ಶಿವಮೊಗ್ಗ: ಕೇಂದ್ರ ಕಾರಾಗೃಹದ ಕ್ಯಾಂಟೀನ್‌ಗೆ ತಂದಿದ್ದ ಬಾಳೆಗೊನೆಗಳಲ್ಲಿ ಗಾಂಜಾ ಸಿಗರೇಟ್ ಪತ್ತೆಯಾಗಿದೆ .
ಜೈಲು ಭದ್ರತೆ ನಿರ್ವಹಿಸುತ್ತಿರುವ ರಾಜ್ಯ ಕೈಗಾರಿಕಾ ಭದ್ರತಾ ಪಡೆ (KSISF) ಸಿಬ್ಬಂದಿ ಇದನ್ನು ಪತ್ತೆ ಹಚ್ಚಿದ್ದಾರೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನ.19ರಂದು ಮಧ್ಯಾಹ್ನ 2.15ರ ಹೊತ್ತೆಗೆ ಶಿವಮೊಗ್ಗದ ಕೇಂದ್ರ ಕಾರಾಗೃಹಕ್ಕೆ ಆಟೋ ಒಂದರಲ್ಲಿ ಐದು ಬಾಳೆಗೊನೆ ತರಲಾಗಿತ್ತು. ಕ್ಯಾಂಟೀನ್‌ನವರ ಸೂಚನೆ ಮೇರೆಗೆ ಇವುಗಳನ್ನು ತರಲಾಗಿದೆ ಎಂದು ಗೇಟ್ ಮುಂಭಾಗ ಇರಿಸಲಾಗಿತ್ತು.

ಕೆಎಸ್‌ಐಎಸ್‌ಎಫ್ ಇನ್ಸ್‌ಪೆಕ್ಟರ್ ಜಗದೀಶ್, ಪಿಎಸ್‌ಐ ಪ್ರಭು, ಸಿಬ್ಬಂದಿ ಪ್ರವೀಣ್ ಮತ್ತು ನಿರೂಪಬಾಯಿ, ಐದು ಬಾಳೆಗೊನೆಗಳನ್ನು ಪರಿಶೀಲಿಸಿದರು. ಆಗ ಬಾಳೆಗೊನೆಯ ದಿಂಡು ಕೊರೆದು ಅದರೊಳಗೆ ಗಾಂಜಾ ಮತ್ತು ಸಿಗರೇಟುಗಳನ್ನು ಟೇಪ್ ಸುತ್ತಿ ಇಟ್ಟಿರುವುದು ಗೊತ್ತಾಗಿದೆ.
ಬಾಳೆ ದಿಂಡಿನಲ್ಲಿ 123 ಗ್ರಾಂ ಗಾಂಜಾ, 40 ಸಿಗರೇಟುಗಳು ಸಿಕ್ಕಿವೆ ಎಂದು ಆರೋಪಿಸಾಗಿದೆ. ಘಟನೆ ಸಂಬಂಧ ಜೈಲು ಮುಖ್ಯ ಅಧೀಕ್ಷಕ ಡಾ. ರಂಗನಾಥ್ ದೂರು ನೀಡಿದ್ದು, ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿhttps://chat.whatsapp.com/CnYYumPSez6AMYyw8cHG9A?mode=ac_t









