ಮನೆ Blog ಚಂದ್ರಗುತ್ತಿಯ ರೇಣುಕಾಂಬ ದೇವಸ್ಥಾನದಲ್ಲಿ ಒಂದು ತಿಂಗಳ ಕಾಲ ಧನುರ್ಮಾಸದ ಪೂಜಾ ಕಾರ್ಯ..!!

ಚಂದ್ರಗುತ್ತಿಯ ರೇಣುಕಾಂಬ ದೇವಸ್ಥಾನದಲ್ಲಿ ಒಂದು ತಿಂಗಳ ಕಾಲ ಧನುರ್ಮಾಸದ ಪೂಜಾ ಕಾರ್ಯ..!!

101
0

ಸೊರಬ:ಮಲೆನಾಡಿನ ಪುರಾಣ ಹಾಗೂ ಐತಿಹಾಸಿಕ ಪ್ರಸಿದ್ದ ತಾಲೂಕಿನ ಚಂದ್ರಗುತ್ತಿ ಗ್ರಾಮದ ಶ್ರೀ ರೇಣುಕಾಂಬ ದೇವಸ್ಥಾನದಲ್ಲಿ ಡಿಸೆಂಬ‌ರ್16 ರಿಂದ 1 ತಿಂಗಳ ಕಾಲ ಧನುರ್ಮಾಸದ ಪೂಜಾ ವಿಧಿ-ವಿಧಾನಗಳು ನಡೆಯ ಲಿವೆ ಎಂದು ದೇವಸ್ಥಾನದ ಕಾರ್ಯ ನಿರ್ವಹಣಾ ಅಧಿಕಾರಿ ಪ್ರಮೀಳಾ ಕುಮಾರಿ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊ೦ದಿಗೆ ಮಾತನಾಡಿ, ಧನುರ್ಮಾಸದ ಪ್ರಯುಕ್ತ ಶ್ರೀ ರೇಣುಕಾಂಬ ದೇಗುಲದಲ್ಲಿ ಶ್ರೀ ದೇವಿಗೆ ಪ್ರತಿನಿತ್ಯ ಬೆಳಗಿನ ವೇಳೆ 6-30 ಕ್ಕೆ ವಿಶೇಷ ಪೂಜೆ ಮತ್ತು ಮಹಾಮಂಗಳಾರತಿ ಜರುಗಲಿದೆ.

ಮಕರ ಸಂಕ್ರಮಣದಅದು ವಿಶೇಷವಾಗಿ ಪೊಂಗಲ್ ನೈವೇದ್ಯ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳನ್ನು ಆಚರಿಸುವ ಮೂಲಕವಾಗಿ ಸಂಪನಗೊಳ್ಳಲಿದೆ. ಧನುರ್ಮಾಸದ ಧಾರ್ಮಿಕ ಪೂಜಾ ವಿಧಿ-ವಿಧಾನಗಳನ್ನು ದೇವಸ್ಥಾನದ ಪ್ರಧಾನ ಅರ್ಚಕರು ನೆರವೇರಿಸುವರು ಎಂದರು.

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t