ಆನಂದಪುರ ಸಮೀಪದ ಐಗಿನ ಬೈಲಿನಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲುಗಡೆಗೆ ಶಾಸಕ ಗೋಪಾಲಕೃಷ್ಣ ಬೇಳೂರು ಅವಕಾಶ ಮಾಡಿಕೊಟ್ಟಿದ್ದಾರೆ.
ಐಗಿನಬೈಲು ಹಾಗೂ ಸುತ್ತಮುತ್ತಲಿನ ಹಳ್ಳಿ ಭಾಗದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕೆ.ಎಸ್. ಆರ್. ಟಿ. ಸಿ ಬಸ್ ನಿಲುಗಡೆ ಇಲ್ಲದೆ ಬಹಳಷ್ಟು ಪರದಾಡುತ್ತಿದ್ದರು.
ಕೆ.ಎಸ್.ಆರ್ .ಟಿ.ಸಿ ಬಸ್ ಗೆ ಹೋಗಬೇಕೆಂದರೆ ಬೇರೊಂದು ಖಾಸಗಿ ಬಸ್ ಹಿಡಿದು ಆನಂದಪುರ ಅಥವಾ ಸಾಗರಕ್ಕೆ ತೆರಳಿ ಕೆ
ಎಸ್.ಆರ್.ಟಿ ಸಿ ಬಸ್ ಹತ್ತಬೇಕಾಗಿತ್ತು.

ಇದರಿಂದ ಐಗಿನ ಬೈಲು ಭಾಗದ ಗ್ರಾಮ ಪಂಚಾಯಿತಿ ಸದಸ್ಯರಾದ ಆನಂದ್ ಹರಟೆ ಹಾಗೂ ಸ್ಥಳೀಯರೆಲ್ಲರೂ ಸೇರಿ ಶಾಸಕರಾದ ಗೋಪಾಲಕೃಷ್ಣ ಬೇಳೂರು ಅವರಿಗೆ ಮನವಿ ನೀಡಿದ್ದರು.ಮನವಿಗೆ ಸ್ಪಂದಿಸಿ ಹಳ್ಳಿ ಭಾಗದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲ ವಾಗಲೆಂದು ಶಾಸಕ ಗೋಪಾಲಕೃಷ್ಣ ಬೇಳೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲುಗಡೆಗೆ ಅವಕಾಶ ಮಾಡಿಕೊಟ್ಟಿದ್ದಾರೆ.
ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/IY9pAkaWjY80mynFTlPYHJ









