ಆನಂದಪುರ: ಸಾಗರ ಸಹಾಯಕ ಪೊಲೀಸ್ ಅಧೀಕ್ಷಕರಾದ ಡಾ. ಬೆನಕ ಪ್ರಸಾದ್ ಮತ್ತು ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ್ ಶೆಟ್ಟಿ ಮಾರ್ಗದರ್ಶನದಲ್ಲಿ ಒಂದೆರಡು ತಿಂಗಳಲ್ಲಿಗೆ ಮೂರು ಗಾಂಜಾ ಪ್ರಕರಣವನ್ನು ಆನಂದಪುರ ಪೊಲೀಸ್ ಠಾಣೆಯಲ್ಲಿ ದಾಖಲಿಸಿ ಆರು ಆರೋಪಿಯನ್ನು ಸೆರೆಹಿಡಿದ ಆನಂದಪುರ ಪೋಲಿಸ್ ಸಬ್ ಇನ್ಸ್ಪೆಕ್ಟರ್ ಪ್ರವೀಣ್ ಅವರ ತಂಡ.
ಶನಿವಾರ ಮಧ್ಯಾಹ್ನ ಖಚಿತ ಮಾಹಿತಿ ಮೇರೆಗೆ ಆನಂದಪುರ ಸಮೀಪದ ತ್ಯಾಗರ್ತಿ ಗ್ರಾಮದ ನಾಗಶ್ರೀ ಹಾರ್ಡ್ ವೇರ್ಸ್ ಟ್ರೇಡರ್ಸ್ ಮೇಲೆ ಧಾಳಿ ಮಾಡಿ, ಅಂಗಡಿಯ ಕಬ್ಬಿಣದ ರಾಕ್ ಮೇಲೆ ಇದ್ದ ಹಾರ್ಡ್‌ವೇರ್ ವಸ್ತುಗಳ ಮೇಲೆ 4000 ರೂ ಮೌಲ್ಯದ ಒಟ್ಟು ಪ್ಲಾಸ್ಟಿಕ್ ಕವರ್ ಸಹಿತ ಒಟ್ಟು 37.54 ಗ್ರಾಂ ತೂಕದ ಗಾಂಜಾದಂತಹ ವಸ್ತುವನ್ನು ಪಿ.ಎಸ್.ಐ ಪ್ರವೀಣ್ ನೇತೃತ್ವದ ದಾಳಿಯಲ್ಲಿ ಸೆರೆ ಹಿಡಿದ್ದಾರೆ.

ಈ ಪ್ರಕರಣ ಆನಂದಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿ ಆರೋಪಿಯನ್ನು ಹಿಡಿದ್ದಾರೆ.
ದಾಳಿಯ ಮುನ್ಸೂಚನೆ ನೀಡಿದ ಪಿಎಸ್ಐ :

ಆನಂದಪುರ ವ್ಯಾಪ್ತಿಯಲ್ಲಿ ಹೆಚ್ಚಿನ ಗಾಂಜಾ ಪ್ರಕರಣಗಳು ದಾಖಲಾಗುತ್ತಿದ್ದು .ಗಾಂಜಾ ವ್ಯಸನಿಗಳು ಮತ್ತು ಮಾರಾಟಗಾರರ ಪೂರ್ಣ ಮಾಹಿತಿ ನಮಗೆ ಲಭ್ಯವಾಗುತ್ತಿದೆ ಸದ್ಯದಲ್ಲಿಯೇ ಅಂತವರ ವಿರುದ್ಧ ಸಾಗರ ಸಹಾಯಕ ಪೊಲೀಸ್ ಅಧೀಕ್ಷಕರಾದ ಡಾ. ಬೆನಕ ಪ್ರಸಾದ್ ಮತ್ತು ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ್ ಶೆಟ್ಟಿ ಮಾರ್ಗದರ್ಶನದಲ್ಲಿ ದಾಳಿ ನಡೆಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪಿ.ಎಸ್.ಐ ಪ್ರವೀಣ್ ಮಾಹಿತಿ ನೀಡಿದ್ದಾರೆ.
ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕನ್ನು ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t









