ಮನೆ Blog ಟಿಟಿ ಪಲ್ಟಿ…!!ಸಿಗಂದೂರು ಚೌಡೇಶ್ವರಿ ದರ್ಶಕ್ಕೆ ತೆರಳುತ್ತಿದ್ದ 12 ಮಹಿಳೆಯರಿಗೆ ಗಾಯ..!!

ಟಿಟಿ ಪಲ್ಟಿ…!!ಸಿಗಂದೂರು ಚೌಡೇಶ್ವರಿ ದರ್ಶಕ್ಕೆ ತೆರಳುತ್ತಿದ್ದ 12 ಮಹಿಳೆಯರಿಗೆ ಗಾಯ..!!

168
0

ಸಿಗಂದೂರು ರಸ್ತೆಯಲ್ಲಿ ಟಿಟಿ ವಾಹನವೊಂದು ಪಲ್ಟಿಯಾಗಿದೆ. ಪರಿಣಾಮ ಈ ಘಟನೆಯಲ್ಲಿ 13 ಮಂದಿಗೆ ಗಾಯವಾಗಿದೆ. ಗಾಯಾಳುಗಳನ್ನು ಸಾಗರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಳಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗಾಯಾಳುಗಳ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಿದ್ದಾರೆ.

ಬೆಂಗಳೂರು ಮೂಲದ ಪ್ರವಾಸಿಗರು ಸಿಗಂದೂರು ಚೌಡೆಶ್ವರಿಯ ದರ್ಶನಕ್ಕಾಗಿ ಸಾಗರದವರೆಗೂ ಟ್ರೈನ್ ನಲ್ಲಿ ಬಂದಿದ್ದರು. ಅಲ್ಲಿಂದ ಟೆಂಪೋ ಟ್ರಾವೆಲರ್ (TT) ವಾಹನವೊಂದನ್ನ ಬುಕ್ ಮಾಡಿಕೊಂಡು ಸಿಗಂದೂರಿಗೆ ಹೊರಟಿದ್ದರು.

ಕೂರನಕೊಪ್ಪ ಗ್ರಾಮದ ಬಳಿ ಟಿಟಿ ಪಲ್ಟಿಯಾಗಿದೆ ವಾಹನದಲ್ಲಿ ಪ್ರಯಾಣಿಸುತ್ತಿದ್ದ 12 ಮಹಿಳೆಯರು ಮತ್ತು ಚಾಲಕ ಸೇರಿ ಒಟ್ಟು 13 ಮಂದಿ ಗಾಯಗೊಂಡಿದ್ದಾರೆ..ಘಟನೆಗೆ ಕಾರಣ ಸ್ಪಷ್ಟವಾಗಿಲ್ಲ. ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸಾಗರ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಶಿವಮೊಗ್ಗದ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.,

ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಜಾಯಿನ್ ಆಗಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t