ಆನಂದಪುರ:ಬಿಜೆಪಿಯ ಪುಂಡರುಗಳು ಯಾವಾಗ ಆರ್. ಎಸ್ .ಎಸ್ .ನ ಚಡ್ಡಿ ,ಪ್ಯಾಂಟು ಧರಿಸಲು ಮುಂದಾದರು ಅಂದಿನಿಂದ ಹಾಳಾಗಿ ಹೋಯಿತು ಎಂದು ಶಾಸಕರಾದ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಇವರು ಇಂದು ಆನಂದಪುರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಮೊದಲಿದ್ದ ಆರ್, ಎಸ್, ಎಸ್, ಸಂಘಟನೆ ಬಹಳ ಚೆನ್ನಾಗಿ ಇತ್ತು ಆದರೆ ಈಗ ಬಿಜೆಪಿಯ ಪುಂಡರುಗಳು, ಕಾಮುಕರು, ರೌಡಿಗಳು ಪ್ಯಾಂಟ್, ಚಡ್ಡಿ ಧರಿಸಲು ಮುಂದಾದ ಮೇಲೆ ಹಾಳಾಗಿ ಹೋಯಿತು.
ಸಾಗರದಲ್ಲಿ ಮಸೀದಿ ಮುಂಭಾಗನೇ ಆರ್ ,ಎಸ್ ,ಎಸ್ ,ಪಥಸಂಚಲನ್ನು ಮಾಡಬೇಕು ಎಂದರು ನಾನು ಅನುಮತಿ ಕೊಡಲು ತಿಳಿಸಿದ್ದೆ ನನಗೆ ಇದರ ಬಗ್ಗೆ ಏನು ಅಭ್ಯಂತರವಿಲ್ಲ.
ಯಾವುದೇ ಕಾರ್ಯಕ್ರಮ ಮಾಡಲಿಕ್ಕಾದರೂ ಅನುಮತಿಯನ್ನು ಪಡೆಯಬೇಕು ಆದರೆ ಆರ್ ಎಸ್ ಎಸ್ ನವರು ಅನುಮತಿ ಪಡೆಯುತ್ತಿಲ್ಲದಿರುವುದು ತಪ್ಪು .ಪಡೆಯಿರಿ ಎಂದು ಪ್ರಿಯಾಂಕ ಖರ್ಗೆ ಹೇಳಿದ ಮೇಲೆ ಇದರ ವಿರುದ್ಧ ಘರ್ಷಣೆ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದರು.

ನವೆಂಬರ್ ತಿಂಗಳಲ್ಲಿ ನಡೆಯುವುದು ಕ್ರಾಂತಿ ಅಲ್ಲ, ಶಾಂತಿಯುತವಾಗಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ನಾಯಕರು ತೀರ್ಮಾನ ಮಾಡಿ ಸಂಪುಟವನ್ನು ಪುನರ್ ರಚನೆ ಮಾಡುತ್ತಾರೆ.
ಸಂಪುಟ ಪುನರ್ ರಚನೆ ಸಂದರ್ಭದಲ್ಲಿ ಎಲ್ಲರೂ ಕೂಡ ಆಕಾಂಕ್ಷಿಗಳಾಗಿದ್ದು ನಾನು ಕೂಡ ಆಕಾಂಕ್ಷಿಯಾಗಿದ್ದಾನೆ. ಕೊಡುವುದು ಬಿಡುವುದು ವರಿಷ್ಠರ ತೀರ್ಮಾನವಾಗಿದೆ ಎಂದು ಹೇಳಿದರು.
ಪಂಪ್ಡ್ ಸ್ಟೋರೇಜ್ ಯೋಜನೆ ಬಿಜೆಪಿ ಕಾಲಾವಧಿಯಲ್ಲಿಯೇ ಯೋಜನೆ ರೂಪಿಸಲಾಗಿದೆ. ಬಿಜೆಪಿ ಸಂಸದರು ಇದರ ಬಗ್ಗೆ ತೀರ್ಮಾನ ಮಾಡಬೇಕಾಗಿದೆ. ಅವರೇ ರೂಪಿಸಿದಂತ ಯೋಜನೆಗೆ ವಿರೋಧ ಮಾಡುವುದು ಸರಿಯಲ್ಲ. ಕೇಂದ್ರದಲ್ಲಿ ಅವರದೇ ಸರ್ಕಾರವಿದ್ದು ಯೋಜನೆ ನಿಲ್ಲಿಸುವುದಾದರೆ ನಿಲ್ಲಿಸಲಿ ಇದಕ್ಕೆ ನನ್ನದೇನೂ ಅಭ್ಯಂತರವಿಲ್ಲ.

ಸಾಗರದಿಂದ ಶಿವಮೊಗ್ಗಕ್ಕೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲು ನೂರಾರು ಎಕರೆ ಅರಣ್ಯ ಜಾಗ ನಾಶವಾಗುತ್ತಿದೆ. ಈ ಯೋಜನೆಯನ್ನು ಯಾರು ಸಹ ವಿರೋಧ ಮಾಡುತ್ತಿಲ್ಲ. ಇದಕ್ಕೆ ರೈತ ಸಂಘ ಪರಿಸರವಾದಿಗಳು ಹೋರಾಟ ಮಾಡುತ್ತಿಲ್ಲ ಎಂಬುದು ಬೇಸರ ಸಂಗತಿಯಾಗಿದೆ.
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಗೆ ತರುತ್ತಿರುವುದು ದುಡ್ಡು ಹೊಡಿಯೋ ಉದ್ದೇಶದಿಂದ ಎನ್ನುವ ಮಾಜಿ ಶಾಸಕರು ಹಾಗಾದರೆ ಸಿಗಂದೂರು ಸೇತುವೆ ಮತ್ತು ಇನ್ನಿತರ ಯೋಜನೆಗಳು ಬಿಜೆಪಿಯವರು ದುಡ್ಡು ಹೊಡೆಯಲು ತಂದಿರುವ ಯೋಜನೆಗಳ ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t









