ಮನೆ Blog ಬಡವರ ಬಿಪಿಎಲ್ ಕಾರ್ಡ್ ರದ್ದುಪಡಿಸುತ್ತಿರುವ ಬಗ್ಗೆ ಮುಖ್ಯಮಂತ್ರಿ ಗೆ ಪತ್ರ ಬರೆದ ಆನಂದ್ ಹರಟೆ..!!

ಬಡವರ ಬಿಪಿಎಲ್ ಕಾರ್ಡ್ ರದ್ದುಪಡಿಸುತ್ತಿರುವ ಬಗ್ಗೆ ಮುಖ್ಯಮಂತ್ರಿ ಗೆ ಪತ್ರ ಬರೆದ ಆನಂದ್ ಹರಟೆ..!!

204
0

ಆನಂದಪುರ:

ಬಡವರ ಬಿಪಿಎಲ್ ಕಾರ್ಡ್ ರದ್ದುಪಡಿಸುತ್ತಿರುವುದನ್ನು ಕುರಿತು ಮುಖ್ಯ ಮಂತ್ರಿಗೆ ಪತ್ರ ಬರೆದ ಹೊಸೂರು ಗ್ರಾಂ.ಪಂ ಸದಸ್ಯ ಆನಂದ್ ಹರಟೆ.

ಇನ್ಕಮ್ ಟ್ಯಾಕ್ಸ್ ಫೈಲ್ ಮಾಡಿದ ಫಲಾನುಭವಿಗಳ ರೇಷನ್ ಕಾರ್ಡ್ ರದ್ದು ಪಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆದೇಶಿದ್ದು ಆದರೆ ನಿರ್ಗತಿಕ ಬಡವರು ಸ್ವಂತ ಸೂರು ಹೊಂದಲು ಮನೆ ನಿರ್ಮಿಸಲು , ಮಕ್ಕಳ ಮದುವೆ ಮಾಡಲು ,ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಾಗೂ ಆರೋಗ್ಯ ಸಮಸ್ಯೆ ಬಂದರೂ ಕೂಡಾ ಹಣ ಹೊಂದಿಸಲು ಕಷ್ಟವಾದ ಸಮಯದಲ್ಲಿ ಬ್ಯಾಂಕಿನಲ್ಲಿ ಸಾಲ ಪಡೆಯಲು ಹೋದ ಸಂದರ್ಭದಲ್ಲಿ ಇನ್ಕಮ್ ಟ್ಯಾಕ್ಸ್‌ ಫೈಲ್ಸ್ ಮಾಡಿ ತರಲು ಸೂಚಿಸಿರುತ್ತಾರೆ.

ಆ ಉದ್ದೇಶದಿಂದ ಇತ್ತೀಚಿನ ದಿನಗಳಲ್ಲಿ ಬಡವರೂ ಸಹ ಇನ್ಕಮ್ ಟ್ಯಾಕ್ಸ್ ಫೈಲ್ ಮಾಡಿ ಬ್ಯಾಂಕಿನಲ್ಲಿ ಸಾಲ ಪಡೆಯುವುದು ಸರ್ವೆ ಸಾಮಾನ್ಯವಾಗಿದೆ.

ಆದರೆ ಇಂಥ ಸಾಲ ಪಡೆದಂತಹ ಬಡವರ ರೇಷನ್ ಕಾರ್ಡ್ ರದ್ದು ಪಡಿಸಲು ಮುಖ್ಯಮಂತ್ರಿಗಳು ಆದೇಶಸಿದ್ದು ಇದರಿಂದಾಗಿ ಬಡವರು ಬಿಪಿಎಲ್ ಕಾರ್ಡ್ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ.

ಹಾಗಾಗಿ ದಯವಿಟ್ಟು ಇಂತಹ ಫಲಾನುಭವಿಗಳ ಮರು ಪರಿಶೀಲನೆ ಮಾಡಿ ಬಡವರಿಗೆ ಬಿಪಿಎಲ್ ಕಾರ್ಡ್ ಸೌಲಭ್ಯವನ್ನು ಒದಗಿಸಿ ಬಡವರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಪತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿಯನ್ನು ಮಾಡಿದ್ದಾರೆ.

ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t