ದಲಿತರು ನೀಡಿರುವ ದೂರನ್ನು ದಾಖಲಿಸಿಕೊಳ್ಳದೇ ದಲಿತರ ಮೇಲೆಯೇ ದೂರನ್ನು ದಾಖಲಿಸಿ, ದಲಿತರಿಗೆ ಅವಮಾನ ಮತ್ತು ಅಪಮಾನ ಮಾಡಿದ ಆನಂದಪುರ ಪಿ.ಎಸ್.ಐ. ರವರನ್ನು ಮತ್ತು ಹೆಚ್ .ಎಸ್.ಓ.ರವರನ್ನು ಅಮಾನತ್ತುಗೊಳಿಸುವಂತೆ ಮತ್ತು ದಲಿತರ ಮೇಲೆ ದಾಖಲಿಸಿರುವ ಸುಳ್ಳುದೂರನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಡಿ.ಜಿ ಸಾಗರ್ ಬಣದ ಸಂಚಾಲಕರಾದ ನಟರಾಜ್ ಗೇರ್ ಬೀಸ್ ಒತ್ತಾಯಿಸಿದರು.
ಇವರು ಇಂದು ಆನಂದಪುರ ಬಸ್ ನಿಲ್ದಾಣದಿಂದ ಪೊಲೀಸ್ ಠಾಣೆಯವರಿಗೆ ಧರಣಿ ಸತ್ಯಾಗ್ರಹದ ಮೂಲಕ ನಡೆದು ಹೋಗಿ ಸಾಗರ ವೃತ್ತ ನಿರೀಕ್ಷಕರಾದ ಸಂತೋಷ್ ಶೆಟ್ಟಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.

15 ಜನವರಿಯ ಮಧ್ಯರಾತ್ರಿ ಶರತ್ ಚಂದಳ್ಳಿ ಎಂಬುವವರು ನಾಲೈದು ಜನ ಗೂಂಡಾಗಳನ್ನು ಕರೆದುಕೊಂಡು ಕುಡಿದ ಮತ್ತಿನಲ್ಲಿ ರಾತ್ರಿ ಸುಮಾರು 1-30ರ ಸಮಯಕ್ಕೆ ದರ್ಶನ್ ಎಂಬುವವರ ಮನೆಗೆ ನುಗ್ಗಿ ದಾಂದಲೇ ನಡೆಸಿ ಕೊಲೆ ಬೆದರಿಕೆ ಹಾಕಿ ನಂತರ ಕೊರ್ಲಿಕೊಪ್ಪ ಗ್ರಾಮದ ಈಶ್ವರ ದೇವಸ್ಥಾನದ ಹತ್ತಿರ ದರ್ಶನ್ ಮತ್ತು ಶಿವರಾಮ್ ಬಿನ್ ಸೋಮಶೇಖರ ಇವರು ಆನಂದಪುರದ ಕಡೆಗೆ ತಮ್ಮ ಕಾರ್ಪಿಯಾ ವಾಹನದಲ್ಲಿ ಹೋಗುತ್ತಿರುವವರನ್ನು ಶರತ್ ಮತ್ತು ಅವನ ಸಹಚರರು ಸೇರಿಕೊಂಡು ಮಾರುತಿ ಬ್ರೀಜ ವಾಹನದಲ್ಲಿ ಬಂದು ಅಡ್ಡಗಟ್ಟಿ ಕಿಡ್ನಾಪ್ ಹಾಗೂ ಕೊಲೆ ಪ್ರಯತ್ನಕ್ಕೆ ಮತ್ತು ಜಾತಿ ನಿಂದನೆ ಹಾಗೂ ದೈಹಿಕ ಹಲ್ಲೆ ಮಾಡಿರುವುದನ್ನು ನಮ್ಮ ಸಂಘಟನೆಯು ತೀವ್ರವಾಗಿ ಖಂಡಿಸುತ್ತದೆ.
ಇದೇ ದಿನ ರಾತ್ರಿ ಶಿವರಾಮ್, ದರ್ಶನ್‌ರವರು ಪ್ರಾಥಮಿಕ ಆರೋಗ್ಯಕೇಂದ್ರ ಆನಂದಪುರಕ್ಕೆ ಬಂದು ಎಂಎಲ್‌ಸಿಯನ್ನು ಮಾಡಿಸಿ ಹೆಚ್.ಎಂ.ಆರ್. ರಿಪೋರ್ಟನ್ನು ಸದರಿ ಠಾಣೆಗೆ-ಸಂಬಂಧಪಟ್ಟ ವೈದ್ಯಾಧಿಕಾರಿಗಳು ನೀಡಿರುತ್ತಾರೆ. ಅಂದರೆ ಆನಂದಪುರ ಠಾಣೆಯ ಅಂದಿನ ಹೆಚ್ ಎಸ್.ಓ. ಅವರು ಸದರಿ ವ್ಯಕ್ತಿಗಳ ಹೇಳಿಕೆ ಪಡೆಯದೇ ಇಲ್ಲ ಸಲ್ಲದ ಕಾರಣ ಹೇಳಿ ಕರ್ತವ್ಯಲೋಪವೆಸಗಿರುತ್ತಾರೆ. ಎದುರು ದೂರುದಾರರಾದ ಶರತ್ ಚಂದಳ್ಳಿ ಹೇಳಿಕೆಯನ್ನು ಮಾತ್ರ ಪಡೆದು ದರ್ಶನ್ ಮತ್ತು ಶಿವರಾಮ್ ಸಂಗಡಿಗರ 3 ಜನರ ಮೇಲೆ ಆತುರ ಆತುರವಾಗಿ ಯಾವುದೊ ಆಮಿಷಕ್ಕೆ ಒಳಗಾಗಿ ಸಕ್ಷನ್ 307 ಕೇಸನ್ನು “ದಾಖಲಿಸಿಕೊಂಡು ಸದರಿ ವ್ಯಕ್ತಿಗಳನ್ನು ಜೈಲಿಗೆ ಕಳುಹಿಸಿರುತ್ತಾರೆ.

