ಮನೆ Blog ಪ್ರತಿಭಾ ಕಾರಂಜಿಯಲ್ಲಿ ಸಮಗ್ರ ಪ್ರಶಸ್ತಿ ಕೈಗೆತ್ತಿಕೊಂಡ ಕೆಪಿಎಸ್..!!

ಪ್ರತಿಭಾ ಕಾರಂಜಿಯಲ್ಲಿ ಸಮಗ್ರ ಪ್ರಶಸ್ತಿ ಕೈಗೆತ್ತಿಕೊಂಡ ಕೆಪಿಎಸ್..!!

94
0

 ಆನಂದಪುರ :- ಇಲ್ಲಿಗೆ ಸಮೀಪದ  ಹೊಸಗುಂದ   ಸರ್ಕಾರಿ ಶಾಲೆಯಲ್ಲಿ ನಡೆದ ಪ್ರಾರ್ಥಮಿಕ ಮತ್ತು ಮಾಧ್ಯಮಿಕ   ಶಾಲೆಯ ವಿದ್ಯಾರ್ಥಿಗಳಿಗೆ ನಡೆದ ಆನಂದಪುರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ  ಸ್ಥಳಿಯ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಿಗೆ ನಡೆದ  ದೇಶಭಕ್ತಿ ಗೀತೆ, ಅಭಿನಯ ಗೀತೆ ,ಉರ್ದು ಧಾರ್ಮಿಕ ಪಠಣ, ಸಂಸ್ಕೃತ ಪಠಣ, ಇಂಗ್ಲಿಷ್ ಕಂಠಪಾಠ, ಆಶುಭಾಷಣ, ಕ್ಲೇ ಮಾಡಲಿಂಗ್, ಕಥೆ ಹೇಳುವುದು, ಭಕ್ತಿ ಗೀತೆ  ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. 

ಹಾಗೆ ಮಾಧ್ಯಮಿಕ ಭಾಗದ ವಿದ್ಯಾರ್ಥಿಗಳು  ಪ್ರಬಂಧ ಸ್ಪರ್ಧೆ, ಕವನ ವಾಚನ, ಕ್ಲೇ ಮಾಡಲಿಂಗ್ , ದೇಶಭಕ್ತಿ ಗೀತೆ, ಚಿತ್ರಕಲೆ, ಆಶುಭಾಷಣ, ಭಕ್ತಿ ಗೀತೆ, ಕನ್ನಡ ಕಂಠಪಾಠ, ಸಂಸ್ಕೃತ ಪಠಣ, ಕಥೆ ಹೇಳುವುದು, ಅಭಿನಯ ಗೀತೆ ಸೇರಿದಂತೆ   ಎಲ್ಲಾ ಸ್ಪರ್ಧೆಯಗಳಲ್ಲೂ ಪ್ರಥಮ ಮತ್ತು ದ್ವಿತೀಯ ಸ್ಥಾನವನ್ನು ಪಡೆಯುವುದರ ಮೂಲಕ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ  ಸಮಗ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. 

ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಕಿಯರು, ಶಿಕ್ಷಕರು,  ಪ್ರಾಂಶುಪಾಲ ರವಿಶಂಕರ್, ಉಪರಾಚಾರ್ಯ ಈಶ್ವರಪ್ಪ, ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರಾದ  ಉಮೇಶ್, ಜಗನ್ನಾಥ್, ಬಿಡಿ  ರವಿಕುಮಾರ್, ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t