ಮನೆ ಶಿವಮೊಗ್ಗ ಜ 20 ಕ್ಕೆ ಆನಂದಪುರ  ವೀರಾಂಜನೇಯ ಸ್ವಾಮಿಯ ರಥೋತ್ಸವ..!!

ಜ 20 ಕ್ಕೆ ಆನಂದಪುರ  ವೀರಾಂಜನೇಯ ಸ್ವಾಮಿಯ ರಥೋತ್ಸವ..!!

78
0

 ಆನಂದಪುರ :- ಪಟ್ಟಣದಲ್ಲಿ  ಪುರಾತನ ಇತಿಹಾಸವುಳ್ಳ ಬಸವನ ಬೀದಿಯ    ಶ್ರೀ ವೀರಾಂಜನೇಯ ಸ್ವಾಮಿಯ ಮಹಾ ರಥೋತ್ಸವ  ಜ 20 ಕ್ಕೆ  ನಡೆಯಲಿದೆ.

 ದೇವಾಲಯದಲ್ಲಿ  16ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ  ಜ.19  ರಿಂದ 21 ರ ವರಗೆ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

 ಜ 19ರ ಸೋಮವಾರ  ಬೆಳಗ್ಗೆ ಗಣಪತಿ ಪೂಜೆ ಯೊಂದಿಗೆ ಪ್ರಾರಂಭಗೊಂಡು ಸಂಜೆ ಯಾಗ ಶಾಲಾ ಪ್ರವೇಶ, ಪುಷ್ಪೋತ್ಸವ ನಡೆಯಲಿದೆ.ಜ 20 ನೇ ಮಂಗಳವಾರ ಮಧ್ಯಾಹ್ನ  12 ಗಂಟೆಗೆ ಶ್ರೀ ವೀರಾಂಜನೇಯ ಸ್ವಾಮಿಯ ಮಹಾ ರಥೋತ್ಸವ ನಡೆಯಲಿದ್ದು 1 ಗಂಟೆಗೆ   ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ.

 ಸಂಜೆ 6 ಕ್ಕೆ ಶ್ರೀ ವೀರಾಂಜನೇಯ ಸ್ವಾಮಿ ಮಹಿಳಾ ಭಜನಾ ಮಂಡಳಿ ಹಾಗು ಕೋಟೆ ಆಂಜನೇಯ ಸ್ವಾಮಿ ಮಹಿಳಾ ಭಜನಾ ಮಂಡಳಿ ಅವರಿಂದ  ಭಜನಾ ಕಾರ್ಯಕ್ರಮ.
 7 ಗಂಟೆಗೆ ಸೀತಾರಾಮ ಕಲ್ಯಾಣೋತ್ಸವ ಮತ್ತು ಶ್ರೀರಾಮ ಭಟ್ಟಾಭಿಷೇಕ ನಡೆಯಲಿದೆ.


ಜ .21 ನೇ ಬುಧವಾರ  ಬೆಳಗ್ಗೆ 9ಕ್ಕೆ ಶ್ರೀರಾಮ ತಾರಕ, ಇಕ್ಷಾ ಕಂಡ  ಮಹಾಯಾಗ, ಮಧ್ಯಾಹ್ನ 1.30 ಕ್ಕೆ  ಸಾಮೂಹಿಕ ಅನ್ನ ಸಂತರ್ಪಣೆ. 
ಸಂಜೆ  5 ಕ್ಕೆ  ಚನ್ನಶೆಟ್ಟಿಕೊಪ್ಪ ಜಾನಪದ ಕಲಾ ಸಂಘದವರಿಂದ ಸಂಸ್ಕೃತ ಕಾರ್ಯಕ್ರಮ. 6.30ಕ್ಕೆ  ಧಾರ್ಮಿಕ ಸಭಾ ಕಾರ್ಯಕ್ರಮ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ನಡೆಯಲಿದೆ.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು  ಬಂಗಾರ ಮಕ್ಕಿಯ ಮಾರುತಿ ಗುರೂಜಿ ವಹಿಸಲಿದ್ದಾರೆ. ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿ,  ಡಾ. ರಾಮಪ್ಪ ಸಿಗಂದೂರು, ಶ್ರೀಧರ್ ಭಟ್ ಗಮಿಕರ, ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು, ಉಡುಪಿ ಚಿಕ್ಕಮಂಗಳೂರು ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಎಮ್. ಮಹೇಂದ್ರ  ದಾನಿಗಳು  ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಮಾಜಿ ಸಚಿವ ಹರತಾಳ ಹಾಲಪ್ಪ ಸೇರಿದಂತೆ  ಅನೇಕ ಗಣ್ಯರು ಭಾಗವಹಿಸಲಿದ್ದಾರೆ. 

ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತನು- ಮನ- ಧನದೊಂದಿಗೆ ಸಹಕರಿಸಿ ಎಂದು  ಶ್ರೀ ವೀರಾಂಜನೇಯ ಸ್ವಾಮಿ ಸೇವಾ ಟ್ರಸ್ಟ್ ನ ಅಧ್ಯಕ್ಷ ಕೆ. ಹಾಲಪ್ಪ ಪತ್ರಿಕೆಗೆ ತಿಳಿಸಿದ್ದಾರೆ. 

✒️…ಅಮಿತ್ ಆರ್ ಆನಂದಪುರ

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/IY9pAkaWjY80mynFTlPYHJ