ದೀಪಾವಳಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ನಿರೀಕ್ಷಿತ ದಟ್ಟಣೆ ನಿರ್ವಹಿಸಲು, ನೈಋತ್ಯ ರೈಲ್ವೆಯು ಯಶವಂತಪುರ– ತಾಳಗುಪ್ಪ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು, ಕೆಎಸ್‌ಆರ್ ಬೆಂಗಳೂರು – ಶಿವಮೊಗ್ಗ ಟೌನ್ ನಡುವೆ ಹಾಗೂ ಬೆಂಗಳೂರು ಕಂಟೋನ್ಮಂಟ್ – ಶಿವಮೊಗ್ಗ ಟೌನ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೈಲುಗಳ ವಿವರಗಳು ಇಲ್ಲಿದೆ:
ರೈಲು ಸಂಖ್ಯೆ 06587 ಯಶವಂತಪುರ–ತಾಳಗುಪ್ಪ ವಿಶೇಷ ರೈಲು: ಅಕ್ಟೋಬರ್ 24 ರಂದು ರಾತ್ರಿ 10.30ಕ್ಕೆ ಯಶವಂತಪುರದಿಂದ ಹೊರಟು -ಮರುದಿನ ಬೆಳಗ್ಗೆ 4.15ಕ್ಕೆ ತಾಳಗುಪ್ಪ ತಲುಪಲಿದೆ.

ರೈಲು ಸಂಖ್ಯೆ 06588 ತಾಳಗುಪ್ಪ–ಯಶವಂತಪುರ ವಿಶೇಷ ರೈಲು: ಅಕ್ಟೋಬರ್ 25 ರಂದು ಬೆಳಗ್ಗೆ 10ಕ್ಕೆ ತಾಳಗುಪ್ಪದಿಂದ ಹೊರಟು- ಸಂಜೆ 5.15ಕ್ಕೆ ಯಶವಂತಪುರ ತಲುಪಲಿದೆ.
ರೈಲು ಸಂಖ್ಯೆ 06225 ವಿಶೇಷ ರೈಲು: ಅಕ್ಟೋಬರ್ 22 ರಂದು ಬೆಳಿಗ್ಗೆ 8:05ಕ್ಕೆ ಕೆಎಸ್‌ಆರ್ ಬೆಂಗಳೂರು ನಿಲ್ದಾಣದಿಂದ ಹೊರಟು, ಅದೇ ದಿನ ಮಧ್ಯಾಹ್ನ 1 ಗಂಟೆಗೆ ಶಿವಮೊಗ್ಗ ಟೌನ್ ತಲುಪಲಿದೆ.
ಮರಳಿ ರೈಲು ಸಂಖ್ಯೆ 06226 ಅಕ್ಟೋಬರ್ 22ರಂದು ಸಂಜೆ 5:15 ಗಂಟೆಗೆ ಶಿವಮೊಗ್ಗ ಟೌನ್‌ನಿಂದ ಹೊರಟು, ಅದೇ ದಿನ ರಾತ್ರಿ 10:45 ಗಂಟೆಗೆ ಕೆಎಸ್‌ಆರ್ ಬೆಂಗಳೂರು ತಲುಪಲಿದೆ.
ರೈಲು ಸಂಖ್ಯೆ 06215 ವಿಶೇಷ ರೈಲು: ಅಕ್ಟೋಬರ್ 22ರಂದು ಬೆಳಿಗ್ಗೆ 10:45ಕ್ಕೆ ಬೆಂಗಳೂರು ಕಂಟೋನ್ಮಂಟ್‌ನಿಂದ ಹೊರಟು, ಅದೇ ದಿನ ಸಂಜೆ 6ಕ್ಕೆ ಶಿವಮೊಗ್ಗ ಟೌನ್ ತಲುಪಲಿದೆ.

ಮರಳಿ, ರೈಲು ಸಂಖ್ಯೆ 06216 ಅಕ್ಟೋಬರ್ 22 ರಂದು ರಾತ್ರಿ 11:55 ಗಂಟೆಗೆ ಶಿವಮೊಗ್ಗ ಟೌನ್‌ನಿಂದ ಹೊರಟು, ಮರುದಿನ ಬೆಳಿಗ್ಗೆ 7 ಗಂಟೆಗೆ ಬೆಂಗಳೂರು ಕಂಟೋನ್ಮಂಟ್ ತಲುಪಲಿದೆ.
ನಿರಂತರ ಸುದ್ದಿಗಾಗಿ ನಮ್ಮಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t