ಅಂದರೆ ಇದೇ ದಿನ ಶಿವರಾಮ ಬಿನ್ ಸೋಮಶೇಖರ ಇವರು ಕಿಡ್ನಾಪ್ ಕೊಲೆ ಪ್ರಯತ್ನ ಹಾಗೂ ಜಾತಿ ನಿಂದನೆಗೆ ಸಂಬಂದಪಟ್ಟ ದೂರನ್ನು ನೀಡಿದ್ದರೂ ಸಹ ಇವರ ದೂರನ್ನು ಕೇಸುದಾಖಲಿಸಿಕೊಳ್ಳದೇ ದಲಿತರಿಗೆ ಆನಂದಪುರ ಪಿ.ಎಸ್.ಐ. ಕರ್ತವ್ಯಲೋಪ ಎಸಗಿರುತ್ತಾರೆ ಇದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಈ ಎಲ್ಲಾ ವಿಚಾರಗಳನ್ನು ಕೂಲಂಕುಷವಾಗಿ ನೋಡಿದ್ದರೆ ಇದೂ ಒಂದು ರೀತಿಯ ದಲಿತರ ಮೇಲೆ ನಡೆದ ದೌರ್ಜನ್ಯ ,ದಬ್ಬಾಳಿಕೆ ಯಾಗಿದೆ.ಇದರ ವಿರುದ್ಧ ನಮ್ಮ ಸಂಟನೆಯವರು ಏತಕ್ಕೆ ಎಫ್ ಐಆರ್ ದಾಖಲಿಸಿಕೊಳ್ಳಲಿಲ್ಲ ಎಂದು ಕೆಳಿದರೆ ಮಾನ್ಯ ಎಸ್.ಪಿ. ಹಾಗೂ ಮಾನ್ಯ ಡಿ.ವೈ.ಎಸ್.ಪಿ.ಯವರ ಕಡೆಗೆ ಬೊಟ್ಟು ಮಾಡಿ ತೋರಿಸಿ, ಹಾರಿಕೆ ಉತ್ತರವನ್ನು ನೀಡಿರುತ್ತಾರೆ.
ಈ ವಿಚಾರವಾಗಿ ನಮ್ಮ ಸಂಘಟನೆಯು ಪ್ರತಿಭಟನೆ ಮಾಡುತ್ತದೆಯೆಂದೂ ವಿಷಯ ತಿಳಿದುಕೊಂಡು ದಿನಾಂಕ : 27 ಜನವರಿ ರಂದು ತಡವಾಗಿ ಎಫ್‌ಐ.ಆರ್ ದಾಖಲಿಸಿಕೊಂಡಿರುತ್ತಾರೆ. ಆದ್ದರಿಂದ ಆನಂದಪುರ ಪಿ.ಎಸ್.ಐ. ಹಾಗೂ ಅಂದಿನ ಹೆಚ್.ಎಸ್.ಓ. ರವರು ಕರ್ತವ್ಯಲೋಪ ಎಸಗಿರುವುದು ಕಂಡು ಬರುತ್ತದೆ ನಮ್ಮ ಸಂಘಟನೆಯು ಇಂತಹ ಪೊಲೀಸ್ ಅಧಿಕಾರಿಗಳನ್ನು ಅಮಾನತ್ತು ಮಾಡುವಂತೆ ಹಾಗೂ ಶರತ್ ಚಂದಳ್ಳಿ ಎಂಬ ಆರೋಪಿಯನ್ನು ಬಂದಿಸಿ, ಜೈಲಿಗೆ ಕಳಿಸುವಂತೆ ಮತ್ತು ಶಿವರಾಮ ಮತ್ತು ಸಂಗಡಿಗರ ಮೇಲೆ ಹಾಕಿರುವ ಸುಳ್ಳು ಕೇಸನ್ನು ನಿಷ್ಪಕ್ಷಪಾತ ತನಿಖೆ ನಡೆಸಿ, ಎಂದು ಆಗ್ರಹಿಸಿದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ದುರ್ಗಾ ಭೋವಿ ಮಾತನಾಡಿ ನಮ್ಮ ಬೇಡಿಕೆಗಳು ಈಡೇರದೇ ಹೋದಲ್ಲಿ ಆನಂದಪುರದಿಂದ ಶಿವಮೊಗ್ಗ ಎಸ್ ಪಿ.ಕಛೇರಿಯವರೆಗೆ ಪಾದಯಾತ್ರೆ ಮಾಡಿ ಧರಣಿ ಸತ್ಯಾಗ್ರಹವನ್ನು ಮಾಡುತ್ತೇವೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಂಘಟನೆ ಪ್ರಮುಖರಾದ ಶೇಖರ್ , ಉಮೇಶ್ ಸುಂಟಿಕೊಪ್ಪ, ಮಂಜಣ್ಣ ಗಾಂಧಿನಗರ. ಗಣಪತಿ ಇರುವಕ್ಕಿ.ಹರೀಶ ಇರುವಕ್ಕಿ. ಪೃಥ್ವಿ ಇರುವಕ್ಕಿ,ಗಂಗಾಧರ ಎಡೇಹಳ್ಳಿ,ದೊರೆ ಅಂದಾಸುರ. ಮಂಜುನಾಥ್ ಆಚಾರ್ ಇನ್ನಿತರರು ಪಾಲ್ಗೊಂಡಿದ್ದರು.
ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t









