ಸಾಗರ :(ತುಮರಿ) ಸರ್ಕಾರಿ ಪ್ರಾಥಮಿಕ ಶಾಲೆ ಚನ್ನಗೊಂಡ(ಕೊಳೆಗೊಡು)ದಲ್ಲಿ ದಿನಾಂಕ:23/12/2025 ಬುಧವಾರ ಶಾಲಾ ವಾರ್ಷಿಕೋತ್ಸವವನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶಿಶುಪಾಲ ಹಾಲೆಮನೆ ಇವರು ದೀಪ ಹಚ್ಚುವ ಮೂಲಕ ಉದ್ಘಾಟಿಸಿದರು.
ಕೊರೆವ ಚಳಿ, ಕೆಲಸದ ಒತ್ತಡ ಇದ್ದರೂ ಸಹ ಜನ ಸಾಗರವೇ ಸೇರಿತ್ತು, ಯಾರಿಗೂ ಸಹ ತೊಂದರೆಯಾಗದ ರೀತಿ ಊಟ ತಿಂಡಿ ವ್ಯವಸ್ಥೆ ಮಾಡಿದರು.

ಅತ್ಯಂತ ಶ್ರಮ ವಹಿಸಿದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶಿಶುಪಾಲ ಹಾಲೆಮನೆ ಇವರಿಗೆ ಪ್ರೀತಿಯಿಂದ ಸನ್ಮಾನಿಸಿದರು.
ಸಿ ಆರ್ ಪಿ ಸತೀಶ್ ನಾಯ್ಕ್ ಅವರು ಹಾಡಿನ ಮೂಲಕ ಎಲ್ಲರನ್ನೂ ಮನರಂಜಿಸಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶಿಶುಪಾಲ ಹಾಲೆಮನೆ, ಉಪಾಧ್ಯಕ್ಷರಾದ ಶ್ರೀಮತಿ ಭಾಗ್ಯಸತೀಶ್, ಚೆನ್ನಗೊಂಡ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಯೋಗರಾಜ್ ಯಮಗಳಲೆ, ಮಾಜಿ ಅಧ್ಯಕ್ಷರಾದ ಪದ್ಮರಾಜ್ ಹೊಸಮನೆ, ಪಾಶ್ವನಾಥ್ ಕಟ್ಟಿನಕಾರು, ತಾಲೂಕು ಕೆ ಡಿ ಪಿ ಸದಸ್ಯರಾದ ಸತ್ಯನಾರಾಯಣ ಜಿಟಿ, ವಿಜಯಕುಮಾರ್ ಹೆರಬೆಟ್ಟು, ಮೋಹನ್ ಕುಮಾರ್ ಹಾಳಸಸಿ,ಸೊರಬ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರಾದ ಮಹಾವೀರ ಹಾಲೆಮನೆ, ಜಾಕಿ ಗಣೇಶ್ ತುಮರಿ, ಕೆನರಾ ಬ್ಯಾಂಕ್ ಮ್ಯಾನೇಜರ್ ಚೇತನ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಿರೂಪಣೆ ಅತಿಥಿ ಶಿಕ್ಷಕಿ ಅರ್ಚನ ಮುಖ್ಯ ಶಿಕ್ಷಕರಾದ ಮಂಜುನಾಥ ಅವರು ಸ್ವಾಗತಿಸಿದರು ಅತಿಥಿ ಶಿಕ್ಷಕಿ ಲೆನ್ಸಿತ ವಂದನಾರ್ಪಣೆ ಮಾಡಿದರು.
ವರದಿ :✒️..ಕೆ ಸಿ ರಾಜು ಕಾರಣಿ
ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t









