ಮನೆ Blog ನಾವೆಲ್ಲರೂ ದೇಶದ ಸಮಗ್ರತೆ ಮತ್ತು ಏಕತೆ ಕಾಪಾಡುವ ಜವಾಬ್ದಾರಿ ಹೊರಬೇಕು: ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ್ ಶೆಟ್ಟಿ..!!

ನಾವೆಲ್ಲರೂ ದೇಶದ ಸಮಗ್ರತೆ ಮತ್ತು ಏಕತೆ ಕಾಪಾಡುವ ಜವಾಬ್ದಾರಿ ಹೊರಬೇಕು: ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ್ ಶೆಟ್ಟಿ..!!

88
0

ಆನಂದಪುರ:

ದೇಶದ ಸಮಗ್ರತೆ ಮತ್ತು ಏಕತೆ ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ್ ಶೆಟ್ಟಿ ತಿಳಿಸಿದರು.

ಇವರು ರಾಷ್ಟ್ರೀಯ ಏಕತಾ ದಿನದ ಪ್ರಯುಕ್ತ ಆನಂದಪುರ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಂಡಿದ್ದಂತಹ ರನ್ ಫಾರ್ ಯೂನಿಟಿ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಭಾರತಕ್ಕೆ ಸ್ವತಂತ್ರ ಬಂದ ಬಳಿಕ 560ಕ್ಕೂ ಹೆಚ್ಚು ದೇಶಿಯ ಸಂಸ್ಥಾನಗಳು ಇದ್ದವು ಅವನೆಲ್ಲ ಒಂದು ಗೂಡಿಸಿ ಅಖಂಡ ಭಾರತವನ್ನು ನಿರ್ಮಾಣ ಮಾಡಲು ಮುಂದಾದ ಕೀರ್ತಿ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಬಾಯ್ ಪಟೇಲರಿಗೆ ಸಲ್ಲುತ್ತದೆ.

ಇತ್ತೀಚಿನ ದಿನಗಳಲ್ಲಿ ದೇಶದ ಸಾರ್ವಭೌಮತೆಗೆ ಧಕ್ಕೆ ತರುವ ಕೆಲಸವಾಗುವುತ್ತಿದೆ ಈ ನಿಟ್ಟಿನಲ್ಲಿ ನಾವೆಲ್ಲರೂ ದೇಶದ ಸಮಗ್ರತೆ ಮತ್ತು ಏಕತೆ ಕಾಪಾಡುವ ಜವಾಬ್ದಾರಿ ಹೊರಬೇಕು ಎಂದರು.

ಆನಂದಪುರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರವೀಣ್ ಮಾತನಾಡಿ ವೇಷ ಬೇರೆ ,ಭಾಷೆ ಬೇರೆ ,ದೇಶ ಒಂದೆ ಭಾರತ ಈ ತತ್ವದ ಅಡಿಯಲ್ಲಿ ನಾವೆಲ್ಲರೂ ಜಾತಿ, ಧರ್ಮ, ಲಿಂಗ ಮರೆತು ಭಾವೈಕ್ಯತೆಯಿಂದ ನಾವೆಲ್ಲರೂ ಭಾರತೀಯರು ಎಂಬ ಮನೋಭಾವನೆಯನ್ನು ಬೆಳಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಸಹಾಯಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸಿದ್ದಾರೂಢ, ದೇವಿದಾಸ್, ವೆಂಕಟೇಶ್ ಹಾಗೂ ಸಿಬ್ಬಂದಿಗಳು ಹಾಗೂ ಊರಿನ ಯುವಕರು , ಹಿರಿಯರು ರನ್ ಫಾರ್ ಯೂನಿಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆನಂದಪುರ ಪೊಲೀಸ್ ಠಾಣೆಯಿಂದ ರನ್ನಿಂಗ್ ಮಾಡುತ್ತಾ ಎಡೇಹಳ್ಳಿಹಳ್ಳಿ ಸರ್ಕಲ್ ವರೆಗೆ ತೆರಳಿ ಮತ್ತು ಮರಳಿ ಪೊಲೀಸ್ ಠಾಣೆಗೆ ವರೆಗೆ ರನ್ನಿಂಗ್ ಮಾಡಿದರು.

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t