ಮನೆ ಶಿವಮೊಗ್ಗ ಪ್ರಾಮಾಣಿಕತೆಯಿಂದ ದುಡಿದರೆ ದೇವರ ಅನುಗ್ರಹ ಲಭಿಸುತ್ತದೆ : ಉಡುಪಿ ಪೇಜಾವರ ಶ್ರೀಗಳು..!!

ಪ್ರಾಮಾಣಿಕತೆಯಿಂದ ದುಡಿದರೆ ದೇವರ ಅನುಗ್ರಹ ಲಭಿಸುತ್ತದೆ : ಉಡುಪಿ ಪೇಜಾವರ ಶ್ರೀಗಳು..!!

43
0
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.44444445, 0.47287515);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 41;

ಆನಂದಪುರ:ನಾವು ಮಾಡುವ ವೃತ್ತಿಯಲ್ಲಿ ಮೋಸ ,ಕಪಟ, ವಂಚನೆಯನ್ನು ಮಾಡದೆ ಪ್ರಾಮಾಣಿಕತೆಯಿಂದ ದುಡಿದರೆ ಭಗವಂತನ ಅನುಗ್ರಹ ಆಗುತ್ತದೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.

ಇವರು ಸಮೀಪ ದ ಮುರುಘಾ ಮಠದ ಕಾರ್ತಿಕ ದೀಪೊತ್ಸವ ಕಾರ್ಯಕ್ರಮದ ಭಾವೈಕ್ಯತ ಸಮ್ಮೇಳನ ಉದ್ಘಾಟನೆ ಮಾಡಿ ಮಾತನಾಡಿದರು.

ಭಗವಂತನನ್ನು ಹುಡುಕಿಕೊಂಡು ಅಲ್ಲಿ ಇಲ್ಲಿ ಹೋಗುತ್ತೀರಾ ಆದರೆ ಭಗವಂತ ಪ್ರತಿಯೊಬ್ಬ ಮನುಷ್ಯನ ಹೃದಯದಲ್ಲು ನೆಲೆಸಿರುತ್ತಾನೆ.ಆದರೆ ಹೃದಯವನ್ನು ನಾವು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಅಷ್ಟೇ ಎಂದರು.

ನಾವೆಲ್ಲರೂ ಅಜ್ಞಾನ ಎಂಬ ಕತ್ತಲಿನಿಂದ ಹೊರಬಂದು ಒಳ್ಳೆಯ ರೀತಿಯಲ್ಲಿ ಪ್ರಯತ್ನ ಪಡುತ್ತಿದ್ದರೆ ದೇವರ ಅನುಗ್ರಹ ಆಗೆ ಆಗುತ್ತದೆ ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಡಾ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು ಮಾತನಾಡಿ ಹಣವಿದ್ದಾಗ, ಶಕ್ತಿ ಇದ್ದಾಗ ದಾನ ,ಧರ್ಮ ಮಾಡಿ ಬದುಕಿನಲ್ಲಿ ಮುಕ್ತಿ ಹೊಂದಿ ಮಾನವ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳಿ ಎಂದರು.

ಮಾನವ ಜನ್ಮ ಸಿಗುವುದು ಅಪರೂಪ ಇದರಿಂದ ಬದುಕನ್ನು ಪ್ರೀತಿಸಿ, ಗೌರವಿಸಿ.ಜಾತಿ, ಧರ್ಮ, ಲಿಂಗಗಳಿಂದ ಹೊರಬಂದು ಮನುಷ್ಯ ಮನುಷ್ಯರಂತೆ ಬದುಕುವುದನ್ನು ಕಲಿಯಿರಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿಶೇಷವಾಗಿ ಬೆಂಗಳೂರಿನ ಏರ್ ಅಂಬ್ಯುಲೆನ್ಸ್ ಸಂಸ್ಥೆಯ ಮುಖ್ಯಸ್ಥೆ ಶಾಲಿನಿ ನಾಲ್ವಾಡ್ ಗೆ ಈ ವರ್ಷದ ಕೆಳದಿ ರಾಣಿ ಚೆನ್ನಮ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸೇವಾ ರತ್ನ ಪ್ರಶಸ್ತಿ ಸಮರ್ಪಣೆ:

ಸಾಗರ ಕಾರ್ಯ ನಿರತ ಪತ್ರಕರ್ತ ಸಂಘದ ಅಧ್ಯಕ್ಷ ಜಿ.ನಾಗೇಶ್,ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೊಣಂದೂರು ಲಿಂಗಪ್ಪ , ಹಿರಿಯ ವಕೀಲ ಎಂ.ಜಿ.ಪುಟ್ಟಸ್ವಾಮಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಗುರು ರಕ್ಷೆ ಸಮರ್ಪಣೆ:

ಸಾಗರ ಕ.ಸಾ.ಪ ಅಧ್ಯಕ್ಷ ವಿ.ಟಿ ಸ್ವಾಮಿ,ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಟಾಕಪ್ಪ, ಲಿಂಗಸ್ವಾಮಿಗೌಡ್ರು, ಪ್ರಾಧ್ಯಾಪಕ ಸುಜಯ್ ಆಲವಳ್ಳಿ, ನಿವೃತ್ತ ನೌಕರ ಶೇಖರಯ್ಯ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಕೆ ಬಿ ದಾನೇಶ್, ಉದ್ಯಮಿ ಶಿಲ್ಪಾ ಪಾಟೀಲ್, ಸುಭಾಷ್ ಕೌತಳ್ಳ ರವರಿಗೆ ವೇದಿಕೆಯಲ್ಲಿ ಗುರುರಕ್ಷೆ ಸಮರ್ಪಣೆಯನ್ನು ಮಾಡಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಡಿಎಸ್ ಅರುಣ್, ಡಾ.ಧನಂಜಯ್ ಸರ್ಜಿ, ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್ ಸಿ ಜಗದೀಶ್, ಜಾತ್ರಾ ಸಮಿತಿ ಅಧ್ಯಕ್ಷ ವಿಜಯಕುಮಾರ್ ಆಚಾಪುರ ಮತ್ತು ವಿವಿಧ ಮಠದ ಗುರುಗಳು ಉಪಸ್ಥಿತರಿದ್ದರು.

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಾಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t