✒️..ಅಮಿತ್ ಆರ್ ಆನಂದಪುರ
ಶಿವಮೊಗ್ಗ-ಏ:3/ ಬೆಂಗಳೂರು ಯಲಹಂಕ ತಾಲ್ಲೂಕಿನ ಬಾಗಲೂರಿನ ವಿಜಯ ಜ್ಯೋತಿ ಇಂಟರ್‌ನ್ಯಾಷನಲ್ ಶಾಲಾ ಮೈದಾನದಲ್ಲಿ ಏಪ್ರಿಲ್ 4 ರಂದು ಶನಿವಾರ ರಾತ್ರಿ 8ಕ್ಕೆ ಹಿರಿಯ ಹಾಗೂ ಗಣ್ಯ ಕಲಾವಿದರಿಂದ ಕುರುಕ್ಷೇತ್ರ ಪೌರಾಣಿಕ ನಾಟಕ ಪ್ರದರ್ಶನವಾಗಲಿದೆ.
ಡಾ.ಶ್ರೀರಾಮಚಂದ್ರ ಸ್ನೇಹಬಳಗ ಹಾಗೂ ವಿಜಯ ಜ್ಯೋತಿ ಸಮೂಹ ಶಿಕ್ಷಣ ಸಂಸ್ಥೆ ಸಹಯೋಗದೊಂದಿಗೆ ವಿ.ಟಿ.ಸ್ವಾಮಿ ಸಾಗರ ಇವರು ರಚಿಸಿದ ಶಿಕ್ಷಣ, ಸಾಹಿತ್ಯ, ಸಾಂಸ್ಕೃತಿಕ ರಾಯಬಾರಿ ಹಾಗೂ ಕನ್ನಡ ಚಳುವಳಿ ಹೋರಾಟಗಾರ ಡಾ.ಶ್ರೀರಾಮಚಂದ್ರ ಅವರ ಜೀವನ ಸಾಧನೆ ಕುರಿತು ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಮಂಡ್ಯ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಶಿವಚಿತ್ತಪ್ಪ ಉದ್ಘಾಟನೆ ಮಾಡಲಿದ್ದು, ಖ್ಯಾತ ವೈದ್ಯರಾದ ಡಾ.ಟಿ.ಹೆಚ್.ಆಂಜನಪ್ಪ ಪುಸ್ತಕ ಬಿಡುಗಡೆ ಮಾಡಲಿದ್ದು ಕೃತಿಯ ಕುರಿತು ವಿ.ಟಿ.ಸ್ವಾಮಿ ಮಾತನಾಡಲಿದ್ದಾರೆ.
ಎನ್.ವಿ.ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷರಾದ ಡಾ.ಚಿಕ್ಕಹನುಮಂತೇಗೌಡ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ವೇದಿಕೆಯಲ್ಲಿ ಬಾಗಲೂರು ಗ್ರಾಪಂ ಅಧ್ಯಕ್ಷ ಕೆಂಪೇಗೌಡ, ಯುಎಎಸ್ ವಿಸ್ತರಣಾಧಿಕಾರಿ ಡಾ.ಕೆ.ನಾರಾಯಣ ಗೌಡ ಉಪಸ್ಥಿತರಿರುವರು.

ಇದೇ ಸಂದರ್ಭದಲ್ಲಿ ವಿಜಯ ಜ್ಯೋತಿ ಶಿಕ್ಷಣ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿಗಳು ಹಾಗೂ ಗೋಕಾಕ್ ಚಳುವಳಿ, ಕಾವೇರಿ ಹೋರಾಟ, ನಾಡು ನುಡಿ ಚಳುವಳಿಗಳಲ್ಲಿ ಮಂಚೂಣಿಯಲ್ಲಿದ್ದ ಶಿಕ್ಷಣ ಸಾಹಿತ್ಯ ಸಾಂಸ್ಕೃತಿಕ ರಂಗಭೂಮಿಯ ರಾಯಬಾರಿಯಾಗಿರುವ ಬಾಗಲೂರಿನ ಡಾ.ಶ್ರೀರಾಮಚಂದ್ರ ಅವರಿಗೆ ಗೌರವ ಅಭಿನಂದನೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಸಂಯೋಜಕರಾದ ಎಸ್.ಮಧುಕುಮಾರ್ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ;https://chat.whatsapp.com/CnYYumPSez6AMYyw8cHG9A?mode=ac_t









