ಆನಂದಪುರ:
ಏರ್ಟೆಲ್ ಟವರ್ ನಿರ್ವಹಣೆಯನ್ನು ಸರಿಯಾದ ರೀತಿಯಲ್ಲಿ ಮಾಡುತ್ತಿಲ್ಲ ಎಂದು ಆಕ್ರೋಶವನ್ನು ಹೊಸೂರು ಗ್ರಾ.ಪಂ ಸದಸ್ಯ ಆನಂದ್ ಹರಟೆ ವ್ಯಕ್ತಪಡಿಸಿದ್ದರು.
ಇವರು ಆನಂದಪುರ ಸಮೀಪದ ಹೊಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಐಗಿನಬೈಲಿನಲ್ಲಿ ಸಮರ್ಪಕವಾಗಿ ಏರ್ಟೆಲ್ ನೆಟ್ವರ್ಕ್ ಕಂಬವಿದ್ದರೂ ನೆಟ್ವರ್ಕ್ ದೊರೆಯುತ್ತಿಲ್ಲ ಎಂದು ಪ್ರತಿಭಟಿಸಿ ಮಾತನಾಡಿದರು.
ಹೊಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇರುವುದು ಒಂದೇ ಏರ್ಟೆಲ್ ನೆಟ್ವರ್ಕ್ ಕಂಬ ಅದು ಐಗಿನಬೈಲಿನಲ್ಲಿದೆ ಇದನ್ನು ಸರಿಯಾಗಿ ನಿರ್ವಹಣೆಯನ್ನು ಮಾಡುತ್ತಿಲ್ಲ ಎಂದು ಬಲವಾಗಿ ವಿರೋಧಿಸಿದರು.

ನಮ್ಮದು ಹಳ್ಳಿ ಭಾಗ ಆಗಿದ್ದರಿಂದ ಎಲ್ಲಾ ಸಮಯದಲ್ಲೂ ವಿದ್ಯುತ್ ಇರುವುದಿಲ್ಲ ಈ ವಿದ್ಯುತ್ ಇಲ್ಲದ ಸಮಯದಲ್ಲಿ ಏರ್ಟೆಲ್ ನೆಟ್ವರ್ಕ್ ಸಹ ಇರುವುದಿಲ್ಲ ಇದರಿಂದ ರಾತ್ರೆ ಯ ಸಮಯದಲ್ಲಿ ಬಹಳಷ್ಟು ಹಳ್ಳಿ ಭಾಗದಲ್ಲಿ ಇರುವವರಿಗೆ ತೊಂದರೆ ಆಗುತ್ತದೆ.
ಜನರೇಟರ್ ಸೌಲಭ್ಯ ಒದಗಿಸಲು ನಿರ್ಲಕ್ಷ:
ವಿದ್ಯುತ್ ಹೋದ ಬಳಿಕ ನೆಟ್ವರ್ಕ್ ಸಿಗುವುದಿಲ್ಲ ಇದಕ್ಕೆ ಪರ್ಯಾಯ ವಾಗಿ ಜನರೇಟರ್ ಸೌಲಭ್ಯ ಒದಗಿಸಬೇಕು ಇದನ್ನು ಮಾಡಲು ನಿರ್ಲಕ್ಷ ತೋರುತ್ತಿದ್ದಾರೆ ಎಂದು ಕಂಪನಿಯ ವಿರುದ್ಧ ಆರೋಪಿಸಿದರು.

ಸದ್ಯದಲ್ಲಿಯೇ ಜನರೇಟರ್ ಸೌಲಭ್ಯ ಒದಗಿಸದಿದ್ದರೆ ನಿಮ್ಮ ನೆಟ್ವರ್ಕ್ ಕಂಬವನ್ನು ಕಿತ್ತುಕೊಂಡು ಹೋಗಿ ಇಲ್ಲ ಮುಂದಿನ ದಿನಗಳಲ್ಲಿ ಸ್ಥಳೀಯರೆಲ್ಲರೂ ಸೇರಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆಯ ಮುನ್ಸೂಚನೆ ನೀಡಿದರು.
ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t









