ಮನೆ ಶಿವಮೊಗ್ಗ ಕಿತ್ತೂರು ಚೆನ್ನಮ್ಮಳ ಹೋರಾಟ ಎಲ್ಲಾರಿಗೂ ಸ್ಪೂರ್ತಿ : ತಹಸೀಲ್ದಾರ್ ರಶ್ಮೀ ಹೆಚ್.ಜೆ

ಕಿತ್ತೂರು ಚೆನ್ನಮ್ಮಳ ಹೋರಾಟ ಎಲ್ಲಾರಿಗೂ ಸ್ಪೂರ್ತಿ : ತಹಸೀಲ್ದಾರ್ ರಶ್ಮೀ ಹೆಚ್.ಜೆ

62
0

ಸಾಗರ: ಕಿತ್ತೂರು ರಾಣಿ ಚೆನ್ನಮ್ಮ ಅವಳ ಹೋರಾಟ ಪ್ರತಿಯೊಬ್ಬರಿಗೂ ಸ್ಪೂರ್ತಿ ಯಾಗಬೇಕು ಎಂದು ಸಾಗರ ತಹಶೀಲ್ದಾರ್ ರಶ್ಮೀ ಹೆಚ್.ಜೆ ತಿಳಿಸಿದರು.

ಇವರು ತಾಲೂಕು ಆಡಳಿತದ ತಾಲೂಕು ಸಭಾಂಗಣದಲ್ಲಿ ಆಯೋಜಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮ ಅವರ ಜನ್ಮದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಕಿತ್ತೂರು ರಾಣಿ ಚೆನ್ನಮ್ಮ ಅವರ ಹೋರಾಟ ಹಾಗೂ ಆದರ್ಶ ಗುಣಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳುವ ಮೂಲಕ ಉತ್ತಮ ಸಮಾಜವನ್ನು ಕಟ್ಟಲು ಮುಂದಾಗಬೇಕು.

ಬ್ರಿಟಿಷರನ್ನು ಭಾರತದಿಂದ ಓಡಿಸಲು ಚನ್ನಮ್ಮನ ಪಾತ್ರ ಸಾಕಷ್ಟು ಇದೆ ಬ್ರಿಟಿಷರು ಜಾರಿಗೆ ತಂದಿದ್ದ ದತ್ತು ಮಕ್ಕಳಿಗೆ ಹಕ್ಕಿಲ್ಲ ಎನ್ನುವ ಕಾನೂನು ವಿರುದ್ಧ ಹೋರಾಡಿದ ನಾಡಿನ ಧೀಮಂತ ಮಹಿಳೆ ಚೆನ್ನಮ್ಮ. ಅಲ್ಲದೆ ನಾಡಿನಲ್ಲಿಯೇ ಸ್ವಾಭಿಮಾನದ ಕಿಚ್ಚನ್ನು ಹಚ್ಚಿ ಬ್ರಿಟಿಷರ ದಾಸ್ಯ ದಿಂದ ಮುಕ್ತಿ ಹೊಂದಲು ಖಡ್ಗವನ್ನು ಹಿಡಿದ ಅಪರೂಪದ ರಾಣಿಯಾಗಿದ್ದರು ಎಂದರು.

ತಾಲೂಕು ಕಸಾಪ ಅಧ್ಯಕ್ಷ ವಿ. ಟಿ. ಸ್ವಾಮಿ ಮಾತನಾಡಿ ಇತಿಹಾಸ ಬಲ್ಲವರು ಮಾತ್ರ ಇತಿಹಾಸವನ್ನು ನಿರ್ಮಿಸಲು ಸಾಧ್ಯವಾಗುತ್ತದೆ ಆ ನಿಟ್ಟಿನಲ್ಲಿ ನಮ್ಮ ಭಾರತೀಯ ಇತಿಹಾಸವನ್ನು ಒಮ್ಮೆ ಪ್ರತಿಯೊಬ್ಬರು ಅಧ್ಯಯನ ಮಾಡಬೇಕಾಗಿದೆ, ಇತಿಹಾಸವನ್ನು ಅಧ್ಯಯನ ಮಾಡುವಾಗ ಮಹಿಳೆಯರ ಹೋರಾಟದ ಪ್ರಮುಖ ಅಂಶಗಳನ್ನು ಸಹ ಗುರುತಿಸಬಹುದಾಗಿದೆ ಅದರಲ್ಲೂ ವಿಶೇಷವಾಗಿ ಕಿತ್ತೂರು ರಾಣಿ ಚೆನ್ನಮ್ಮ ಅವರ ಆದರ್ಶ, ಬದುಕು ಪ್ರತಿಯೊಬ್ಬರಿಗೂ ಮಾರ್ಗದರ್ಶನವಾಗಿದೆ ,ಯಾವುದಕ್ಕೂ ಅಂಜದೆ ಬ್ರಿಟಿಷರ ವಿರುದ್ಧ ಹೋರಾಡಿದ ಅಪರೂಪದ ಮಹಿಳೆಯೆನಿಸಿದ್ದಾರೆ.

ಇಂಥಹ ವೀರರಾಣಿಯರ ಆದರ್ಶಗಳನ್ನು ಪ್ರತಿಯೊಬ್ಬರಿಗೂ ತಿಳಿಸುವಂತಾಗಬೇಕು ಅದರಲ್ಲೂ ಮುಂದಿನ ಪೀಳಿಗೆಗೆ ಇಂಥ ವೀರ ರಾಣಿಯರ ವಿಚಾರಗಳನ್ನು ಹೇಳುವ ಮೂಲಕ ದೇಶಪ್ರೇಮವನ್ನು ಬೆಳೆಸಬೇಕು ಎಂದರು.

ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಅಧ್ಯಕ್ಷ ಗಂಗಾಧರಪ್ಪ ಹಾಗೂ ಕಾರ್ಯದರ್ಶಿ ಪ್ರವೀಣ್ ನಗರ ಸಭೆ ವ್ಯವಸ್ಥಾಪಕರಾದ ಬಾಲಕೃಷ್ಣ, ಉಪ ತಹಶೀಲ್ದಾರ್ ತೊಯಜಾಕ್ಷಿ, ಫರ್ನಾಂಡಿಸ್, ಸಹಾಯಕರಾದ ಮೋಹನ್ ಮೊದಲಾದವರು ಉಪಸ್ಥಿತರಿದ್ದರು.

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t