
ಶಿವಮೊಗ್ಗ: ವೈಯಕ್ತಿಕ ದ್ವೇಷಕ್ಕೆ ಚಿಕನ್ ಅಂಗಡಿ ಮಾಲೀಕನ ಮೇಲೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಲಾದ ಪ್ರಕರಣ ವಿನೋಬನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಈ ಘಟನೆ ಸೋಮಿನಕೊಪ್ಪ ಸರ್ಕಲ್‌ನಲ್ಲಿ ಸಂಭವಿಸಿದ್ದು,ಚಿಕನ್ ಅಂಗಡಿ ಮಾಲೀಕ ಜೀಶಾನ್ ಕಿವಿ, ಎಡಗೈಗೆ ಬೆಂಕಿಯಿಂದ ಸುಟ್ಟ ಗಾಯವಾಗಿದೆ ಎಂದು ಆರೋಪಿಸುದ್ದಾರೆ.
ಚಿಕನ್ ಅಂಗಡಿ ಬಳಿ ಬಂದಿದ್ದ ವಸೀಂ ಎಂಬಾತ ಜೀಶಾನ್‌ಗೆ ಅವಾಚ್ಯವಾಗಿ ನಿಂದಿಸಿದ್ದ. ಬಳಿಕ ಪ್ಲಾಸ್ಟಿಕ್ ಕವರ್‌ನಲ್ಲಿ ತಂದಿದ್ದ ಪೆಟ್ರೋಲ್ ಜೀಶಾನ್ ಮೈ ಮೇಲೆ ಎಸೆದು ಬೆಂಕಿ ಹಚ್ಚಿ ಓಡಿ ಹೋಗಿದ್ದಾನೆ ಎಂದು ಆರೋಪಿಸಲಾಗಿದೆ.

ಕೂಡಲೆ ಸ್ಥಳೀಯರು ಜೀಶಾನ್‌ನನ್ನು ರಕ್ಷಿಸಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ;https://chat.whatsapp.com/CnYYumPSez6AMYyw8cHG9A?mode=ac_t








