಪ್ಪ ಆರೋಪಿಯನ್ನು ಮಾಲು ಸಾಹಿತವಾಗಿಯೇ ಹಿಡಿದಿದ್ದಾರೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಈ ಪ್ರಕರಣವನ್ನು ದಾಖಲಿಸಿ, ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಿ ದ್ದು ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಈ ಕಾರ್ಯಾಚರಣೆಯ ನೇತೃತ್ವವನ್ನು ಸಾಗರದ ಅರಣ್ಯ ಸಂಚಾರಿ ದಳದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ವಿನಾಯಕ್ ಹೊಂದಿದ್ದು ಹಾಗೂ ಸಿಬ್ಬಂದಿಗಳಾದ ವಿಶ್ವನಾಥ್,ಚಂದ್ರ ಕಾಂತ್,ಆಂಜನೇಯ,ಮಹೇಶ್,ಹಾಲೇಶ್,ಪ್ರಮೋದಿನಿ ದಾಳಿಯಲ್ಲಿ ಭಾಗವಹಿಸಿದರು.
ಹೆಚ್ಚಿನ ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t









