ಮನೆ ಶಿವಮೊಗ್ಗ ಒಂದು ವಾರದಲ್ಲಿಯೇ ಗಾಂಜಾ ಸೇವಿಸಿದ 5 ಆರೋಪಿಗಳನ್ನು ಸೆರೆಹಿಡಿದ ಖಾಕಿ..!!

ಒಂದು ವಾರದಲ್ಲಿಯೇ ಗಾಂಜಾ ಸೇವಿಸಿದ 5 ಆರೋಪಿಗಳನ್ನು ಸೆರೆಹಿಡಿದ ಖಾಕಿ..!!

113
0

ಆನಂದಪುರ:

ಆನಂದಪುರ ಸುತ್ತಮುತ್ತಲಿ ಹೆಚ್ಚಾದ ಗಾಂಜಾ ವ್ಯಸನಿಗಳು ,ಒಂದು ವಾರದಲ್ಲಿಯೇ ಪಿಎಸ್ಐ ಪ್ರವೀಣ್ ನೇತೃತ್ವದ ಚುರುಕಿನ ಕಾರ್ಯಾಚರಣೆ ಮೂಲಕ ಎರಡು ಪ್ರಕರಣ ದಾಖಲಿಸಿ ಐದು ಆರೋಪಿ ಸೆರೆ ಹಿಡಿದ ಪೊಲೀಸರ ತಂಡ.

ಒಂದು ವಾರದ ಹಿಂದೆ ಗಾಂಜಾ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು ಇಂದು ಮತ್ತೊಂದು ಪ್ರಕರಣ ದಾಖಲಾಗಿ ಮೂರು ಜನ ಆರೋಪಿಗಳನ್ನು ಪೊಲೀಸರು ಸೆರೆಹಿಡಿದಿದ್ದಾರೆ.

ಆನಂದಪುರ ಪೊಲೀಸ್ ಠಾಣೆ ಸಿಬ್ಬಂದಿಗಳಾದ ಪ್ರಶಾಂತ್, ಉಮೇಶ್ ಹಾಗೂ ನಿರಂಜನ್ ಅವರು ಠಾಣಾ ವ್ಯಾಪ್ತಿಯ ಗೌತಮಪುರ, ಹೊಸಕೊಪ್ಪ, ಮಲಂದೂರು, ದಾಸಕೊಪ್ಪ ಮೊದಲಾದ ಕಡೆ ಗಸ್ತು ತಿರುಗುತ್ತಿದ್ದ ಸಮಯದಲ್ಲಿ, ದಾಸಕೊಪ್ಪ ಗಾಣಿಗನ ಕೆರೆ ಹತ್ತಿರ ಮೂರು ಜನ ಮಾದಕ ವಸ್ತುಗಳನ್ನು ಸೇವಿಸಿ ಅನುಚಿತವಾಗಿ ವರ್ತಿಸುವುದನ್ನು ಕಂಡು ಬಂದಿದೆ.

ನಂತರ ಆನಂದಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಪ್ರವೀಣ್ ಅವರ ಸೂಚನೆ ಮೇರೆಗೆ ಮಾದಕ ವಸ್ತು ಸೇವಿಸಿದ್ದ ಮೂವರನ್ನು ಆನಂದಪುರದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ.

ಗಾಂಜಾ ಸೇವನೆ ಮಾಡಿದ ವ್ಯಕ್ತಿಗಳು ಆನಂದಪುರ ಹಾಗೂ ಸುತ್ತಮುತ್ತಲಿನ ಎಂದು ತಿಳಿದುಬಂದಿದ್ದು, ಅವರ ವಿರುದ್ಧ ಆನಂದಪುರ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಆಕ್ಟ್ ಅಡಿ ಪ್ರಕರಣ ದಾಖಲಾಗಿದೆ.

ಹೆಚ್ಚಿನ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ನ ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t