ಮನೆ ಶಿವಮೊಗ್ಗ ತಾಲೂಕಿನ ಜನತೆಗೆ ಮೂಲಭೂತ ಸೌಕರ್ಯರದ ಕೊರತೆ ಆಗದಂತೆ ನೋಡಿಕೊಳ್ಳುತ್ತೇನೆ: ಗೋಪಾಲಕೃಷ್ಣ ಬೇಳೂರು

ತಾಲೂಕಿನ ಜನತೆಗೆ ಮೂಲಭೂತ ಸೌಕರ್ಯರದ ಕೊರತೆ ಆಗದಂತೆ ನೋಡಿಕೊಳ್ಳುತ್ತೇನೆ: ಗೋಪಾಲಕೃಷ್ಣ ಬೇಳೂರು

23
0

ಆನಂದಪುರ:

ಸಾಗರ ಮತ್ತು ಹೊಸನಗರ ತಾಲೂಕಿನ ವ್ಯಾಪ್ತಿಯಲ್ಲಿ ಜನಸಾಮಾನ್ಯರಿಗೆ ಯಾವುದೇ ರೀತಿಯ ಮೂಲಸೌಕರ್ಯದ ಕೊರತೆ ಆಗದಂತೆ ನಾನು ನೋಡಿಕೊಳ್ಳುತ್ತಿದ್ದೇನೆ ಎಂದು ಶಾಸಕರಾದ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ಇವರು ಆನಂದಪುರ ಸಮೀಪದ ಗೌತಮಪುರ ಪಂಚಾಯತಿ ವ್ಯಾಪ್ತಿಯ ಹಲವಾರು ಕಾಮಗಾರಿಕೆ ಉದ್ಘಾಟಿಸಿ ಮಾತನಾಡಿದರು.

ನಮ್ಮ ಕ್ಷೇತ್ರದಲ್ಲಿ ಯಾವ ಊರಿನಲ್ಲಿ ಜಾತ್ರೆ ನಡೆಯುತ್ತಿದೆಯೋ ಆ ಭಾಗದಲ್ಲಿ ಆದಷ್ಟು ಬೇಗನೆ ಜಾತ್ರೆಯೊಳಗೆ ರಸ್ತೆ ಮಾಡಿಕೊಡುವ ವ್ಯವಸ್ಥೆಯನ್ನು ಮಾಡುತ್ತಿದ್ದೇನೆ ಎಂದರು.

ಮಳೆ ಮಾಪನ ಇಲ್ಲವೆಂದು ತಾಲೂಕಿನ ಅನೇಕ ರೈತರಿಗೆ ಬೆಳೆ ವಿಮೆ ಬಂದಿಲ್ಲ ಇದನ್ನು ಕೊಡಲು ನಾನು ಮನವಿ ಮಾಡಿದ್ದೇನೆ ಒಂದು ವೇಳೆ ಆದಷ್ಟು ಬೇಗನೆ ಬೆಳೆ ವಿಮೆಯನ್ನು ರೈತರಿಗೆ ನೀಡಲಿಲ್ಲವೆಂದರೆ ಮುಂದಿನ ಅಧಿವೇಶನದಲ್ಲಿ ನನ್ನದೊಂದು ಹೋರಾಟವಿದೆ ಎಂದು ತಿಳಿಸಿದರು.

ನಮ್ಮ ಭಾಗದಲ್ಲಿ ರೈತರ ಜಮೀನಿಗೆ ಆನೆಗಳು ಈಗ ಬಂದಿದ್ದು ಇದರಿಂದ ರೈತರ ಬೆಳೆದ ಬೆಳೆ ಬಹಳಷ್ಟು ಹಾನಿಗೊಳಗಾಗುತ್ತಿದೆ ಇದನ್ನು ತಡೆಗಟ್ಟಲು ಮುಂದಿನ ದಿನಗಳಲ್ಲಿ 30 ಕಿ.ಮೀ ನಷ್ಟು ಕಾಲುವೆಯನ್ನು ಹೊಡೆಸುವ ಕೆಲಸ ಮಾಡಿಸುತ್ತೇನೆ ಹಾಗೆಯೇ ಆನೆ ರೈತರ ಜಮೀನಿಗೆ ನುಗ್ಗಿ ಹಾನಿಗೊಳಗಾದವರಿಗೆ ವೈಯಕ್ತಿಕವಾಗಿ ನಾನು ಸಹಾಯವನ್ನು ಮಾಡಿದ್ದೇನೆ ಹಾಗೂ ಸರ್ಕಾರ ದಿಂದ ಬರುವ ಪರಿಹಾರದ ಹಣವನ್ನು ಆದಷ್ಟು ಬೇಗನೆ ದೊರಕಿಸಿ ಕೊಡುವ ಕೆಲಸ ಮಾಡುಸಿಕೊಡುತ್ತೇನೆ ಎಂದರು.

ರೈತರಿಗೆ ಸುಮ್ಮಸುಮ್ಮನೆ ನೋಟಿಸ್ ಗಳನ್ನು ಕೊಟ್ಟು ಎದುರಿಸುವ ಕೆಲಸವನ್ನು ಮಾಡಬೇಡಿ ಎಂದು ಅರಣ್ಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಾಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ಮುಖಂಡರಾದ ಸೋಮಶೇಖರ್ ಲಾವಿಗೆರೆ ,ಅಶೋಕ್ ಬೇಳೂರು, ಅನಿತಾ ಕುಮಾರಿ, ಹೇಮಾ ರಾಜಪ್ಪ, ಗ್ರಾ.ಪಂ ಅಧ್ಯಕ್ಷೆ ರೇಣುಕಾ, ಉಪಾಧ್ಯಕ್ಷ ಅಶೋಕ್, ಸದಸ್ಯರಾದ ಮಂಜುನಾಥ್ ದಾಸನ್, ಗಂಗಮ್ಮ ಹಾಗೂ ಇನ್ನಿತರ ಸದಸ್ಯರು ಮತ್ತು ಪ್ರಮುಖರಾದ ಶೇಖರಪ್ಪ ಸಂಗಣ್ಣನ ಕೆರೆ ಇನ್ನಿತರರು ಪಾಲ್ಗೊಂಡಿದ್ದರು.

ಹೆಚ್ಚಿನ ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ;https://chat.whatsapp.com/CnYYumPSez6AMYyw8cHG9A?mode=ac_t