ಶಿವಮೊಗ್ಗ:
ನಾನು ಇನ್ಮುಂದೆ ಯಾವ ಚುನಾವಣೆಗೂ ನಿಲ್ಲಲ್ಲ. ಆದರೆ ನಾನು ನಿಮ್ಮ ಜೊತೆಗೆ ಇರುತ್ತೇನೆ ಎಂದು ಗೀತಾ ಶಿವರಾಜ್ ಕುಮಾರ್ ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ನ ನೂತನ ಅಧ್ಯಕ್ಷರಾದ ಶ್ವೇತಾ ಬಂಡಿ ಅವರ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಮಂಜುನಾಥ ಭಂಡಾರಿ ಅವರಿಗೆ ನಾನು ಇನ್ಮುಂದೆ ಚುನಾವಣೆಯ ಸಮಸ್ಯೆಯನ್ನೇ ಕೊಡಲ್ಲ.

ನನ್ನ ತಮ್ಮ ಮಧು ಇದ್ದಾನೆ. ಅವನನ್ನು ಬಿಡಬೇಡಿ ನಿಮ್ಮ ಕೆಲಸ ಮಾಡಿಸಿಕೊಳ್ಳಿ. ನಾನು ಬೆಂಗಳೂರಿನಲ್ಲಿ ಇದ್ದಾಗ ನನಗೆ ಏನೇ ಕಷ್ಟ ಅಂತ ಬಂದ್ರು ಸಹ ನನ್ನ ಜೊತೆಯಲ್ಲಿ ನನ್ನ ತಮ್ಮ ಮಧು ಬಂಗಾರಪ್ಪ ಇದ್ದ. ಅವನಿಗೆ ಏನೇ ಕಷ್ಟ ಇದ್ರು ಸಹ ಅವನು ಯಾವಗಲೂ ನನ್ನ ಜೊತೆಗೆ ಇದ್ದಾನೆ ಎಂದು ಹೇಳಿದರು.
ಸೌಮ್ಯ ರೆಡ್ಡಿ ಅವರಿಗೆ ತುಂಬ ಧೈರ್ಯ ಇದೆ. ಅವರು ಪಕ್ಷವನ್ನು ಮುಂದೆ ತೆಗೆದುಕೊಂಡು ಹೋಗುತ್ತಾರೆ. ಮುಂದೆ ಕರೆದರೆ ನಾನು ಸಹ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುತ್ತೇನೆ. ಮಹಿಳೆಯರು ಯಾವತ್ತೂ ಅಬಲೆಯರಲ್ಲ, ಅವರಲ್ಲಿ ಧೈರ್ಯ, ಶಕ್ತಿ, ಸಾಮರ್ಥ್ಯ ಇದ್ದು, ಅವರು ಏನನ್ನಾದರೂ ಸಾಧಿಸುತ್ತಾರೆ ಎಂದು ಗೀತಾ ಶಿವರಾಜ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

ಶ್ವೇತ ಬಂಡಿ ಅವರು ಎಲ್ಲಾರನ್ನು ಒಟ್ಟುಗೂಡಿಸಿಕೊಂಡು ಹೋಗಬೇಕಿದೆ. ನನ್ನ ಚುನಾವಣಾ ಪ್ರಚಾರದಲ್ಲಿ ಶ್ವೇತ ಬಂಡಿ ಭಾಗಿಯಾಗಿ ನನಗಿಂತ ಚೆನ್ನಾಗಿ ಮಾತನಾಡುತ್ತಿದ್ದರು.
ನಾನು ಶಿವಮೊಗ್ಗಕ್ಕೆ ಬರಬೇಕು ಎಂದು ಇತ್ತು, ಆದರೆ ಶಿವಣ್ಣನವರ ಆರೋಗ್ಯ ಹದಗೆಟ್ಟ ಕಾರಣದಿಂದ ನಾನು ಬರಲು ಆಗಲಿಲ್ಲ. ನಾನು ಇನ್ಮುಂದೆ ಮುಂದೆ ಏನೇ ಆದ್ರೂ ಸಹ ನಿಮ್ಮ ಜೊತೆಗೆ ಇರುತ್ತೇನೆ ಎಂದು ಭರವಸೆ ನೀಡಿದರು.
ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ https://chat.whatsapp.com/CnYYumPSez6AMYyw8cHG9A?mode=ac_t









