ಹವಾಮಾನ ವರದಿ: ಶಿವಮೊಗ್ಗ ಜಿಲ್ಲೆಯಲ್ಲಿ ಚಳಿ ಮತ್ತೆ ಹೆಚ್ಚಳವಾಗಿದ್ದು ತಾಪಮಾನವು ತುಸು ಇಳಿಕೆಯಾಗಿದೆ. ಆದರೆ ಬಿಸಿಲಿನ ಅಬ್ಬರ ಕಡಿಮೆಯಾಗಿಲ್ಲ.
ರಾಜ್ಯದಲ್ಲಿ ಮತ್ತೆ ಥಂಡಿ ವಾತಾವರಣ ಹೆಚ್ಚಾಗಿದೆ. ಶಿವಮೊಗ್ಗದಲ್ಲಿಯು ಚಳಿ ಪ್ರಮಾಣ ಏರಿಕೆಯಾಗಿದೆ. ಸಂಜೆಯಾಗುತಲೆ ವಾತಾವರಣ ತಂಪೇರುತ್ತದೆ.
ಇಬ್ಬನಿ ಕೂಡ ಬಹಳಷ್ಟಿದೆ ನಡುರಾತ್ರಿ ಮತ್ತು ಬೆಳಗಿನ ಜಾವದಲ್ಲಿ ಚಳಿ ಹೆಚ್ಚಿರುತ್ತದೆ. ಇನ್ನು, ಬಿಸಿಲು ಕೂಡ ಜೋರಾಗಿದ್ದು ಬೆಳಗ್ಗೆ 11 ಗಂಟೆಯಿಂದ ಸಂಜೆವರೆಗೆ ಮೈಸುಡುವ ಬಿಸಿಲಿರಲಿದೆ.

ಎಲ್ಲೆಲ್ಲಿ ಎಷ್ಟಿರುತ್ತೆ ತಾಪಮಾನ?
ಶಿವಮೊಗ್ಗ, ಭದ್ರಾವತಿಯಲ್ಲಿ ಇವತ್ತು ಗರಿಷ್ಠ 30 ಡಿಗ್ರಿ ಸೆಲ್ಸಿಯಸ್, ಕನಿಷ್ಠ 18 ಡಿಗ್ರಿ ಸೆಲ್ಸಿಯಸ್.
ತೀರ್ಥಹಳ್ಳಿಯಲ್ಲಿ ಗರಿಷ್ಠ 31 ಡಿಗ್ರಿ ಸೆಲ್ಸಿಯಸ್, ಕನಿಷ್ಠ 24 ಡಿಗ್ರಿ ಸೆಲ್ಸಿಯಸ್.
ಸೊರಬ, ಹೊಸನಗರ, ಸಾಗರ, ಶಿಕಾರಿಪುರ ತಾಲೂಕುಗಳಲ್ಲಿ ಗರಿಷ್ಠ 33 ಡಿಗ್ರಿ ಸೆಲ್ಸಿಯಸ್, ಕನಿಷ್ಠ 22 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ.
ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ https://chat.whatsapp.com/CnYYumPSez6AMYyw8cHG9A?mode=ac_t









