ಮನೆ ಶಿವಮೊಗ್ಗ ನೂತನವಾಗಿ ಶಿಕಾರಿಪುರದಿಂದ ಆನಂದಪುರ ಮಾರ್ಗಕ್ಕೆ ಕೆ.ಎಸ್.ಆರ್.ಟಿ.ಸಿ ಬಿಡುಗಡೆ ಮಾಡಿದ ಶಾಸಕ ಗೋಪಾಲಕೃಷ್ಣ ಬೇಳೂರು….!!

ನೂತನವಾಗಿ ಶಿಕಾರಿಪುರದಿಂದ ಆನಂದಪುರ ಮಾರ್ಗಕ್ಕೆ ಕೆ.ಎಸ್.ಆರ್.ಟಿ.ಸಿ ಬಿಡುಗಡೆ ಮಾಡಿದ ಶಾಸಕ ಗೋಪಾಲಕೃಷ್ಣ ಬೇಳೂರು….!!

244
0

ಆನಂದಪುರ:

ಹಲವಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಬೇಡಿಕೆಯಂತೆ ನಾನು ಶಿಕಾರಿಪುರದಿಂದ ಆನಂದಪುರ ಮಾರ್ಗವಾಗಿ ನೂತನ ಕೆ.ಎಸ್.ಆರ್. ಟಿ. ಸಿ ಬಸ್ ಬಿಡುಗಡೆ ಮಾಡಿದ್ದೇನೆ ಎಂದು ಶಾಸಕರದ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ಇವರು ಆನಂದಪುರ ಸಮೀಪದ ಬೈರಾಪುರದಲ್ಲಿ ಶಿಕಾರಿಪುರದಿಂದ ಆನಂದಪುರ ಮಾರ್ಗವಾಗಿ ನೂತನ ಕೆ.ಎಸ್.ಆರ್.ಟಿ.ಸಿ ಬಸ್ ಚಾಲನೆ ನೀಡಿ ಮಾತನಾಡಿದರು.

ನಮ್ಮ ಸರ್ಕಾರ ಬಂದ ಮೇಲೆ ನಮ್ಮ ತಾಲೂಕಿಗೆ 9 ಹೊಸ ಬಸ್ ಗಳು ಬಂದಿವೆ ,ಆದರೆ ಹೋದ ಬಿಜೆಪಿ ಸರ್ಕಾರ ಇದ್ದಾಗ ತಾಲೂಕಿಗೆ ಒಂದು ಹೊಸ ಬಸ್ ಗಳು ಸಹ ಬಂದಿಲ್ಲ ಎಂದರು.

ಸರ್ಕಾರ ನಮ್ಮ ತಾಲೂಕಿಗೆ ನೂತನವಾಗಿ ಬಸ್ ಬಿಡುಗಡೆ ಮಾಡಿದ ಮೇಲೆ ನಾನು ಮೊದಲು ಜನಸಾಮಾನ್ಯರಿಗೆ ಅನುಕೂಲವಾಗಲೆಂದು ಮಣಿಪಾಲ್ ಹಾಗೂ ವೆನ್ ಲಾಕ್ ಆಸ್ಪತ್ರೆಗಳಿಗೆ ಹೋಗಲು ಬಸ್ ಬಿಟ್ಟಿದ್ದೇನೆ. ನಂತರ ಮಂತ್ರಾಲಯ ಕ್ಕೆ ಹಾಗೂ ತಾಲೂಕಿನ ಹಳ್ಳಿ ಹಳ್ಳಿಗಳಿಗೂ ಬಸ್ ಸೌಲಭ್ಯ ಕಲ್ಪಿಸುವಂತಹ ಕೆಲಸ ಮಾಡುತ್ತಿದ್ದೇನೆ.

