ಮನೆ ಶಿವಮೊಗ್ಗ ಪಿ.ಎಸ್.ಐ ಪ್ರವೀಣ್ ನೇತೃತ್ವದಲ್ಲಿ ಇಬ್ಬರು ಗಾಂಜ ಆರೋಪಿಗಳ ಬಂಧನ….!!!

ಪಿ.ಎಸ್.ಐ ಪ್ರವೀಣ್ ನೇತೃತ್ವದಲ್ಲಿ ಇಬ್ಬರು ಗಾಂಜ ಆರೋಪಿಗಳ ಬಂಧನ….!!!

141
0

ಆನಂದಪುರ ಪೊಲೀಸ್ ಠಾಣೆಯ ಪಿ. ಎಸ್.ಐ ಪ್ರವೀಣ್ ನೇತೃತ್ವದಲ್ಲಿ ಗಾಂಜಾ ಸೇವನೆ ಮಾಡಿದ ಆರೋಪಿ ಗಳ ಬಂಧನ ಮಾಡಲಾಗಿದೆ.

ಶುಕ್ರವಾರ ಸಂಜೆ ಸಿದ್ದೇಶ್ವರ ಕಾಲೋನಿಯಲ್ಲಿ ಇಬ್ಬರು ವ್ಯಕ್ತಿಗಳು ಯಾವುದೋ ಮಾದಕ ವಸ್ತುಗಳನ್ನು ಸೇವಿಸಿ ಅನುಚಿತವಾಗಿ ವರ್ತಿಸುತ್ತಿದ್ದನ್ನು ಕಂಡು ಬಂದಿದ್ದು ಅನುಮಾನಾಸ್ಪದ ದಿಂದ ಪಿ.ಎಸ್.ಎ ಪ್ರವೀಣ್ ತಮ್ಮ ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು.

ವೈದ್ಯಕೀಯ ಪರೀಕ್ಷೆಯ ನಂತರ ಇಬ್ಬರು ಆರೋಪಿಗಳು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದ್ದು ಆರೋಪಿಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಇಬ್ಬರು ಆರೋಪಿಗಳು ಆನಂದಪುರದ ಸುತ್ತಮುತ್ತಲಿನವರು ಎಂದು ತಿಳಿದು ಬಂದಿದೆ.

ಆನಂದಪುರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದ್ದು ಈ ದಾಳಿಯಲ್ಲಿ ಸಿಬ್ಬಂದಿಗಳಾದ ಉಮೇಶ್,ಪ್ರಶಾಂತ್,ಸಂತೋಷ್ ಪಾಲ್ಗೊಂಡಿದ್ದರು.

ಖಡಕ್ಕಾಗಿ ತಿಳಿಸಿದ ಪಿ.ಎಸ್.ಐ ಪ್ರವೀಣ್:

ಆನಂದಪುರ ಸುತ್ತಮುತ್ತಲಿನಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನದಾಗಿ ಗಾಂಜಾ ಪ್ರಕರಣವು ಮುನ್ನೆಲೆಗೆ ಬರುತ್ತಿದ್ದು ಅದರಲ್ಲಿ ಬಹುಪಾಲು ಯುವಕರು ಪಾಲ್ಗೊಂಡಿದ್ದಾರೆಂದು ಪೂರ್ಣ ಮಾಹಿತಿ ನಮ್ಮಲ್ಲಿ ಇದೆ. ಸದ್ಯದಲ್ಲೇ ಅಂಥವರನ್ನು ನಮ್ಮ ವಶಕ್ಕೆ ಪಡೆದುಕೊಳ್ಳುತ್ತೇವೆ ಎಂದು ಖಡಕ್ಕಾಗಿ ಪಿ.ಎಸ್.ಐ ಪ್ರವೀಣ್ ತಿಳಿಸಿದರು.

ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲಿ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t