ಮನೆ ಶಿವಮೊಗ್ಗ ಆನಂದಪುರ ಮತ್ತು ರಿಪ್ಪನ್ ಪೇಟೆ ಪಟ್ಟಣ ಪಂಚಾಯಿತಿಯ ಆಗುತ್ತಾ..? ಇದರ ಕುರಿತು ಶಾಸಕರು ಹೇಳಿದ್ದೇನು…?

ಆನಂದಪುರ ಮತ್ತು ರಿಪ್ಪನ್ ಪೇಟೆ ಪಟ್ಟಣ ಪಂಚಾಯಿತಿಯ ಆಗುತ್ತಾ..? ಇದರ ಕುರಿತು ಶಾಸಕರು ಹೇಳಿದ್ದೇನು…?

190
0

ಆನಂದಪುರ: ನಮ್ಮ ರಾಜ್ಯ ಸರ್ಕಾರ ಈಗಾಗಲೇ ಐದಾರು ಪಟ್ಟಣ ಪಂಚಾಯತಿ ಮಾಡಲು ಅನುಮೋದನೆಯನ್ನು ಮಾಡಿದೆ ಎಂದು ಶಾಸಕರಾದ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ಇವರು ಸಮೀಪದ ಗೌತಮಪುರ ವ್ಯಾಪ್ತಿಯಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಕೆಗಳಿಗೆ ಶಂಕುಸ್ಥಾಪನೆ ಮಾಡುವಾಗ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು.

ಗುಲ್ಬರ್ಗ ಕಡೆಯಲ್ಲಾ ಬಹಳಷ್ಟು ಜನಸಂಖ್ಯೆ ಇರುವುದರಿಂದ ಆ ಭಾಗಕ್ಕೆ ಪಟ್ಟಣ ಪಂಚಾಯಿತಿ ಮಾಡಲು ರಾಜ್ಯ ಸರ್ಕಾರ ಈಗ ಐದಾರು ಪಟ್ಟಣ ಪಂಚಾಯಿತಿಯನ್ನು ಅನುಮೋದನೆ ನೀಡಿದೆ.

ಮುಂದಿನ ದಿನಗಳಲ್ಲಿ ನಮ್ಮ ಜಿಲ್ಲೆಗೆ ಮತ್ತು ತಾಲೂಕಿಗೆ ಪಟ್ಟಣ ಪಂಚಾಯಿತಿ ಕೊಡುವುದಾದರೆ ನಮ್ಮ ಭಾಗದಲ್ಲಿನ ಆನಂದಪುರ ಮತ್ತು ರಿಪ್ಪನ್ ಪೇಟೆ ಹೋಬಳಿಯನ್ನು ಪ್ರಮುಖವಾಗಿ ಪಟ್ಟಣ ಪಂಚಾಯಿತಿ ಮಾಡಬೇಕೆಂಬ ನಿಲುವು ಇದೆ.

ಮುಂದಿನ ದಿನಗಳಲ್ಲಿ ಇದರ ಬಗ್ಗೆ ಚಿಂತನೆ ನಡೆಸಿ ಎರಡು ಹೋಬಳಿಯಲ್ಲಿ ಯಾವ ಹೋಬಳಿ ಪಟ್ಟಣ ಪಂಚಾಯಿತಿ ಮಾಡಬೇಕೆಂದು ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು.

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t