ಆನಂದಪುರ:ಪ್ರೊ ಕಬ್ಬಡಿಯಲ್ಲಿ ನಮ್ಮ ಗ್ರಾಮೀಣ ಭಾಗದ ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ ಎಂದರೆ ನಮ್ಮ ಹೆಮ್ಮೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರತ್ನಾಕರ ಹೊನಗೋಡು ತಿಳಿಸಿದರು.
ಇವರು ಆನಂದಪುರದ ಕೆಪಿಎಸ್ ಶಾಲೆಯಲ್ಲಿ ಸೀನಿಯರ್ ಸ್ಟೇಟ್ ಚಾಂಪಿಯನ್ಶಿಪ್ ತರಬೇತಿ ಶಿಬಿರವನ್ನು ಉದ್ಘಾಟಿಸಿದ ಮಾತನಾಡಿದರು.

ಯುವ ಸಮುದಾಯವು ಕ್ರೀಡಾಸಕ್ತಿ ಯನ್ನೂ ಉತ್ತಮ ರೀತಿಯಲ್ಲಿ ಬೆಳೆಸಿಕೊಂಡು ಗ್ರಾಮೀಣ ಪ್ರತಿಭೆಗಳು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಬೇಕು ಎಂಬುದೇ ನನ್ನ ಆಸೆ ಆಗಿದೆ ಹಾಗೆ ಇಂತಹ ಕ್ರೀಡಾಸಕ್ತಿಯನ್ನು ಹೊಂದಿದ ಕ್ರೀಡಾಪಟುಗಳಿಗೆ ನಾನು ಎಂದೆಂದಿಗೂ ಸಹಕಾರ ನೀಡುತ್ತೇನೆ ಎಂದು ತಿಳಿಸಿದರು.
ಶಿಬಿರದ ಆಯೋಜನೆಯನ್ನ ಶಿವಮೊಗ್ಗ ಜಿಲ್ಲಾ ಕಬಡ್ಡಿ ಅಸೋಸಿಯೇಷನ್ ಹಾಗೂ ಆನಂದಪುರ ಪತ್ರಿಕಾ ಮಿತ್ರರ ಸಹಕಾರದೊಂದಿಗೆ ನಡೆಸಲಾಗುತ್ತಿದೆ.

ವಿಶೇಷವಾಗಿ ಕಬ್ಬಡ್ಡಿ ಕೋಚರ್ ವಿನಯ್ ನೇತೃತ್ವದಲ್ಲಿ ಶಿಬಿರ ನಡೆಸಲಾಗುತ್ತಿದ್ದು, ಶಿಬಿರದಲ್ಲಿ.
ಶಿವಮೊಗ್ಗ ಜಿಲ್ಲಾ ಕಬಡ್ಡಿ ಅಸೋಸಿಯೇಷನ್ ಕಾರ್ಯದರ್ಶಿ ಚೇತನ್, ಅಧ್ಯಕ್ಷರಾದ ಚಂದ್ರಶೇಖರ್ ರಾಷ್ಟ್ರಮಟ್ಟದ ತರಬೇತುದಾರರಾದ (ಕೋಚರ್) ಪ್ರಶಾಂತ್.ಸಿರಿಜಿತ್ . ತರಬೇತಿ ನೀಡುತ್ತಿದ್ದಾರೆ ಜಿಲ್ಲೆಯ ಎಲ್ಲಾ ತಾಲೂಕಿನ ರಾಜ್ಯ ಮತ್ತು ರಾಷ್ಟ್ರಮಟ್ಟದ ಕಬ್ಬಡ್ಡಿ ಕ್ರೀಡಾಪಟುಗಳು ಈ ಶಿಬಿರದಲ್ಲಿ ಪಾಲ್ಗೊಂಡಿದ್ದು ಸೀನಿಯರ್ ಸ್ಟೇಟ್ ಚಾಂಪಿಯನ್ಶಿಪ್ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಲು ತರಬೇತಿ ಪಡೆಯುತ್ತಿದ್ದಾರೆ.
ತರಬೇತಿಯಲ್ಲಿ ಕಬ್ಬಡ್ಡಿ ಕ್ರೀಡಾಪಟುಗಳಾದ ಗಗನ್ ಗೌಡ ಪ್ರಜ್ವಲ್ ಆದರ್ಶ ಗಿರೀಶ್ ಪ್ರೀತಮ್ ದೇವು ಯಶ್ವಂತ್ ವಿನಯ್ ಭರತ್ ರಾಕೇಶ್ ಪುನೀತ್ ಹಾಗೂ ಇನ್ನಿತರರು ಭಾಗವಹಿಸಿದ್ದಾರೆ.

ಈ ಸಂದರ್ಭದಲ್ಲಿ ಶಿಬಿರಕ್ಕೆ ಸಹಕಾರಿಯದ ಉಮೇಶ್ ಏನ್. ಪತ್ರಿಕಾ ಬಳಗದ ಸಾಗರ ತಾಲೂಕು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾದ ನಾಗೇಶ್.ರವಿಕುಮಾರ್ ಬಿ ಡಿ. ಜಗನ್ನಾಥ್ ಆರ್. ಮಲ್ಲಿಕಾರ್ಜುನ. ಲೋಕೇಶ್ ಗುಡಿಗಾರ್. ವಿ ಟಿ ಸ್ವಾಮಿ.ಗಿರೀಶ್ ರಾಯ್ಕರ್ ವೆಂಕಟೇಶ್ ಜೋಯಿಸ್ ಉಪಸ್ಥಿತರಿದ್ದರು.
ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t









