
ಆನಂದಪುರ:
ತಂದೆ ತಾಯಿಯರು ಮಕ್ಕಳಿಗೆ ಒಳ್ಳೆಯ ಸಂಸ್ಕಾರದಿಂದ ಬೆಳೆಸಿ ಉತ್ತಮ ಸದೃಢ ಪ್ರಜೆ ಆಗುವಂತೆ ಮಾಡಿ ಎಂದು ಮೂಲೆಗದ್ದೆಮಠದ ಶ್ರೀ.ಮ. ನಿ. ಪ್ರ ಅಭಿನವ ಚನ್ನಬಸವ ಮಹಾಸ್ವಾಮಿಗಳು, ತಿಳಿಸಿದರು.

ಇವರು ಆನಂದಪುರ ಸಮೀಪದ ಸರಗುಂದದ ದಂಡಿಗೆಸರದಲ್ಲಿ 25ನೇ ವರ್ಷದ ಗಣಪತಿ ಮಹೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಭೂಮಿ ಮೇಲೆ ಮಾನವ ಜನ್ಮ ಅತ್ಯಂತ ಶ್ರೇಷ್ಠವಾದದ್ದು. ಹುಟ್ಟು ಮತ್ತು ಸಾವಿನ ನಡುವೆ ಇರುವುದೇ ಜೀವನ. ಸತ್ತ ಮೇಲೆ ನಮ್ಮ ಹೆಸರು ಶಾಶ್ವತವಾಗಿ ಉಳಿಯುವಂತೆ ಈ ಭೂಮಿ ಮೇಲೆ ಬಾಳಿ ಬದುಕಿ ಹೋಗಬೇಕು ಆಗ ಮಾನವನಾಗಿ ಹುಟ್ಟಿದ್ದಕ್ಕೆ ಸಾರ್ಥಕವಾಗುತ್ತದೆ ಎಂದರು.
ನೂರಾರು ದೇವರನ್ನು ಆರಾಧಿಸಿದರು ಮತ್ತು ದೇವಾಲಯಸುತ್ತಿದರು ಏನು ಪ್ರಯೋಜನವಿಲ್ಲ ಒಂದೇ ದೇವರನ್ನು ದೃಢವಾಗಿ ನಂಬಬೇಕು, ಆರಾಧಿಸಬೇಕು ಆಗ ದೇವರು ನಮ್ಮೆಡೆಗೆ ಒಲಿಯುತ್ತಾನೆ ಎಂದು ತಿಳಿಸಿದರು.
ಯುವಜನರು ಹಲವಾರು ದುಶ್ಚಟಗಳಿಗೆ ದಾಸ್ಯರಾಗುತ್ತಿದ್ದಾರೆ. ಇದರಿಂದ ಹೊರಬರಬೇಕು ಉತ್ತಮ ಸಮಾಜ ಕಟ್ಟಲು ಯುವಕರು ಸಿದ್ದರಾಗಬೇಕು ಎಂದು ಕರೆ ಕೊಟ್ಟರು.

ಕಾರ್ಯಕ್ರಮದ ಉದ್ಘಾಟರಾದ ಶ್ರೀಧರ್ ಭಟ್ ಕೆಂಜಿಗಪುರ ಇವರು ಮಾತನಾಡಿ ಗಣೇಶ ಹಬ್ಬವನ್ನು ಬಾಲ ಗಂಗಾಧರ ತಿಲಕರು ದೇಶದ ಏಕತೆ, ಸಮಗ್ರತೆಗಾಗಿ ಎಲ್ಲಾ ಧರ್ಮ ಮತ್ತು ಜಾತಿಯವರನ್ನು ಒಂದುಗೂಡಿಸಲು ಈ ಹಬ್ಬವನ್ನು ಆಚರಣೆಗೆ ತಂದರು. ಹಾಗೆ ಈ ಗಣೇಶ ಚತುರ್ಥಿಗೆ ಇದರದೆ ಆದ ಪೌರಾಣಿಕ ಹಿನ್ನೆಲೆಯು ಸಹ ಇದೆ ಎಂದು ತಿಳಿಸಿದರು.

ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರವೀಣ್ ಮಾತನಾಡಿ ಗಣೇಶ ಹಬ್ಬವನ್ನು ಶಾಂತಿಯುತವಾಗಿ ಮತ್ತು ಜಾಗೃಕತೆಯಿಂದ ಆಚರಣೆ ಮಾಡಿ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡಬೇಡಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಂ.ಪಂ ಸದಸ್ಯೆ ಜ್ಯೋತಿ ರಘು, ಅರುಣ ಹಾಗೂ ಗಣಪತಿ ಸಂಘದ ಅಧ್ಯಕ್ಷರಾದ ಶರತ್ ಹಾಗೂ ಉಪಾಧ್ಯಕ್ಷ ರಾದ ಅರುಣ್ ಮತ್ತು ಇನ್ನಿತರ ಸದಸ್ಯರುಗಳು ಹಾಗೂ ಊರಿನ ಗ್ರಾಮಸ್ಥರು ಹಾಜರಿದ್ದರು.
ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ: https://chat.whatsapp.com/CnYYumPSez6AMYyw8cHG9A?mode=ac_t








