ಶಿವಮೊಗ್ಗ: ಅರಣ್ಯ ಸಂಚಾರಿ ದಳ ಸಾಗರದ ಪಿ.ಎಸ್.ಐ ವಿನಾಯಕರವರ ನೇತೃತ್ವದಲ್ಲಿ ದಾಳಿಯಲ್ಲಿ ಅಕ್ರಮವಾಗಿ ತಂದು ಇಟ್ಟುಕೊಂಡಿದ್ದ ಭಾರತೀಯ ಕಪ್ಪು ಆಮೆ ಸ್ಥನಿಯನ್ನು ರಕ್ಷಿಸಿದ್ದಾರೆ.
ಶಿವಮೊಗ್ಗದ ನಗರದ ಬೆಕಲ್ಲು , ಸಿದ್ದೇಶ್ವರ ನಗರದಲ್ಲಿ ದಾಳಿ ನಡೆಸಿದ ಅರಣ್ಯ ಸಂಚಾರಿ ದಳ ಸಾಗರದ ಪಿ.ಎಸ್.ಐ ವಿನಾಯಕರವರ ತಂಡ ಅಕ್ರಮವಾಗಿ ತಂದು ಇಟ್ಟುಕೊಂಡಿದ್ದ ಕಪ್ಪು ಆಮೆ ವಶಪಡಿಸಿಕೊಂಡಿದ್ದಾರೆ.

ನಂತರ ಆರೋಪಿಯಾದ ಮಹಮದ್ ಸಮೀಉಲ್ಲ ಬಿನ್ ಹಮೀರ್ ವಶಕ್ಕೆ ಪಡೆದು ಷೆಡ್ಯೂಲ್ 2 ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಅಡಿಯಲ್ಲಿ ಪ್ರಕರಣ ದಾಖಲಾಗಿಸಿ ,ನ್ಯಾಯಾಲಯಕ್ಕೆ ಆರೋಪಿಯನ್ನು ಹಾಜರು ಪಡಿಸಲಾಗಿದೆ ಎಂದು ಮಾಹಿತಿ ಪಿಎಸ್ಐ ವಿನಾಯಕ ರವರು ನೀಡಿದ್ದಾರೆ.

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t