ಶಕ್ತಿ ಯೋಜನೆ ಬಗ್ಗೆ ಬಹಳಷ್ಟು ಟೀಕೆ ಟಿಪ್ಪಣಿಗಳು ಹಲವಾರು ಜನ ಮಾಡಿದ್ದಾರೆ ಆದರೆ ಇದರ ಅನುಕೂಲವನ್ನು ಗ್ರಾಮೀಣ ಭಾಗದ ಬಡ ಮಹಿಳೆಯರು ಪಡೆದುಕೊಳ್ಳುತ್ತಿರುವುದು ಸಂತೋಷದಾಯಕವಾಗಿದೆ ಎಂದು ತಿಳಿಸಿದರು.

ಮಂತ್ರಿಗಳಾದ ರಾಮಲಿಂಗ ರೆಡ್ಡಿ ರವರು ಮುಂದಿನ ದಿನಗಳಲ್ಲಿ ನಮ್ಮ ತಾಲೂಕಿಗೆ 10 ಹೊಸ ಬಸ್ ಹಾಗೂ 2 ನಗರ ಸಂಚಾರಕ್ಕಾಗಿ ಬಸ್ ಕೊಡುವುದಾಗಿ ತಿಳಿಸಿದ್ದು ಮತ್ತು ಸಾಗರ ಕೆ.ಎಸ್.ಆರ್‌.ಟಿ.ಸಿ ಬಸ್ ನಿಲ್ದಾಣ ಹೊಸದಾಗಿ ನವೀಕರಣ ಮಾಡಲು 4 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದಾರೆ ಎಂದು ತಿಳಿಸಿದರು.

ಹಳೆ ನೆನಪು ಮರುಕಳಿಸುತ್ತಿದೆ ಬೇಳೂರು:

ಶಾಸಕ ಗೋಪಾಲಕೃಷ್ಣ ಬೇಳೂರು ಬೈರಾಪುರದಲ್ಲಿ ಚಾಲನೆ ನೀಡಿದ ಬಸ್ಸಿನಲ್ಲಿಯೇ ಆನಂದಪುರಕ್ಕೆ ಹೋಗುವಾಗ ,ನನಗೆ ಈ ಬಸ್ಸಿನ ಪ್ರಯಾಣ ನನ್ನ ಹಳೆಯ ನೆನಪುಗಳನ್ನೆಲ್ಲ ಮರುಕಳಿಸುತ್ತಿದೆ. ನಾನು ಇದೆ ಕೆಂಪು ಬಸ್ ಹತ್ತಿ ಉದ್ಯೋಗಕ್ಕಾಗಿ ಮೊದಲ ಬಾರಿಗೆ ಬೆಂಗಳೂರಿಗೆ ಹೋಗಿದ ನೆನಪು ಈಗ ನನ್ನ ಕಣ್ಣ ಮುಂದೆ ಬರುತ್ತಿದೆ ಎಂದು ಹಳೆಯ ನೆನಪುಗಳನ್ನೆಲ್ಲ ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರೇಣುಕಾ ಮರಿಯಪ್ಪ, ಸದಸ್ಯರಾದ ಗಂಗಮ್ಮ, ಮಂಜುನಾಥ್ ದಾಸನ್, ವಿಟ್ಟಲ್ ಕೆ,ಶೇಖರಪ್ಪ , ಹಾಗೂ ಪ್ರಮುಖರಾದ ಸೋಮಶೇಖರ್ ಲಾವಿಗೆರೆ, ಚೇತನ್ ರಾಜ್ ಕಣ್ಣೂರ್ , ಗಣಪತಿ ಮಂಡಗಳಲೆ, ಶರತ್ ನಾಗಪ್ಪ ,ಗಜೇಂದ್ರ ಯಾದವ್,ಉಮೇಶ್, ರಮಾನಂದ ,ಷಣ್ಮುಖ ,ಮಂಜುನಾಥ್, ರೆಹಮತ್ತುಲ್ಲಾ , ಎಂ ಎಲ್ ಈಶ್ವರ,ಸುರೇಶ್ ದೊಡ್ಡ ಬ್ಯಾಣ,ಉಮಾಪತಿ ಕೆಎಚ್ ,ಶೇಖರಪ್ಪ ಇನ್ನಿತರರು ಉಸ್ಥಿತರಿದ್ದರು.

ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t