Home Shivamogga ದೊಡ್ಮನೆ ಗ್ರಾ.ಪಂ. ಚುನಾವಣೆಗೆ ಯುವ ಅಭ್ಯರ್ಥಿಯಾಗಿ ಗಜಾನನ ಕೊಡಿಗದ್ದೆ ಎಂಟ್ರಿ..!!

ದೊಡ್ಮನೆ ಗ್ರಾ.ಪಂ. ಚುನಾವಣೆಗೆ ಯುವ ಅಭ್ಯರ್ಥಿಯಾಗಿ ಗಜಾನನ ಕೊಡಿಗದ್ದೆ ಎಂಟ್ರಿ..!!

47
0

ಸಿದ್ದಾಪುರ: ತಾಲೂಕಿನ ಮುಂಬರುವ ದೊಡ್ಮನೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಯುವ ಅಭ್ಯರ್ಥಿಯಾಗಿ ಗಜಾನನ ಕೊಡಿಗದ್ದೆ ಮೊದಲ ಬಾರಿಗೆ ಸ್ಪರ್ಧಿಸಲಿದ್ದಾರೆ. ಇವರು ವಿವಿಧ ಸಾಮಾಜಿಕ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿರುವ ಅನುಭವ ಹೊಂದಿರುವ ಅವರು, ಯುವಕರೊಂದಿಗೆ ಉತ್ತಮ ಸ್ನೇಹ ಮತ್ತು ಒಡನಾಟ ಬೆಳೆಸಿಕೊಂಡಿದ್ದಾರೆ.

ರಾಜಕೀಯ, ಸಾಮಾಜಿಕ ಕ್ಷೇತ್ರ ಹಾಗೂ ಉದ್ಯಮ ವಲಯದಲ್ಲಿ ಈಗಾಗಲೇ ಸಕ್ರಿಯವಾಗಿರುವ ಸಹೋದರ ನಾಗರಾಜ ಸಿದ್ದಾಪುರ ಅವರ ಬಲವಾದ ಬೆಂಬಲ, ಮಾರ್ಗದರ್ಶನ ಮತ್ತು ಪ್ರೇರಣೆಯೇ ಗಜಾನನ ಕೊಡಿಗದ್ದೆ ಅವರು ಚುನಾವಣಾ ಕಣಕ್ಕೆ ಇಳಿಯಲು ಪ್ರಮುಖ ಶಕ್ತಿಯಾಗಿದೆ.

ಈ ಕುರಿತು ಮಾತನಾಡಿದ ಗಜಾನನ ಕೊಡಿಗದ್ದೆ, “ಯುವಕರು ಚುನಾವಣೆಯಲ್ಲಿ ಸ್ಪರ್ಧಿಸಿ ನಾಯಕತ್ವ ವಹಿಸಬೇಕು. ಬದಲಾವಣೆ ಮತ್ತು ಅಭಿವೃದ್ಧಿಯತ್ತ ಸಮಾಜ ಸಾಗಬೇಕಾದರೆ ಯುವ ಸಮುದಾಯ ರಾಜಕೀಯದಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಅಗತ್ಯ,” ಎಂದು ಹೇಳಿದರು.

ಜಾಹೀರಾತು