ಆನಂದಪುರ:ಕನ್ನಡ ನಾಡ ಸಂಸ್ಕೃತಿ ,ಕಲೆ ,ಭಾಷೆಯ ಬಗ್ಗೆ ಅಪಾರವಾದ ಗೌರವವನ್ನು ಕನ್ನಡಿಗರು ಇಟ್ಟುಕೊಳ್ಳಬೇಕು ಎಂದು ಶಾಸಕರಾದ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಇವರು ಇಂದು ಆನಂದಪುರದ ಬಸ್ ನಿಲ್ದಾಣದಲ್ಲಿ ಕನ್ನಡ ಸಂಘ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನಂತರ ಮಾತನಾಡಿದರು.

ನಾವೆಲ್ಲರೂ ಕನ್ನಡ ನಾಡಿನಲ್ಲಿ ಹುಟ್ಟಿರುವುದೇ ನಮ್ಮೆಲ್ಲರ ಪುಣ್ಯ.ಈ ನಾಡು ಸಾವಿರಾರು ವರ್ಷದ ಇತಿಹಾಸ ಹೊಂದಿದ ನಾಡಗಿರುವುದು ನಮ್ಮೆಲ್ಲರ ಹೆಮ್ಮೆ ಯಾಗಿದೆ.
ನಮ್ಮ ಕನ್ನಡ ನಾಡಿನಲ್ಲಿ ನೆಲ, ಜಲದ ಸಮಸ್ಯೆ ಬಂದಾಗ ಮತ್ತು ನಮ್ಮ ಭಾಷೆ ,ಸಂಸ್ಕೃತಿ ,ಆಚರಣೆ ಹಾಗೂ ನಮ್ಮ ಅಸ್ಮಿತೆಗೆ ದಕ್ಕೆ ಬರುವಂತದಾಗ ಕನ್ನಡಿಗರೆಲ್ಲಾ ಒಟ್ಟಾಗಿ ಒಂದಾಗಿ ಹೋರಾಡೋಣ ಎಂದು ಸಂದೇಶ ನೀಡಿದರು.

ತಾಯಿ ಭುವನೇಶ್ವರಿ ಮೆರವಣಿಗೆಗೆ ಚಾಲನೆ ನೀಡಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ರತ್ನಾಕರ ಹೊನಗೋಡು ಮಾತನಾಡಿ ,ನಮ್ಮ ಕನ್ನಡನಾಡು ಹಚ್ಚ ಹಸುರಿನ ಸುಂದರ ಬೆಟ್ಟಗುಡ್ಡಗಳ ನದಿಗಳನ್ನುೊಳಗೊಂಡ ನಾಡಿದು.
ಸಾಧು ಸಂತರು, ದಾಸರು ಶರಣರು, ಕವಿಗಳಿಂದ ಕಂಗೊಳಿಸುತ್ತಿರುವ ನಾಡು ನಮ್ಮದು .ಹಾಗೆ ಪ್ರಪಂಚದಲ್ಲೇ ನಮ್ಮ ಕನ್ನಡ ನಾಡು ಮತ್ತು ನುಡಿ ಹಾಗೂ ಸಂಸ್ಕೃತಿಗೆ ತನ್ನದೇ ಆದ ಸ್ಥಾನ ಮಾನ ಗೌರವವಿದೆ ಎಂದರು .

ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರವೀಣ್ ಮಾತನಾಡಿ ಕನ್ನಡ ಭಾಷೆಯ ಸಂಸ್ಕೃತಿ ,ನೆಲ ,ಜಲಕ್ಕಾಗಿ ಅನೇಕ ನಾಯಕರು ಹೋರಾಡಿ 1956 ರಲ್ಲಿ ಪ್ರತ್ಯೇಕವಾದ ಮೈಸೂರು ರಾಜ್ಯವನ್ನಾಗಿ ಮಾಡಿದರು ನಂತರ 1973 ರ ನವೆಂಬರ್ 1 ರಂದು ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು ಎಂದು ಕನ್ನಡ ನಾಡಿನ ಇತಿಹಾಸ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಗುರುರಾಜ್, ಕನ್ನಡ ಸಂಘದ ಅಧ್ಯಕ್ಷ ಚಂದ್ರಕುಮಾರ್, ಗೌರವಾಧ್ಯಕ್ಷ ರಾಜೇಂದ್ರ ಗೌಡ್ರು, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿಡಿ ರವಿಕುಮಾರ್, ಕೆಪಿಎಸ್ ಪ್ರಾಂಶುಪಾಲರಾದ ರವಿಶಂಕರ್ , ಉಪ ಪ್ರಾಂಶುಪಾಲರಾದ ಈಶ್ವರಪ್ಪ ಹಾಗೂ ಸಂಘದ ಪ್ರಮುಖರಾದ ಜಗನ್ನಾಥ್, ಕೆ.ನಾಗರಾಜ್, ಉಮೇಶ್ ಎನ್, ಭೂದ್ಯಪ್ಪ, ತಿಮ್ಮೇಶಿ, ಮಾಫರ್ ,ಅಶ್ವಿನ್, ಮದುಕರ್ ನಾಯ್ಕ್, ಸುರೇಶ್ ನಾಯ್ಕ್ ಇನ್ನಿತರರು ಪಾಲ್ಗೊಂಡಿದ್ದರು.

ಮೆರವಣಿಗೆಯಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಾಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t









