ಮನೆ ರಾಜ್ಯ ಗ್ರಾಮಸಭೆಗಳು ಗ್ರಾಮಾಭಿವೃದ್ಧಿಗೆ ಪೂರಕ..

ಗ್ರಾಮಸಭೆಗಳು ಗ್ರಾಮಾಭಿವೃದ್ಧಿಗೆ ಪೂರಕ..

35
0

ಸಾಗರ.ನ :18/ ಗ್ರಾಮಸಭೆಗಳು ಗ್ರಾಮಾಭಿವೃದ್ಧಿಗೆ ಪೂರಕವಾಗಲಿವೆ ಎಂದು ಕೋಳೂರು ಗ್ರಾ.ಪಂ. ಅಧ್ಯಕ್ಷ ನವೀನ್ ಜಿ.ವಿ ಹೇಳಿದರು.

ಅವರು ಇಲ್ಲಿನ ಕೋಳೂರು ಗ್ರಾ.ಪಂ.ನಲ್ಲಿ ಆಯೋಜಿಸಿದ್ದ ಗ್ರಾಮ ಸಭೆಯನ್ನು ಉದ್ಘಾಟಿಸಿ ಮಾತನಾಡಿ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಸಾರ್ವಜನಿಕರ ಭಾಗವಹಿಸುವಿಕೆ ಅತಿ ಮುಖ್ಯವಾಗಿದೆ,..

ಗ್ರಾಮಸಭೆಯಲ್ಲಿ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ರೂಪಿಸುವುದು, ಜನರ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಚರ್ಚೆ ನಡೆಸುವುದು, ಶಿಕ್ಷಣ, ಆರೋಗ್ಯ, ರಸ್ತೆ, ಕುಡಿಯುವ ನೀರು, ಮೊದಲಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಬೇಕಾದ ಯೋಜನೆಯನ್ನು ರೂಪಿಸುವುದು ಮುಖ್ಯವಾಗಿದೆ ಹಾಗಾಗಿ ಜನರ ಹಾಗೂ ಸರ್ಕಾರದ ಸಹಕಾರವನ್ನು ಪಡೆದು ಮಾದರಿ ಗ್ರಾಮ ಪಂಚಾಯಿತಿ ರೂಪಿಸೋಣ ಎಂದರು.

ಶಿಕ್ಷಣ ಸಂಯೋಜಕರಾದ ವಿ.ಟಿ.ಸ್ವಾಮಿ ಮಾತನಾಡಿ ಅಭಿವೃದ್ಧಿಯೆಂದರೆ ಕೇವಲ ಕಟ್ಟಡ ರಸ್ತೆ ಮನೆಗಳನ್ನು ಕಟ್ಟುವುದಲ್ಲ ಅದರ ಜೊತೆಯಲ್ಲಿ ಶಿಕ್ಷಣ ಆರೋಗ್ಯ ಸಾಂಸ್ಕೃತಿಕ ಮೊದಲ ವಿಷಯಗಳ ಬಗ್ಗೆ ಅಭಿವೃದ್ಧಿಯನ್ನು ಸಹ ಸಾಧಿಸಬೇಕಾಗಿದೆ ಆ ನಿಟ್ಟಿನಲ್ಲಿ ನಮ್ಮ ಗ್ರಾಮ ಸಭೆಗಳಲ್ಲಿ ಚರ್ಚೆಯಾಗಿ ಪೂರಕವಾದ ಯೋಜನೆಗಳನ್ನು ರೂಪಿಸಬೇಕು ಆಗಾದಲ್ಲಿ ಮಾತ್ರ ಗ್ರಾಮ ಸಭೆಗಳಿಗೆ ಅರ್ಥ ಬರುತ್ತದೆ ಇದರಲ್ಲಿ ಜನರ ಸಹಭಾಗಿತ್ವ ಬಹಳ ಮುಖ್ಯ ಎಂದರು.

ವೇದಿಕೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ಸುಮಿತ್ರಾ, ದಿಶಾ ಸಮಿತಿಯ ಸುವರ್ಣ ಟೀಕಪ್ಪ, ಗ್ರಾಪಂ ಸದಶ್ಯರಾದ ಉಮೇಶ್ ಕೆ, ಈಶ್ವರಪ್ಪ,ಆಶಾ,ಶ್ರೀಮತಿ, ರೇಣುಕಮ್ಮ, ವಿದ್ಯಾ ಹೆಗಡೆ, ವಿಜಯಾ ಕುಮಾರ್, ಪಿಡಿಓ ಸುಭಾಷ್ ಎಂ ಮೊದಲಾದವರು ಉಪಸ್ಥಿತರಿದ್ದರು

ಈ ಸಂದರ್ಭದಲ್ಲಿ ಶತಾಯುಷಿ ಸಣ್ಣಮ್ಮ ಅವರನ್ನು ಸನ್ಮಾನಿಸಲಾಯಿತು.ವಿಶೇಷವಾಗಿ ಈ ಭಾಗದ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಬದುಕಲು ಭೂಮಿ ಬೇಕು, ಹಾಗೂ ಇಲ್ಲಿಂದ ಯಾರನ್ನೂ ಒಕ್ಕಲೆಬ್ಬಿಸಬಾರದು ಎನ್ನುವ ಮನವಿಯನ್ನು ಪಂಚಾಯಿತಿ ಗೆ ಹೋರಾಟ ಸಮಿತಿಯವರು ಮನವಿಯನ್ನು ಸಲ್ಲಿಸಿದರು.

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ :https://chat.whatsapp.com/CnYYumPSez6AMYyw8cHG9A?mode=ac_t