ಸೊರಬ ,ಚಂದ್ರಗುತ್ತಿ :
ಗ್ರಾಮದ ಕಣ್ಗಾವಲಿಗಾಗಿ ಪಂಚಾಯತಿಯಿಂದ ಸೋಮವಾರ ಸಿ ಸಿ ಕ್ಯಾಮೆರಾವನ್ನುಗ್ರಾಮದ ಗಾಂಧಿ ವೃತದಲ್ಲಿ ಹಾಗೂ ಸೊರಬ ಮುಖ್ಯ ರಸ್ತೆಯಲ್ಲಿ ಅಳವಡಿಸಲಾಯಿತು .
ಜಾತ್ರೆ, ದಸರಾ, ಹುಣ್ಣಿಮೆ ಮತ್ತು ವಿಶೇಷ ದಿನಗಳಲ್ಲಿ ಚಂದ್ರಗುತ್ತಿ ರೇಣುಕಾಂಬದೇವಾಲಯಕ್ಕೆ ಬರುವ ಭಕ್ತರು ಮತ್ತು ಸಾರ್ವಜನಿಕರ ಸುರಕ್ಷತೆಗಾಗಿ ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಸಿ.ಸಿ ಕ್ಯಾಮೆರಾ ಆಳವಡಿಸಿದ್ದು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಂತರ ಈ ಕುರಿತು ಪ್ರತಿಕ್ರಿಸಿದ ಗ್ರಾಂ. ಪಂ. ಉಪಾಧ್ಯಕ್ಷ ರೇಣುಕಾ ಪ್ರಸಾದ್ ಗ್ರಾಮಸ್ಥರು ಮತ್ತು ಸಾರ್ವಜನಿಕರ ಹಿತದೃಷ್ಟಿಗಾಗಿ ಗ್ರಾಮ ಪಂಚಾಯಿತಿಯಿಂದ ಸಿ.ಸಿ.ಕ್ಯಾಮೆರಾಗಳನ್ನು ಅಳವಡಿಸುವ ಕೆಲಸವಾಗುತ್ತಿದೆ.
ಯಾವುದೇ ವಾಹನ ಅಪಘಾತ ,ಗಲಾಟೆ ,ಕಳ್ಳತನ ಮುಂತಾದ ಕೃತ್ಯವನ್ನು ನಿಯಂತ್ರಿಸಲು ಈ ಸಿಸಿ ಕ್ಯಾಮರಾ ಅಳವಡಿಸಲಾಗಿದೆ ನಂತರ ದಿನಗಳಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಹ ಅಳವಡಿಸಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿ ವೃದ್ಧಿ ಅಧಿಕಾರಿ ನಾರಾಯಣಮೂರ್ತಿ, ಗ್ರಾ.ಪಂ ನೌಕರರಾದ ಸಂತೋಷ್, ಮಂಜು ನಾಥ್, ಪ್ರಮುಖರಾದ ಚಂದ್ರಪ್ಪ ಕತವಾಯಿ, ಪ್ರಕಾಶ್ ಮಿರ್ಜಿ, ಇನ್ನಿತರರು ಉಪಸ್ಥಿತರಿದ್ದರು.
ವರದಿ ವಿಶಾಲ್ ಚಂದ್ರಗುತ್ತಿ
ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t









