ಮನೆ ಶಿವಮೊಗ್ಗ ಜೋಗ ಹೋಗುವ ರಸ್ತೆ ಕೇಳಿ ಲಕ್ಷಾಂತರ ರೂ ದರೋಡೆ ಮಾಡಿದ ಹಂತಕರು..!!

ಜೋಗ ಹೋಗುವ ರಸ್ತೆ ಕೇಳಿ ಲಕ್ಷಾಂತರ ರೂ ದರೋಡೆ ಮಾಡಿದ ಹಂತಕರು..!!

92
0

ಆನಂದಪುರ: ಶಿಕಾರಿಪುರ ರಸ್ತೆಯ ಗೌತಮಪುರ ಬಳಿಯ ದಾನಂದೂರು ಕ್ರಾಸ್ ನಲ್ಲಿ ರಾತ್ರಿ ವೇಳೆ ಬೈಕ್ ಅಡ್ಡಗಟ್ಟಿ ಬಂಗಾರದ ಸರ ಬೆಳ್ಳಿ ಬ್ರಾಸ್ಟೈಟ್, ಎರಡು ಐಫೋನ್, ನಗದು ಹಣವನ್ನು ದರೋಡೆ ಮಾಡಿದ ಪ್ರಕರಣವು ಆನಂದಪುರ ಪೊಲೀಸ್ ಠಾಣೆ ಯಲ್ಲಿ ದಾಖಲಾಗಿದೆ..

ಆನಂದಪುರ ಪಟ್ಟಣದಲ್ಲಿ ರಾ. ಕಲೆಕ್ಷನ್ ಬಟ್ಟೆ ಅಂಗಡಿಯ ಮಾಲೀಕ ಮಹೇಶ್ ನ. 24ರಂದು ತನ್ನ ಅಂಗಡಿಯ ವ್ಯವಹಾರವನ್ನು ಮುಗಿಸಿ, ಶಿಕಾರಿಪುರ ತಾಲೂಕು ಅಣ್ಣಾಪುರ ಗ್ರಾಮದ ತಮ್ಮ ನಿವಾಸಕ್ಕೆ ರಾತ್ರಿ 11:20ಕ್ಕೆ ಬೈಕ್ ನಲ್ಲಿ ತೆರಳುತ್ತಿರುವಾಗ ಗೌತಮಪುರ ಗ್ರಾಮದ ದಾನಂದೂರು ಕ್ರಾಸ್ ನಲ್ಲಿ ಬೈಕ್‌ನಲ್ಲಿ ಬಂದಿದ್ದ ಇಬ್ಬರೂ ಮಹೇಶ್ ರವರ ಬೈಕನ್ನು ಅಡ್ಡಗಟ್ಟಿ ಜೋಗಕ್ಕೆ ಹೋಗುವ ರಸ್ತೆ ಯಾವುದೆಂದು ವಿಳಾಸ ಕೇಳುವ ನೆಪದಲ್ಲಿ ಮಹೇಶ್ ಗೆ ಚಾಕು ಮತ್ತು ಲಾಂಗ್ ತೋರಿಸಿ ಕೊರಳಿನಲ್ಲಿದ್ದ 15 ಗ್ರಾಂ ಬಂಗಾರದ ಸರ, ಕೈಗೆ ಧರಿಸಿದ್ದ ಬೆಳ್ಳಿಯ ಬ್ರಾಸ್ಟೈಟ್, ಎರಡು ಐಫೋನ್ ಮೊಬೈಲ್‌ ಕಸಿದುಕೊಂಡಿದ್ದಾರೆ.

ಈ ಚಿತ್ರವು ಸಾಂದರ್ಭಿಕ ಚಿತ್ರವಾಗಿದೆ.

ಅಲ್ಲದೇ ಹಣ ಕೊಡುವಂತೆ ಹೆದರಿಸಿ ಲಾಂಗ್ ತೋರಿಸಿ ಜೇಬಿನಲ್ಲಿ ಇದ್ದ 26500 ನಗದು ಹಣವನ್ನು, ಬ್ಯಾಗಿನಲ್ಲಿ ಇದ್ದ ಬ್ಯಾಂಕುಗಳ ಚೆಕ್ ಬುಕ್ ಗಳನ್ನು ಕಸಿದುಕೊಂಡು ಶಿಕಾರಿಪುರದ ಕಡೆಗೆ ಪರಾರಿಯಾಗಿದ್ದಾರೆ.

ಈ ವಿಷಯಕ್ಕೆ ಸಂಬಂಧಪಟ್ಟಂತೆ ಮಹೇಶ್ ಪೊಲೀಸರಿಗೆ ನೀಡಿದ ದೂರಿನ ಮೇರೆಗೆ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದರೋಡೆಕೋರರ ಬಗ್ಗೆ ಆನಂದಪುರ ಪೊಲೀಸರು ಮಾಹಿತಿ ಸಂಗ್ರಹಿಸುವಲ್ಲಿ ಮುಂದಾಗಿದ್ದಾರೆ.

ಇನ್ನು ಹೆಚ್ಚಿನ ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t