ಮನೆ Blog ಜ.12 ರಂದು ಕಡ್ಲೆ ಹಂಕ್ಲು ಮಾರಿಕಾಂಬ ದೇವಿಯ ಜಾತ್ರೆಯ ಬಹಿರಂಗ ಹರಾಜು..!!

ಜ.12 ರಂದು ಕಡ್ಲೆ ಹಂಕ್ಲು ಮಾರಿಕಾಂಬ ದೇವಿಯ ಜಾತ್ರೆಯ ಬಹಿರಂಗ ಹರಾಜು..!!

72
0
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.46314833, 0.329375);sceneMode: 2;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 36;

ಆನಂದಪುರ:ಇತಿಹಾಸ ಪ್ರಸಿದ್ಧ ಆನಂದಪುರ ಕಡ್ಲೆ ಹಂಕ್ಲು ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಲಿದೆ ಇದಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಎಂದು ಗ್ರಾ.ಪಂ.ಅಧ್ಯಕ್ಷ ಗುರುರಾಜ್ ತಿಳಿಸಿದರು.

ಇವರು ಆನಂದಪುರದ ಇತಿಹಾಸ ಪ್ರಸಿದ್ಧ ಶ್ರೀ ಕಡ್ಲೆ ಹಂಕ್ಲು ಮಾರಿಕಾಂಬಾ ದೇವಿಯ ಜಾತ್ರಾ ಸಮಿತಿ ವತಿಯಿಂದ ನೂತನ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದರು.

ಶ್ರೀ ಕಡ್ಲೆ ಹಂಕ್ಲು ಮಾರಿಕಾಂಬಾ ದೇವಿಯ ಜಾತ್ರೆ ಪ್ರತಿ ಮೂರು ವರ್ಷಕ್ಕೆ ಒಮ್ಮೆ ಬರುತ್ತದೆ ಈ ಜಾತ್ರೆಯನ್ನು ಅದ್ದೂರಿಯಾಗಿ ಮಾಡಲು ಈಗಾಗಲೇ ಸಿದ್ಧತೆಗಳು ಆರಂಭವಾಗಿದೆ, ಇದಕ್ಕೆ ಸುತ್ತ ಮುತ್ತಲಿನ ಊರಿನ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಹೆಚ್ಚಿನದಾಗಿ ಸಹಕಾರ ನೀಡಿ ಸಹಕರಿಸಿ ಎಂದು ಕೋರಿದರು.

ಕಡ್ಲೆ ಹಂಕ್ಲು ಮಾರಿಕಾಂಬ ಜಾತ್ರಾ ಸಮಿತಿಯ ಅಧ್ಯಕ್ಷ ವೆಂಕಟೇಶ್ ಮಾತನಾಡಿ ಮಾರ್ಚ್ 10 ಮಂಗಳವಾರದಿಂದ 16 ರವವರೆಗೆ 7 ದಿನಗಳ ಕಾಲ ಕಡ್ಲೆ ಹಂಕ್ಲು ಮಾರಿಕಾಂಬ ದೇವಿಯ ಜಾತ್ರೆ ಅದ್ದೂರಿಯಾಗಿ ನಡೆಯಲಿದೆ.ಹಾಗೆ ಇನ್ನೇನು ಕೆಲವೇ ದಿನದಲ್ಲಿ ತಾಯಿಯ ತವರು ಮನೆಯಲ್ಲಿ ಶಿಲಾಮಯ ದೇವಾಲಯ ಕೂಡ ನಿರ್ಮಾಣವಾಗಲಿದೆ ಎಂದರು.

ಹರಾಜು ಪ್ರಕ್ರಿಯೆಗೆ ಕರೆ:

ಜನವರಿ 12ರ ಸೋಮವಾರದಂದು ಜಾತ್ರಾ ಸಮಿತಿ ವತಿಯಿಂದ ಜಾತ್ರೆಯ ಅಮ್ಯೂಸ್ಕೆಂಟ್, ದೀಪಾಲಂಕಾರ, ಅಂಗಡಿ ಮಳಿಗೆಗಳ ಹರಾಜು, ಹಾಗೂ ಡೆಕೋರೇಷನ್ ಗೆ ಬಹಿರಂಗ ಹರಾಜು ಕರೆಯಲಾಗಿದ್ದು ಆಸಕ್ತರು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳ ಬಹುದು ಎಂದು ಸಮಿತಿಯ ಸದಸ್ಯ ರವಿಕುಮಾರ್ ತಿಳಿಸಿದರು.

ಈ ಸಂದರ್ಭದಲ್ಲಿ ಸಮಿತಿಯ ಉಪಾಧ್ಯಕ್ಷರಾದ ವೇಣಾಕ್ಷ , ರಾಜುದೇವಾಡಿಗ ,ನಾರಿ ಲೋಕಪ್ಪ, ಶೇಕರಣ್ಣ, ರಾಜೇಂದ್ರ ಗೌಡ್ರು ಹಾಗೂ ಇನ್ನಿತ ಸದಸ್ಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

✒️..ಅಮಿತ್ ಆರ್ ಆನಂದಪುರ

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/IY9pAkaWjY80mynFTlPYHJ