ಬೆಳಗಾವಿ: ಒಂಬತ್ತು ದಿನಗಳಿಂದ ಮೂಡಲಗಿ ತಾಲೂಕಿನಗುರ್ಲಾಪುರದಲ್ಲಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದ್ದು, ಪ್ರತಿ ಟನ್ ಕಬ್ಬಿಗೆ 3,300 ರೂ. ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿರುವುದಕ್ಕೆ ಗುರ್ಲಾಪುರದಲ್ಲಿ ರೈತರು ಪಟಾಕಿ ಸಿಡಿಸಿ, ಕಬ್ಬು ಹಿಡಿದು ಕುಣಿದು ಸಂಭ್ರಮಿಸಿದರು.
ಗುರ್ಲಾಪುರದಲ್ಲಿ ನಡೆಯುತ್ತಿರುವ ಹೋರಾಟದ ವೇದಿಕೆ ಮುಂಭಾಗದಲ್ಲಿ ಸೇರಿದ್ದ ಸಾವಿರಾರು ಜನ ರೈತರು ಶುಕ್ರವಾರ ಸಂಜೆ ಪಟಾಕಿ ಸಿಡಿಸಿ, ಗುಲಾಲು ಹಚ್ಚಿಕೊಂಡು ಸಂಭ್ರಮಾಚರಣೆ ನಡೆಸಿದರು. ಒಂಬತ್ತು ದಿನಗಳ ನಿರಂತರ ಹೋರಾಟಕ್ಕೆ ರಾಜ್ಯ ಸರ್ಕಾರ ಮಣಿದಿದ್ದು, ಕೊನೆಗೂ ಕಬ್ಬಿಗೆ ಬೆಲೆ ಸಿಕ್ಕಂತಾಯಿತು ಎಂದು ಬಾರುಕೋಲು ಹೊಡೆಯುತ್ತ ಕುಣಿದರು.

ಯಾರಪ್ಪಂದ್ ಏನೈತಿ, ಕಬ್ಬು ನಮ್ಮದೈತಿ ಎಂದು ಘೋಷಣೆ ಮೊಳಗಿಸಿದರು. ರಾಜ್ಯ ಸರ್ಕಾರ ಈಗ 3,300 ರೂ. ಘೋಷಣೆ ಮಾಡಿದೆ. ಕಬ್ಬಿಗೆ ಇನ್ನು ಮುಂದೆ ಬೆಂಬಲ ಬೆಲೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡಬೇಕೆಂದು ಚಳಿಗಾಲ ಅಧಿವೇಶನದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ನೆರೆದ ರೈತರು ಹೇಳಿಕೆ ನೀಡುತ್ತಿರುವುದು ಕಂಡು ಬಂದಿದೆ.
ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t









